newsfirstkannada.com

ಸ್ಕೂಲ್​ ಬ್ಯಾಗ್​ ಇಟ್ಟು ಹೋದ ಮಗ ವಾಪಾಸ್​ ಬಂದಿಲ್ಲ; ಕಣ್ಣೀರಿನಲ್ಲಿ ಕುಟುಂಬ

Share :

01-06-2023

    3ನೇ ತರಗತಿ ವಿದ್ಯಾರ್ಥಿ ನಾಪತ್ತೆ

    ಮಾವಿನ ಹಣ್ಣು ತರಲು ಹೋದವ್ನು ಬರಲೇ ಇಲ್ಲ

    ಮಗನಿಗಾಗಿ ಕಾಯುತ್ತಿದ್ದಾರೆ ಪೋಷಕರು

ಗದಗ: 9 ವರ್ಷದ ಬಾಲಕ ಏಕಾಏಕಿ ಕಾಣೆಯಾಗಿದ್ದು, ಮಗನಿಗಾಗಿ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಘಟನೆ ಗದಗನಲ್ಲಿ ‌ನಡೆದಿದೆ. ನಗರದ ಹೊಂಬಳ ನಾಕಾ ಬಳಿ ಜನತಾ ಜಾಲೋನಿಯ ಬಾಲಕ ಅಫ್ಜಲ್ ಮೌಲಾಸಾಬ್ ದಾವಲಖಾನವರ್ ಎಂಬ ಈ ಪುಟ್ಟ ಬಾಲಕ ನಾಪತ್ತೆಯಾಗಿದ್ದಾನೆ.‌

3ನೇ ತರಗತಿ ವಿದ್ಯಾರ್ಥಿ ನಾಪತ್ತೆ

ಮೌಲಾಸಾಬ್ ಹಾಗೂ ಖಾಜಾಬಿ ದಂಪತಿಗೆ ಏಕೈಕ ಗಂಡು ಮಗ. 3ನೇ ತರಗತಿ ಓದುತ್ತಿದ್ದು, ನಿನ್ನೆ ಶಾಲೆ ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಸ್ಕೂಲ್ ಬ್ಯಾಗ್ ಇಟ್ಟು ಮಾವಿನ ಹಣ್ಣು ತೆಗೆದುಕೊಂಡು ಆಟವಾಡಲು ಹೋಗಿದ್ದಾನೆ. ಹೋದ ಮಗ ಮತ್ತೆ ಮನೆಗೆ ಹಿಂತುರುಗಿಲ್ಲ.

ಕಣ್ಣೀರು ಹಾಕುತ್ತಿರುವ ಪೋಷಕರು

ಕುಟುಂಬಸ್ಥರು ನಿನ್ನೆ ರಾತ್ರಿಯಿಂದ ಅನೇಕ ಕಡೆಗಳಲ್ಲಿ ಹುಡುಕಾಡಿದ್ರೂ ಎಲ್ಲೂ ಪತ್ತೆಯಾಗ್ತಿಲ್ಲ. ಮಗುವಿನ ಫೋಟೋ ಹಿಡಿದುಕೊಂಡು ಕಣ್ಣೀರಿಡುತ್ತಾ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಬ್ಬನೆ ಗಂಡು ಮಗು ದಯವಿಟ್ಟು ಹುಡುಕಿಕೊಡಿ ಅಂತ ಅಂಗಲಾಚುತ್ತಾ, ಕಣ್ಣೀರಿಡುತ್ತಾ ಅಲೆಯುತ್ತಿದ್ದಾರೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

ನಿನಗಾಗಿ‌ ಕುಟುಂಬ ಕಾಯುತ್ತಿದೆ ಬೇಗ ಬಾ ಮಗ

ಮಗುವಿನ ಫೋಟೋ, ಸ್ಕೂಲ್ ಬ್ಯಾಗ್, ಡ್ರೆಸ್ ಹಿಡಿದುಕೊಂಡು ಗೋಳಾಡುತ್ತಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲೂ ಮಿಸ್ಸಿಂಗ್ ದೂರು ದಾಖಲಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಹುಡುಕುತ್ತಿದ್ದಾರೆ. ನಿನಗಾಗಿ‌ ಕುಟುಂಬ ಕಾಯುತ್ತಿದೆ ಬೇಗ ಬಾ ಮಗ ಅಂತ ಕುಟುಂಬಸ್ಥರು ಹಂಬಲಿಸುತ್ತಿರುವುದು ಕರಳು ಹಿಂಡುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಲ್​ ಬ್ಯಾಗ್​ ಇಟ್ಟು ಹೋದ ಮಗ ವಾಪಾಸ್​ ಬಂದಿಲ್ಲ; ಕಣ್ಣೀರಿನಲ್ಲಿ ಕುಟುಂಬ

https://newsfirstlive.com/wp-content/uploads/2023/06/Gagad-Child-Missing.jpg

Load More