newsfirstkannada.com

ಸದನದಲ್ಲಿ ಸಿದ್ದು ಸರ್ಕಾರದ ಐದು ಗ್ಯಾರಂಟಿಗಳನ್ನು ಹಾಡಿಹೊಗಳಿದ ಕರ್ನಾಟಕ ಗವರ್ನರ್​​; ಏನಂದ್ರು?

Share :

Published July 3, 2023 at 8:20pm

Update July 3, 2023 at 8:46pm

    ಯುಪಿ, ಗುಜರಾತ್​​​ಗೆ ಪರ್ಯಾಯ ಕರ್ನಾಟಕ ಮಾದರಿ!

    ಕುವೆಂಪು ಕಂಡ ಕನಸಿನ ಶಾಂತಿಯ ತೋಟ ಪ್ರಸ್ತಾಪ

    5 ಗ್ಯಾರಂಟಿಗಳನ್ನು ಹೊಗಳಿದ ಕರ್ನಾಟಕ ಗವರ್ನರ್​​

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭ ಆಗಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ರು. ಸರ್ವ ಜನಾಂಗದ ಶಾಂತಿಯ ತೋಟ ಅನ್ನೋ ಕಾಂಗ್ರೆಸ್‌ ಸರ್ಕಾರದ ಘೋಷವಾಕ್ಯವನ್ನ ಪ್ರಸ್ತಾಪಿಸಿದ ರಾಜ್ಯಪಾಲರು, 5 ಗ್ಯಾರಂಟಿಗಳನ್ನ ಜಾರಿ ಮಾಡುವುದಾಗಿ ಹೇಳಿದ್ದಾರೆ. ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಅಂತ ಹೇಳಿದ್ದು ಸದ್ಯ ಚರ್ಚೆಗೆ ಕಾರಣ ಆಗಿದೆ.

16ನೇ ವಿಧಾನಸಭೆ ಚೊಚ್ಚಲ ಅಧಿವೇಶನ ಇವತ್ತಿನಿಂದ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಗೆ ರಾಜಭವನದಿಂದ ಆಗಮಿಸಿದ ರಾಜ್ಯಪಾಲರನ್ನ ವಿಧಾನಸಭಾ ಅಧ್ಯಕ್ಷರು, ಪರಿಷತ್​ನ ಸಭಾಪತಿ, ಸಿಎಂ ಸಿದ್ದು ಸಂಪುಟ ಅದ್ದೂರಿಯಾಗಿ ಬರಮಾಡಿಕೊಂಡಿದೆ. ವಿಧಾನಸೌಧದ ಗ್ರ್ಯಾಂಡ್​​ ಸ್ಟೆಪ್​ಗಳಿಂದ ವಿಧಾನಸಭೆ ಸಭಾಂಗಣವರೆಗೂ ಕೆಂಪು ಹಾಸಿನ ಸ್ವಾಗತ ಕೋರಲಾಯ್ತು. ಬಳಿಕ ವಿಧಾನಸಭೆ ಸಭಾಂಗಣದಲ್ಲಿ ರಾಜ್ಯಪಾಲ ಗೆಹಲೋತ್​​​ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ರು.

ಈ ವೇಳೆ, ನೂತನ ಸರ್ಕಾರದ ಮುನ್ನೋಟ ತೆರೆದಿಟ್ಟ ರಾಜ್ಯಪಾಲರು, ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ರು. ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ‌ ಆಡಳಿತ ಮಾದರಿಯೊಂದನ್ನ ದೇಶಕ್ಕೆ ಪರಿಚಯಿಸಲಿದೆ ಅಂತ ಗೆಹಲೋತ್ ಭರವಸೆ ನೀಡಿದ್ರು.

ಕುವೆಂಪು ಕಂಡ ಕನಸಿನ ಶಾಂತಿಯ ತೋಟ ಪ್ರಸ್ತಾಪ

ಕಳೆದ ಒಂದು ವರ್ಷದಿಂದ ಧರ್ಮ ದಂಗಲ್​ನಿಂದ ತೀವ್ರ ಅಸಹನೆ ಸೃಷ್ಟಿಸಿದ್ದ ರಾಜ್ಯದಲ್ಲಿ ಶಾಂತಿಯ ತೋಟದ ಆಶ್ವಾಸನೆ ಭಾಷಣದಲ್ಲಿ ವ್ಯಕ್ತವಾಗಿದೆ. ಶಾಂತಿಯುತ, ಸಮೃದ್ಧ, ಸೌಹಾರ್ದಯುತ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಲು ಬದ್ಧ ಅಂತ ಹೇಳಿದ್ದಾರೆ. ಎಲ್ಲರನ್ನೂ ಒಳಗೊಂಡು ಇವ ನಮ್ಮವ ಎಂದು ಕೂಡಿ ಬಾಳುವ ಬಸವಣ್ಣನವರ ಹಿತವಚನ ನೆನೆದ್ರು.
ರಾಜ್ಯವನ್ನ ಆರ್ಥಿಕ‌ ಸಂಕಟದ ಸ್ಥಿತಿಯಿಂದ ಮೇಲೆತ್ತುವುದು ‌ಸರ್ಕಾರದ ಆದ್ಯತೆ ಎಂದ್ರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನ ಭಾಷಣದಲ್ಲಿ ಪ್ರಸ್ತಾಪಿಸಿದ ರಾಜ್ಯಪಾಲರು, ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಜನರ ಬದುಕು ಸುಧಾರಣೆ ಆಗಲಿದೆ ಎಂದ್ರು. ಅನ್ನಭಾಗ್ಯ ಯೋಜನೆಗೆ ಅಕ್ಕಿಯ ಕೊರತೆ ಒಪ್ಪಿಕೊಂಡ ಸರ್ಕಾರ, ಧನಭಾಗ್ಯ ಪ್ರಸ್ತಾಪಿಸಿದೆ. ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರ ಅಂತ ರಾಜ್ಯಪಾಲರ ಮೂಲಕ ಸರ್ಕಾರ ಹೇಳಿಸಿದೆ.

‘ರಾಜ್ಯ ಸರ್ಕಾರ ಐಸಿಯುಗೆ ಹೋಗುವ ಕಾಲ ಬರಲಿದೆ’

ಬಿಜೆಪಿ ನಾಯಕನಿಲ್ಲದ ಕಾರಣ, ಮಾಜಿ ಸಿಎಂ ಕುಮಾರಸ್ವಾಮಿ ನೈಜ ವಿಪಕ್ಷ ನಾಯಕನ ಸ್ಥಾನ ನಿಭಾಯಿಸಿದ್ರು. ರಾಜ್ಯದ ಆರ್ಥಿಕ ಪರಿಸ್ಥಿತಿ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ ಹೆಚ್​ಡಿಕೆ, ರಾಜ್ಯಪಾಲರ ಭಾಷಣ ನೋಡಿದ್ರೆ, ಸರ್ಕಾರ ಐಸಿಯುಗೆ ಹೋಗುವ ಕಾಲ ಬರಲಿದೆ ಅಂತ ಟೀಕಿಸಿದ್ರು. ಅಲ್ಲದೆ, ಆಡಳಿತ ಪಕ್ಷದ ಯಾವ ಶಾಸಕರು ಮೇಜು ಕುಟ್ಟಿದ್ದು ನೋಡ್ಲಿಲ್ಲ ಅಂತ ವ್ಯಂಗ್ಯದ ಚಾಟಿ ಬೀಸಿದ್ರು.

ಒಟ್ಟಾರೆ, ಇವತ್ತಿನಿಂದ 10 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು, ನಾಳೆಯಿಂದ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಶುಕ್ರವಾರ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್​​ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಇತ್ತ, ವಿಪಕ್ಷ ಸಾಲಿನಲ್ಲಿ ಬಿಎಸ್​ವೈ, ಈಶ್ವರಪ್ಪ, ಸಿ.ಟಿ ರವಿ ಸೇರಿ ಹಲವು ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪ್ರಬಲ ವಾಗ್ಮಿಗಳಿಲ್ಲದ ಕಾರಣ ಮಾತಿನ ಮನೆಗೆ ಕಳೆಯೇ ಇಲ್ಲದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದನದಲ್ಲಿ ಸಿದ್ದು ಸರ್ಕಾರದ ಐದು ಗ್ಯಾರಂಟಿಗಳನ್ನು ಹಾಡಿಹೊಗಳಿದ ಕರ್ನಾಟಕ ಗವರ್ನರ್​​; ಏನಂದ್ರು?

https://newsfirstlive.com/wp-content/uploads/2023/07/Karnataka-Governor.jpg

Load More