ಕರೀನಾ ಕಪೂರ್ ವರ್ತನೆ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಬೇಸರ
ಬಾಲಿವುಡ್ ನಟಿ ಅಹಂಕಾರ ಕಡಿಮೆ ಮಾಡಬೇಕು ಎಂದ ನಾರಾಯಣ ಮೂರ್ತಿ
ವಿಮಾನದಲ್ಲಿ ಕಂಡ ಕಹಿ ಘಟನೆಯನ್ನು ವಿವರಿಸಿದ ಇನ್ಫೋಸಿಸ್ ಸಹಸಂಸ್ಥಾಪಕ
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬಾಲಿವುಡ್ ನಟಿ ಕರೀನಾ ಕಪೂರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಭಿಮಾನಿಗಳು ಅವರನ್ನು ಮಾತನಾಡಲು ಸುತ್ತುವರಿದಾಗ ಕ್ಯಾರೇ ಏನ್ನದೆ ತಮ್ಮ ನಡತೆಯನ್ನು ತೋರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ನಾರಾಯಣ ಮೂರ್ತಿ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾರಾಯಣ ಮೂರ್ತಿ ಅವರು ಒಮ್ಮೆ ಲಂಡನ್ನಿಂದ ಬರುತ್ತಿದ್ದ ವೇಳೆ ಅದೇ ವಿಮಾನದಲ್ಲಿ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಕೂಡ ಇದ್ದರಂತೆ. ಈ ವೇಳೆ ನಟಿಯನ್ನು ಕಂಡ ಜನರು ಆಕೆಯನ್ನು ಸುತ್ತುವರಿದರು. ಆದರೆ ನಟಿ ಮಾತ್ರ ಇದಾವುದಕ್ಕೂ ಪ್ರತಿಕ್ರಿಯಿಸಿರಲಿಲ್ಲ. ಇದನ್ನು ಕಣ್ಣಾರೆ ಕಂಡ ಇನ್ಫೋಸಿಸ್ ಸಹಸಂಸ್ಥಾಪಕ ಕಾರ್ಯಕ್ರಮವೊಂದರಲ್ಲಿ ನೇರವಾಗಿ ನಟಿಯ ವರ್ತನೆ ಬಗ್ಗೆ ಮಾತನಾಡಿದ್ದಾರೆ. ಯಾರೇ ಆಗಲಿ ಕೆಲವು ವಿಧಾನಗಳ ಮೂಲಕ ಅಹಂಕಾರವನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಸದ್ಯ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. EOINDIA ಎಂಬ ಇನ್ಸ್ಟಾಗ್ರಾಂ ಖಾತೆ ಈ ವಿಚಾರವನ್ನು ಹಂಚಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ