newsfirstkannada.com

Kalki 2898 AD ರಿಲೀಸ್​​ ದಿನವೇ ಯಶ್ ‘ಟಾಕ್ಸಿಕ್’ ತಂಡದಿಂದ ಬಂತು ದೊಡ್ಡ ಸುದ್ದಿ; ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

Share :

Published June 27, 2024 at 5:30pm

    ರಿಲೀಸ್​ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌

    ಕಲ್ಕಿ ಸಿನಿಮಾ ರಿಲೀಸ್​ ಬೆನ್ನಲ್ಲೇ ನಟ ರಾಕಿಂಗ್​ ಸ್ಟಾರ್​ ಫ್ಯಾನ್ಸ್​ಗೆ ಗುಡ್ ನ್ಯೂಸ್​

    ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಟಾಕ್ಸಿಕ್ ಸಿನಿಮಾ

ಇಂದು ಡಾರ್ಲಿಂಗ್ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟನೆಯ ಬಹುನೀರಿಕ್ಷಿತ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗಿದೆ. ರಿಲೀಸ್​ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ.. ಸೆರೆವಾಸದಲ್ಲಿ ಚಿಂತಾಕ್ರಾಂತನಾದ ಸಾರಥಿ ಮಾಡ್ತಿರೋದೇನು?

ಇನ್ನು, ಕಲ್ಕಿ 2898 AD ಸಿನಿಮಾ ರಿಲೀಸ್​ ಬೆನ್ನಲ್ಲೇ ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್​ಗೆ ಬಿಗ್​ ಆಫರ್​ವೊಂದು ಬಂದಿದೆ. ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಟಾಕ್ಸಿಕ್​​ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದೆ. ಆದರೆ ಇದರ ಮಧ್ಯೆ ಟಾಕ್ಸಿಕ್ ಸಿನಿಮಾಗೆ ಡಿಎನ್ಇಜಿ ವಿಎಫ್ಎಕ್ಸ್ ಕಂಪನಿಯೂ ಪಾರ್ಟ್ನರ್ ಆಗಿದೆ. ಡಿಎನ್ಇಜಿ ಹಾಲಿವುಡ್​ನ ಖ್ಯಾತ ವಿಎಫ್ಎಕ್ಸ್ ಕಂಪನಿಯಾಗಿದೆ.

ಹಾಲಿವುಡ್​ ಡ್ಯೂನ್- 2, ಗಾಡ್ಜಿಲ್ಲಾ x ಕಾಂಗ್ ಸಿನಿಮಾಗೆ ಗ್ರಾಫಿಕ್ಸ್ ಮಾಡಲಾಗಿತ್ತು. ಅಷ್ಟೇ ಏಕೆ ಇಂದು ರಿಲೀಸ್ ಆಗಿರೋ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾಗೂ ಇದೇ ಟೀಂ ವಿಎಫ್ಎಕ್ಸ್ ಕೆಲಸ ಮಾಡಿತ್ತು. ಕಲ್ಕಿ ಸಿನಿಮಾದ ಕ್ವಾಲಿಟಿ ನೋಡಿ ಟಾಕ್ಸಿಕ್ ಸಿನಿಮಾಗೆ ಬಿಗ್ ಆಫರ್​ವೊಂದು ಬಂದಿದೆ. ಇದೇ ಗ್ರಾಫಿಕ್ಸ್ ಟೀಂ ಯಶ್ ನಿರ್ಮಾಣದ ರಾಮಾಯಣ ಸಿನಿಮಾಗೂ ಕೆಲಸ ಮಾಡಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಟಾಕ್ಸಿಕ್ ಸಿನಿಮಾಗೆ ಡಿಎನ್ಇಜಿ ಗ್ರಾಫಿಕ್ಸ್ ಸಪೋರ್ಟ್ ಮಾಡಲಿದೆ. ಸದ್ಯ ಟಾಕ್ಸಿಕ್​ ಸಿನಿಮಾವನ್ನು ಏಪ್ರಿಲ್ 10, 2025 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ನಿರ್ದೇಶಕರು ದಿನಾಂಕ ನಿಗದಿಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kalki 2898 AD ರಿಲೀಸ್​​ ದಿನವೇ ಯಶ್ ‘ಟಾಕ್ಸಿಕ್’ ತಂಡದಿಂದ ಬಂತು ದೊಡ್ಡ ಸುದ್ದಿ; ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

https://newsfirstlive.com/wp-content/uploads/2024/06/kalki1.jpg

Load More