newsfirstkannada.com

ರೈಲಿನಲ್ಲಿ ಗಾಂಜಾ ಸಾಗಿಸಲು ಖತರ್ನಾಕ್ ಪ್ಲಾನ್.. ಸಿಬ್ಬಂದಿಯಿಂದಲೇ ಭಾರೀ ದಂಧೆ; ಸಿಕ್ಕಿಬಿದ್ದಿದ್ದೇ ರೋಚಕ!

Share :

Published June 26, 2024 at 1:37pm

  ರೈಲಿನಲ್ಲಿ ಗೊತ್ತಿಲ್ಲದಂತೆ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳು

  ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಿಂದಲೇ ಈ ಕೃತ್ಯ

  ಪರಾರಿಯಾದ ಇನ್ನಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್ರು

ಬೆಂಗಳೂರು: ದಿಂಬು, ಬೆಡ್​ಶೀಟ್​ಗಳಲ್ಲಿ ಗಾಂಜಾವನ್ನಿಟ್ಟು ಸಾಗಾಟ ಮಾಡುತ್ತಿದ್ದ ಓರ್ವ ರೈಲ್ವೆ ಸಿಬ್ಬಂದಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ತ್ರಿಪುರ ಮೂಲದ ದೀಪನ್ ದಾಸ್ (20) ಬಂಧಿತ ಯುವಕ. ತ್ರಿಪುರ ಮೂಲದ ಸುಮನ್, ಬೆಂಗಳೂರಿನ ಬಿಸ್ವಜಿತ್ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿ ಕಾಂಟ್ರಾಕ್ಟ್ ಆಧಾರದ ಮೇಲೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದನು. ರಾಜಧಾನಿ ಅಗರ್ತಲದಿಂದ ಎಸ್​ಎಂವಿಟಿ ಎಕ್ಸ್​ಪ್ರೆಸ್ ರೈಲಿನಲ್ಲಿ ದಿಂಬು ಹಾಗೂ ಬೆಡ್​​​ಶೀಟ್​ ಒಳಗೆ ಗಾಂಜಾವನ್ನಿಟ್ಟು ಆರೋಪಿಗಳು ಸಾಗಾಟ ಮಾಡುತ್ತಿದ್ದರು. ರೈಲಿನಲ್ಲಿ ದಿಂಬು, ಬೆಡ್​​ಶೀಟ್​ಗಾಗಿ ಬೇರೆ ಕಂಪಾರ್ಟ್​ಮೆಂಟ್ ಇರುತ್ತದೆ. ಈ ಕಂಪಾರ್ಟ್​ಮೆಂಟ್​ನಲ್ಲಿ ಗಾಂಜಾ ಇಡುತ್ತಿದ್ದರು. ಈ ಬಗ್ಗೆ ರೈಲ್ವೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಮರು ಆಯ್ಕೆ.. ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಶುಭಾಶಯ

ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆರೋಪಿ ದೀಪನ್ ದಾಸ್​ನನ್ನ ಬಂಧಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಮತ್ತಿಬ್ಬರು ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಸದ್ಯ ಆರೋಪಿಗಳಿಂದ 32.88 ಕೆಜಿಯ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಸಂಬಂಧ ನಗರದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲಿನಲ್ಲಿ ಗಾಂಜಾ ಸಾಗಿಸಲು ಖತರ್ನಾಕ್ ಪ್ಲಾನ್.. ಸಿಬ್ಬಂದಿಯಿಂದಲೇ ಭಾರೀ ದಂಧೆ; ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2024/06/BNG_GANJA.jpg

Load More