ಕಾಂಗ್ರೆಸ್ ನಾಯಕ, ಕುಷ್ಟಗಿ ಮಾಜಿ ಶಾಸಕರ ಫೋನ್ ಸಂಭಾಷಣೆ
ಒಂದೇ ಕೈನಲ್ಲಿ ಚಪ್ಪಾಳೆ ಆಗುತ್ತೇನೋ? ಮತ್ತೆ ಹೆಂಗ್ ರೇಪ್ ಆಗುತ್ತೆ?
ಸಂತ್ರಸ್ತನ ಸಂಬಂಧಿಗೆ ಅಮರೇಗೌಡ ಬಯ್ಯಾಪುರ ಹೇಳಿದ ಮಾತೇನು?
ಕೊಪ್ಪಳ: ಕಾಂಗ್ರೆಸ್ ನಾಯಕ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಅವರು ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಜಗತ್ತಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ ರೇಪ್ ಮಾಡಲು ಸಾಧ್ಯವೇ ಇಲ್ಲ. ಯಾರಾದ್ರೂ ಇದ್ರೆ ಬಾ ಅಂತ ಹೇಳು ರೇಪ್ ಮಾಡಲಿ ನಾನೂ ನೋಡ್ತಿನಿ ಎಂದಿರೋ ಅಮರೇಗೌಡ ಬಯ್ಯಾಪೂರ ಅವರ ದೂರವಾಣಿ ಸಂಭಾಷಣೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದ ಯಮನೂರಪ್ಪ ಎಂಬುವರ ಜೊತೆಗೆ ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅತ್ಯಾಚಾರ ವಿಷಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಸುಮಾರು 5.55 ನಿಮಿಷದ ಆಡಿಯೋ ಸಂಭಾಷಣೆ ಇದಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಅಮರೇಗೌಡ ಬಯ್ಯಾಪುರ ಅವರಿಗೆ ಯಮನೂರಪ್ಪ ಕರೆ ಮಾಡಿದ್ದಾರೆ. ತನ್ನ ಸಹೋದರನ ಪತ್ನಿ ಮೇಲೆ ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಸಂಗನಗೌಡ ಎಂಬಾತ ಅತ್ಯಾಚಾರ ಮಾಡಿದ್ದೇನೆ. ನಮಗೆ ನೀವು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾನೆ. ಈ ಫೋನ್ ಸಂಭಾಷಣೆಯಲ್ಲಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಮಾತುಗಳು ಅಚ್ಚರಿಗೆ ಕಾರಣವಾಗಿದೆ.
ವೈರಲ್ ಆದ ಆಡಿಯೋದಲ್ಲಿ ಹೇಳಿದ್ದೇನು?
ಕರೆ ಮಾಡಿದ ಯಮನೂರಪ್ಪಗೆ, ಏನಾದರೂ ಮಾಡೋಣ ಇದು ಒಂದು ಬಾಂಧವ್ಯ ಹಾಳು ಮಾಡಿಬಿಡುತ್ತೆ. ಆ ಮಹಿಳೆ ಬೀಗರ ಮನೆಗೆ ಹೋದ್ರೆ ಮಹಿಳೆಗೆ ಸಮಸ್ಯೆಯಾಗುತ್ತೆ ಅಲ್ಲಿ ಮಹಿಳೆಯರು ಮಜುಗರವಾಗುವ ಪ್ರಶ್ನೆ ಮಾಡ್ತಾರೆ. ರೇಪ್ ಆಗುವಾಗ ಆ ಮಹಿಳೆ ಒದರಾಡಿ ಚೀರಾಟ ಮಾಡಬೇಕಿತ್ತು. ಒಂದೇ ಕೈನಲ್ಲಿ ಚಪ್ಪಾಳೆ ಆಗುತ್ತೇನೋ ಯಮನೂರಪ್ಪ. ಮತ್ತೆ ಹೆಂಗ್ ರೇಪ್ ಆಗುತ್ತೆ? ಇದು ಸಾಧ್ಯನಾ? ಒಬ್ಬ ಗಟ್ಟುಳ್ಳವನ್ನೇ ಕರಕೊಂಡು ಬಾ ನೀನು. ಅವ್ನು ಯಾರೇ ಇರಲಿ. ಅವನ ಬಳಿ ಒಬ್ಬ ಹೆಣ್ಣು ಮಗಳನ್ನು ಕಳಿಸೋಣ ಅವ ಹೆಂಗ್ ಮಾಡ್ತಾನೆ, ರೇಪ್ ಮಾಡಿ ತೋರಿಸಲಿ. ಅದು ಸಾಧ್ಯ ಇಲ್ಲ, ರೇಪ್ ಮಾಡಬೇಕು ಅಂದ್ರೆ ನಾಲ್ಕೈದು ಜನ ಇರುತ್ತಾರೆ ಒಬ್ಬನಿಂದ ಸಾಧ್ಯವಿಲ್ಲ.
ಇವೆಲ್ಲ ಕಥೆ ಬೇಡ. ಸುಮ್ನೆ ಮರ್ಯಾದಿ ಕಳ್ಕೊಂಡು ಮನಿಗೆ ಹೊಕ್ಕಿರಿ ನೀವು. ರೇಪ್ ಆಗಬೇಕಾದ್ರ ಮಿನಿಮಮ್ ತ್ರೀ ಪೋರ್ ಮೆಂಬರ್ ಬೇಕಲ್ಲಿ. ಒಬ್ಬಾಕಿನ ರೇಪ್ ಮಾಡಬೇಕಾದ್ರ. ಒಬ್ಬಾಕಿನ ಒಬ್ಬಾವನ ರೇಪ್ ಮಾಡಬೇಕಾದ್ರ ಈ ಜಗತ್ತಿನ್ಯಾಗ ಯಾವನಿಂದ… ಅಲ್ಲ… ಬ್ರಹ್ಮ ಬಂದ್ರೂ ಸಾಧ್ಯ ಇಲ್ಲ. ಎಂದು ಅಮರೇಗೌಡ ಬಯ್ಯಾಪುರ ಅವರು ನೊಂದ ವ್ಯಕ್ತಿ ಜೊತೆ ಸಂಭಾಷಣೆ ಮಾಡಿದ್ದಾರೆ.
ಆಗ ಸಂತ್ರಸ್ತನ ಸಂಬಂಧಿ ನಾವು ಸುಳ್ಳ ಹೇಳ್ತಿಲ್ಲ ಸಾಹೇಬ್ರೆ ಎಂದಾಗ ಮುಂದುವರೆಸಿ ಮಾತ್ನಾಡಿದ ಮಾಜಿ ಶಾಸಕರು ಹೌದು ಮತ್ತ ಸುಳ್ಳ ಇದು. ನನಗ ಪ್ರೂವ್ ಮಾಡಿಕೊಡು ಇದನ್ನ ಎಂದಿದ್ದಾರೆ. ಕೊನೆಗೆ ಆಯ್ತು ನಾನು ನಿಮ್ಮ ಪರವೇ ಇರುತ್ತೇನೆ. ಪೊಲೀಸರ ಜೊತೆ ಮಾತ್ನಾಡಿರುವೆ ಎಂದು ಬಯ್ಯಾಪೂರ ಯಮನೂರಪ್ಪಗೆ ಸಮಾಧಾನಪಡಿಸಿದ್ದಾರೆ. ಈ ಆಡಿಯೋ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ