newsfirstkannada.com

ಕರೆಂಟ್​​ ಹರಿಸಿ, ತುಂಡು ತುಂಡಾಗಿ ಕತ್ತರಿಸಿದ್ರಂತೆ ಹಂತಕರು.. ಜೈನ ಮುನಿಯ ಕೊಲೆ ಸತ್ಯ ಬಿಚ್ಚಿಟ್ಟ ಭಕ್ತರು

Share :

08-07-2023

    ಜೈನಮುನಿಗೆ ಕರೆಂಟ್​​ ಸಾಕ್​ ನೀಡಿದ್ದ ಹಂತಕರು

    ದೇಹವನ್ನ ಪೀಸ್​ ಪೀಸ್​​ ಮಾಡಿದ್ರು ಕ್ರೂರಿಗಳು

    ಅಷ್ಟಕ್ಕೂ ಕಾಮುಕ‌ನಂದಿ ಮುನಿಶ್ರೀ ಮಾಡಿದ ತಪ್ಪೇನು?

ಚಿಕ್ಕೋಡಿ: ಇತ್ತೀಚೆಗೆ ಕಾಮುಕ‌ನಂದಿ ಮುನಿಶ್ರೀ ಕಾಣೆಯಾಗಿದ್ದರು. ಮುನಿಶ್ರೀ ಎಲ್ಲೂ ಕಾಣಿಸದೇ ಇದ್ದಾಗ ಭಕ್ತರು ಪೊಲೀಸರಿಗೆ ದೂರು ನೀಡಿದರು. ಈ ದೂರಿನ ಅನ್ವಯ ಅನುಮಾನಗೊಂಡ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕಾಮುಕ‌ನಂದಿ ಮುನಿಶ್ರೀಗಳನ್ನು ಹತ್ಯೆ ಮಾಡಲಾಗಿದೆ ಎಂಬ ಸತ್ಯಾಸತ್ಯತೆ ಹೊರಬಿದ್ದಿದೆ. ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದ ಕಾರಣ ಕೊಲೆ ನಡೆದಿದೆ. ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನ ಡಲಾಯತನನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಆದರೆ ಹಂತಕರು ಕಾಮುಕ‌ನಂದಿ ಮುನಿಶ್ರೀಯನ್ನು ಬರ್ಬರವಾಗಿ ಶಿಕ್ಷಿಸಿ ಕೊಂದಿದ್ದಾರೆ. ಕರೆಂಟ್ ಹರಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದೇಹವನ್ನ ತುಂಡು ತುಂಡಾಗಿ ಕತ್ತರಿಸಿದ ಹಂತಕರು

ಕಾಮುಕ‌ನಂದಿ ಮುನಿಶ್ರೀ ಹತ್ಯೆ ಬಗ್ಗೆ ಭಕ್ತರು ಮಾಹಿತಿ ಹಂಚಿಕೊಂಡಿದ್ದಾರೆ. ಜೈನ ಭಟ್ಟಾರಕರ ಜೊತೆ ಸ್ವಾಮೀಜಿ ಕಾರ್ಯಾಚರಣ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಭಕ್ತನೋರ್ವ, ಹಂತಕರು ಕಾಮುಕ‌ನಂದಿ ಮುನಿಶ್ರೀಯನ್ನು ಕೊಂದು ಬೋರ್​ವೆಲ್​ ಆಸುಪಾಸಿ ಮುಚ್ಚಿಡುತ್ತಾರೆ. ದೇಹವನ್ನ ತುಂಡು ತುಂಡಾಗಿ ಕತ್ತರಿಸಿ​ ಅದರ ಮೇಲೆ‌ ಮಣ್ಣು ಹಾಕಿದ್ದಾರೆ. ಈಗಾಗಲೇ ಜೆಸಿಬಿ ಮೂಲಕ‌ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆಯಿಂದ ಸ್ವಲ್ಪ ತೊಂದರೆಯಾಗುತ್ತಿದೆ ಹಾಗಾಗಿ ಬಾಡಿ ಪೀಸ್​ ಸಿಕ್ಕಿಲ್ಲ ಎಂದು ಭಕ್ತನೊಬ್ಬ ಹೇಳಿದ್ದಾನೆ.

 ಕೊಲೆ ಆರೋಪಿಗಳಾದ ನಾರಾಯಣ ಮಾಳಿ - ಹಸನ ಡಲಾಯತ
ಕೊಲೆ ಆರೋಪಿಗಳಾದ ನಾರಾಯಣ ಮಾಳಿ – ಹಸನ ಡಲಾಯತ

ಕರೆಂಟ್​ ಬಳಸಿ ಚಿತ್ರಹಿಂಸೆ

ಹಂತಕರು ಕರೆಂಟ್​ ಬಳಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಅಲ್ಲಿಂದ ಸ್ವಾಮೀಜಿ ಅವರನ್ನ ಕರೆ ತಂದು ಕೊಟಬಾಗಿ ಗ್ರಾಮದ ಜಮೀನಿನಲ್ಲಿ ಪೀಸ್​ ಮಾಡಿದ್ದಾರೆ. ಬಳಿಕ ಆರೋಪಿ ಜಮೀನಿನಲ್ಲಿ ಅದನ್ನು ಮಣ್ಣಿನಲ್ಲಿ ಹೂತಿದ್ದಾರೆ ಎಂದು ಭಕ್ತ ಹೇಳಿದ್ದಾನೆ.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು

ಹಿರೇಕೊಡಿ ಗ್ರಾಮದಲ್ಲಿ ಸ್ವಾಮೀಜಿ ಜೊತೆ ಯಾರು ಇರುವುದಿಲ್ಲ, ಜೊತೆಗೆ ಇರುವವರೆ ಈ ಕೃತ್ಯ ಮಾಡಿದ್ದಾರೆ. ಅಪರಾಧಿ ಹಿಂದೆ ಯಾರಿದ್ದಾರೆ ಎಂದು ನೋಡಬೇಕು. ಜೈನರು ಶಾಂತಿ ಪ್ರಿಯರು ನಮಗೆ ನ್ಯಾಯ ಸಿಗಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಕಟಬಾಗಿ ಗ್ರಾಮದ ಭಕ್ತರು ಪಟ್ಟು ಹಿಡಿದಿದ್ದಾರೆ.

ಇನ್ನು ಈ ಬಗ್ಗೆ ಪೊಲೀಸರು ಮಾತನಾಡಿದ್ದು, ಸ್ವಾಮೀಜಿ ದೇಹದ ಅಂಗಾಂಗ ಸಿಗುವರೆಗು ನಾವೂ ಏನು ಹೇಳಲಿಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್​​ ಹರಿಸಿ, ತುಂಡು ತುಂಡಾಗಿ ಕತ್ತರಿಸಿದ್ರಂತೆ ಹಂತಕರು.. ಜೈನ ಮುನಿಯ ಕೊಲೆ ಸತ್ಯ ಬಿಚ್ಚಿಟ್ಟ ಭಕ್ತರು

https://newsfirstlive.com/wp-content/uploads/2023/07/Jaina-Muni-1.jpg

Load More