Advertisment

ಸಾಕಿದ ನಾಯಿಗೋಸ್ಕರ ಮದುವೆ ಕ್ಯಾನ್ಸಲ್ ಮಾಡಿದ ವಧು.. 7 ವರ್ಷದ ಪ್ರೀತಿಗೆ ಸಡನ್ ಟ್ವಿಸ್ಟ್; ಆಗಿದ್ದೇನು?

author-image
admin
Updated On
ಸಾಕಿದ ನಾಯಿಗೋಸ್ಕರ ಮದುವೆ ಕ್ಯಾನ್ಸಲ್ ಮಾಡಿದ ವಧು.. 7 ವರ್ಷದ ಪ್ರೀತಿಗೆ ಸಡನ್ ಟ್ವಿಸ್ಟ್; ಆಗಿದ್ದೇನು?
Advertisment
  • ಒಂದಲ್ಲ, ಎರಡಲ್ಲ, 7 ವರ್ಷದ ಪ್ರೀತಿ ಅಂತ್ಯ ಆಗಲು ಕಾರಣವೇನು?
  • ಮದುವೆ ಡೇಟ್ ಫಿಕ್ಸ್, ಮಂಟಪ ಬುಕ್, ಇನ್ವಿಟೇಷನ್​​ ಹಂಚಿಕೆ
  • ಹುಡುಗನ ತಾಯಿ ಆಡಿದ ಒಂದೇ ಮಾತಿಗೆ ಮದ್ವೆ ಕ್ಯಾನ್ಸಲ್!

ಈಗಿನ ಕಾಲದಲ್ಲಿ ಸಾಕು ನಾಯಿಯನ್ನ ನಾಯಿ ಅಂದ್ರೆ ಸಾಕಿರೋರಿಗೆ ಕೋಪ ಬಂದು ಬಿಡುತ್ತೆ. ನಾಯಿ ಅಂತ ಕರೀಬೇಡಿ.. ಹೆಸರಿಂದ ಕರೀರಿ ಅಂತಾರೆ. ಯಾಕಂದ್ರೆ ಕುಟುಂಬದ ಸದಸ್ಯನಾಗಿ ಸಾಕು ನಾಯಿ ಒಬ್ಬನಾಗಿರುತ್ತಾನೆ. ಸ್ವಲ್ಪ ಮಕ್ಕಳಿಗಿಂತ ಹೆಚ್ಚು ಪ್ರೀತಿ, ಆರೈಕೆಯಲ್ಲಿ ನಾಯಿಯನ್ನ ನೋಡಿಕೊಳ್ತಾರೆ. ಇತ್ತೀಚೆಗೆ ನಾಯಿ ಸಾಕೋದು, ಆರೈಕೆ ಮಾಡೋದು ಹೆಚ್ಚು. ಆದರೆ ಇದೇ ಸಾಕು ನಾಯಿ 7 ವರ್ಷದ ಲವರ್​​ಗಳ ಸಂಬಂಧ ಅಂತ್ಯ ಮಾಡಿದೆ. ಅಷ್ಟೂ ಮಾತ್ರ ಅಲ್ಲ.. ಮದುವೆಯನ್ನೇ ರದ್ದು ಮಾಡಿಸಿದ ಘಟನೆ ನಡೆದಿದೆ.

Advertisment

ಹುಡುಗನಿಗೆ ಹುಡುಗಿ ಪರಿಚಯ ಆದಳು. ಪರಿಚಯ ಸ್ನೇಹಕ್ಕೆ ತಿರುಗಿತು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಈ ಸಂಬಂಧಕ್ಕೆ ಒಂದಲ್ಲ.. ಎರಡಲ್ಲ.. 7 ವರ್ಷ ಆಗಿತ್ತು. ಹೇಗೋ. ಜಗಳ ಮಾಡಿಕೊಂಡು ಎರಡೂ ಮನೆಯವರನ್ನು ಒಪ್ಪಿಸಿ, ಮದುವೆಗೆ ತಯಾರಿ ನಡೆಸಿದ್ದರು.

ಇದನ್ನೂ ಓದಿ: BBK11: ಧರ್ಮ, ಐಶ್ವರ್ಯಾಗೆ ಸಖತ್‌ ಚಮಕ್​ ಕೊಟ್ಟ ಹನುಮಂತ; ಹಳ್ಳಿ ಹೈದನ​ ಪಾಯಿಂಟ್​ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ! 

ಮದುವೆ ದಿನವೂ ಫಿಕ್ಸ್ ಆಯ್ತು, ಕಲ್ಯಾಣ ಮಂಟಪ ಬುಕ್ ಕೂಡ ಆಯ್ತು. ಗ್ರ್ಯಾಂಡ್ ಆಗಿ ಇನ್​ವಿಟೇಷನ್​​​ ಮಾಡ್ಸಿ, ಊರಿಗೆಲ್ಲಾ ಹಂಚಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಹುಡುಗನ ತಾಯಿ, ಹುಡುಗಿ ಸಾಕಿದ್ದ ನಾಯಿ ಬಗ್ಗೆ ಆಡಿದ ಒಂದು ಮಾತಿನಿಂದ ಮದುವೆನೇ ರದ್ದಾಗಿದೆ.

Advertisment

publive-image

ಪ್ರಿಯಾಂಕಾ ಅನ್ನೋ ಎಕ್ಸ್ ಯೂಸರ್ ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯನ್ನ ಶೇರ್ ಮಾಡಿಕೊಂಡಿದ್ದಾರೆ. ನನ್ನ ಹಾಗೂ ಬಾಯ್‌ಫ್ರೆಂಡ್ ಜೊತೆಗಿನ 7 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಆ ಬಾಯ್‌ಫ್ರೆಂಡ್ ಅಲ್ಲ, ಆತನ ತಾಯಿ ಅಂತ ಹೇಳಿಕೊಂಡಿದ್ದಾರೆ.

publive-image

ಪ್ರಿಯಾಂಕಾ ಹಾಗೂ ಆಕೆಯ ಬಾಯ್‌ಫ್ರೆಂಡ್ ನಡುವೆ 7 ವರ್ಷಗಳ ಪ್ರೀತಿ ಚೆನ್ನಾಗಿಯೇ ಇತ್ತು. ಹಲವು ವರ್ಷಗಳ ಸಂಬಂಧಕ್ಕೆ ಮದುವೆಯ ಅರ್ಥ ಕೊಡೋಕೆ ಇಬ್ಬರು ಚರ್ಚೆ ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರಿಗೂ ಸವಾಲು ದೊಡ್ಡದಾಗಿಯೇ ಇತ್ತು. ಹೀಗಾಗಿ, ಎರಡೂ ಮನೆಯವರನ್ನು ಒಪ್ಪಿಸಬೇಕಿತ್ತು. ಹುಡುಗಿಯ ಮನೆಯಲ್ಲಿ ಅಂತದ್ದೇನು ಸಮಸ್ಯೆ ಆಗಿಲ್ಲ. ಹುಡುಗಿಯ ನಿರ್ಧಾರವನ್ನು ಫ್ಯಾಮಿಲಿ ಒಪ್ಪಿಕೊಂಡಿದ್ದಾರೆ. ಹುಡುಗನ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಪಡೆದುಕೊಂಡಿದ್ದಾರೆ. ಮಗಳನ್ನ ಚೆನ್ನಾಗಿ ನೋಡಿಕೊಂಡ್ರೆ ಸಾಕು ಅಂತಷ್ಟೇ ಹೇಳಿದ್ದಾರೆ. ಆದರೆ ಹುಡುಗನ ಮನೆಯಲ್ಲಿ ನೂರೆಂಟು ಪ್ರಶ್ನೆಗಳನ್ನ ಕೇಳ್ತಿದ್ದರು. ನಿನಗೆ ಅವಳೇ ಬೇಕಾ? ಬೇರೆ ಹುಡುಗೀರು ಸಿಗುತ್ತಾರೆ. ಆಸ್ತಿ ಅಂತಸ್ತು ಇರೋ, ಯಾವುದೇ ಕೆಲಸ ಮಾಡದಿದ್ದರೂ ಕೂತುಕೊಂಡ್ರೆ ಹಣ ಎಣಿಸೋ ಕುಟುಂಬದಿಂದ ಪ್ರಪೋಸಲ್ ಬಂದಿದೆ ಅಂತೆಲ್ಲಾ ತಲೆ ಒಳಗೆ ತುಂಬಿಸೋಕೆ ಹುಡುಗನಿಗೆ ತಾಯಿ ತಲೆಗೆ ತುಂಬುಸೋಕೆ ಮುಂದಾಗಿದ್ದಾರೆ.

ಪ್ರಿಯಾಂಕ ಜೊತೆಗಿನ ಪ್ರೀತಿ ಬೆಟ್ಟದಿಷ್ಟಿತ್ತು. ಹೀಗಾಗಿ ಹುಡುಗ ಪೋಷಕರನ್ನು ಒಪ್ಪಿಸಿದ್ದ. ಎರಡೂ ಮನೆಯವರ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆನೇ ಮದುವೆ ಚರ್ಚೆ ಶುರುವಾಗಿತ್ತು. ಮದುವೆ ದಿನಾಂಕ ಯಾವಾಗ? ಎಷ್ಟು ಜನರನ್ನ ಕರೀಬೇಕು, ಹೇಗೆ ಮದುವೆ, ಎಲ್ಲಿ ಸ್ಥಳ, ಮಂಟಪ ಸೇರಿದಂತೆ ಅಂತ ಚರ್ಚೆಗಳಾದ್ಮೇಲೆ ಡೇಟ್ ಫಿಕ್ಸ್ ಆಯಿತು. ಮದುವೆ ಮಂಟಪ ಬುಕ್ ಮಾಡಿದ್ರು. ಮದುವೆ ದಿನ ಹಾಗೂ ರಿಸೆಪ್ಶನ್​​ಗೆ ಏನೇನೂ ಊಟಕ್ಕೆ ಮೆನು ಇರಬೇಕು ಅಂತ ಲಿಸ್ಟ್ ಕೂಡ ಮಾಡಿದ್ರು. ಇನ್ನೇನು ಮದುವೆಗೆ ದಿನಗಳು ಹತ್ತಿರವಾದಂತೆ ಹುಡುಗನ ಅಮ್ಮ ಎಲ್ಲವನ್ನು ಬುಡಮೇಲು ಮಾಡಿಬಿಟ್ಟರು.

Advertisment

publive-image

ಇದನ್ನೂ ಓದಿ: PHOTOS: ಮುದ್ದಾಗಿ ಪತ್ನಿ ಬೇಬಿ ಬಂಪ್​ಗೆ ಕಿಸ್​ ಕೊಟ್ಟ ವಸಿಷ್ಠ ಸಿಂಹ; ನಟಿ ಹರಿಪ್ರಿಯಾಗೆ ಫ್ಯಾನ್ಸ್ ಹಾರೈಕೆ 

ಹುಡುಗಿ ಹತ್ರ ಮುದ್ದಾದ ಸಾಕು ನಾಯಿ ಇದೆ. ಅತ್ಯಂತ ಪ್ರೀತಿಯಿಂದ ಸಾಕಿದ್ದಾಳೆ. ಇನ್ನು, ಹುಡುಗಿ ತಾಯಿಯ ಆರೋಗ್ಯ ಸರಿಯಿಲ್ಲ. ಹೀಗಾಗಿ ಮದುವೆಯಾದ್ಮೇಲೆ ತಾಯಿಗೆ ನಾಯಿಯನ್ನು ನೋಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ತಾಯಿ ಆರೋಗ್ಯದ ಕಾರಣದಿಂದ ಮನೆಯ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಮದುವೆಯಾದ್ಮೇಲೆ ತಾನು ಸಾಕಿದ್ದ ಸಾಕು ನಾಯಿಯನ್ನು ಕರೆದುಕೊಂಡು ಬರ್ತೀನಿ ಅಂತ ಅತ್ತೆಗೆ ಹೇಳಿದ್ದಾಳೆ. ಜೊತೆಗೆ ಮನೆಯಲ್ಲಿ ತಾಯಿ ಆರೋಗ್ಯದ ವಿಚಾರವನ್ನ ಮಾತನಾಡಿದ್ದಾಳೆ.

ಆಗ ಹುಡುಗನ ತಾಯಿ ನನ್ನ ಮಗ ಮದುವೆ ಆಗ್ತಿರೋದು ನಿನ್ನನ್ನು. ನಮ್ಮ ಮನೆಗೆ ನೀನು ಮಾತ್ರ ಬಂದರೆ ಸಾಕು, ನಿನ್ನ ಜೊತೆ ನಾಯಿ ತರಬಾರದು. ನಮ್ಮ ಮನೆಯಲ್ಲಿ ಒಂದು ನಾಯಿ ಇದೆ. ಇದರ ಜೊತೆಗೆ ಮತ್ತೊಂದು ನಾಯಿ ನಮಗೆ ಬೇಡ. ಎಲ್ಲಾ ನಾಯಿಗಳಿಗೆ ಆಶ್ರಯ ನೀಡಲು ನಮ್ಮ ಮನೆ ಛತ್ರ ಅಲ್ಲ ಅಂತ ಹೇಳಿದ್ದಾರೆ. ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ವಧು, ಕೊನೆಯ ಮಾತಿಗೆ ಗರಂ ಆಗಿದ್ದಾಳೆ. ನಾಯಿಗಳಿಗೆ ನೀವು ಆಶ್ರಯ ನೀಡುವುದೇ ಬೇಡ, ಈ ಸಂಬಂಧ ಮುಂದುವರಿಯೋದು ಬೇಡ ಅಂತ ಖಡಕ್ ಆಗಿ ಹೇಳಿದ್ದಾಳೆ. ಇಷ್ಟೇ ಅಲ್ಲ ಮದುವೆಯನ್ನು ರದ್ದುಗೊಳಿಸುತ್ತಿರುವುದಾಗಿ ಹುಡುಗನ ತಾಯಿ ಹತ್ತಿರ ನೇರವಾಗಿ ಹೇಳಿದ್ದಾಳೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment