newsfirstkannada.com

WATCH: ಟೊಮ್ಯಾಟೋ ಕಾಯಲು ಬಂದ ನಾಗರಹಾವು.. ಪಲ್ಟಿಯಾದ ಲಾರಿಗೆ ಪೊಲೀಸ್ ಟೈಟ್ ಸೆಕ್ಯೂರಿಟಿ!

Share :

18-07-2023

    ಟೊಮ್ಯಾಟೋನ ಕಾವಲು ಕಾಯ್ತಿರೋದು ಯಾಱರು ಗೊತ್ತಾ?

    ಹೆಡೆ ಎತ್ತಿ ನಿಂತ ನಾಗಪ್ಪನಿಂದ ಟೊಮ್ಯಾಟೋಗೆ ಟೈಟ್ ಸೆಕ್ಯೂರಿಟಿ

    ಇಲ್ಲಿ ಟೊಮ್ಯಾಟೋ ಟಚ್ ಮಾಡೋಕೆ ನಿಜಕ್ಕೂ ಧೈರ್ಯ ಬೇಕು

ಟೊಮ್ಯಾಟೋ.. ಟೊಮ್ಯಾಟೋ.. ಟೊಮ್ಯಾಟೋ.. ಈಗ ಎಲ್ಲಿ ನೋಡಿದ್ರೂ ಟೊಮ್ಯಾಟೋದೇ ಚರ್ಚೆಯಾಗಿದೆ. ಯಾಕಂದ್ರೆ ಟೊಮ್ಯಾಟೋಗೆ ಚಿನ್ನದ ಬೆಲೆ ಬಂದಿದೆ. ಒಂದು ಕೆಜಿ ಟೊಮ್ಯಾಟೋ ರೇಟ್‌ 70, 80 ರೂಪಾಯಿಯಿಂದ 100, 200 ರೂಪಾಯಿಯನ್ನು ದಾಟಿಕೊಂಡು ಮುನ್ನುಗ್ಗಿದೆ. ಇನ್ನು ಎರಡು ತಿಂಗಳು ಟೊಮ್ಯಾಟೋ ರೇಟ್ ಕಡಿಮೆಯಾಗೋ ಸಾಧ್ಯತೆಯೂ ಇಲ್ಲ ಎನ್ನಲಾಗಿದೆ. ಹೀಗೆ ಟೊಮ್ಯಾಟೋಗೆ ಡಿಮ್ಯಾಂಡ್ ಜಾಸ್ತಿ ಆಗ್ತಿದ್ದಂತೆ ಕಳ್ಳರ ಹಾವಳಿನೂ ಹೆಚ್ಚಾಗಿದೆ. ಟೊಮ್ಯಾಟೋ ಬೇಡಿಕೆ ಹೆಚ್ಚಾದಂತೆ ಅದನ್ನು ಕಾಯೋ ಕಣ್ಣುಗಳು, ಕಾವಲುಗಾರರು ಕೂಡ ಜಾಸ್ತಿಯಾಗ್ತಿದ್ದಾರೆ.

ಟೊಮ್ಯಾಟೋನ ಕಾವಲು ಕಾಯ್ತಿರೋದು ಯಾರೋ ಮಾಲೀಕನೋ, ಅಥವಾ ಕೂಲಿ ಕಾರ್ಮಿಕನೋ ಅಲ್ಲ.. ಸಿಸಿಟಿವಿನೋ, ಪೊಲೀಸೋ ಇರಬೋದು ಬಿಡಿ ಅಂತಾ ಅನ್ಕೊಂಡ್ರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ ಇಲ್ಲಿ ಟೊಮ್ಯಾಟೋಗೆ ಟೈಟ್ ಸೆಕ್ಯೂರಿಟಿ ಕೊಟ್ಟಿರೋದು ಹೆಡೆ ಎತ್ತಿ ನಿಂತ ನಾಗಪ್ಪ. ಯಾರಿಗಿದೆ ಟೊಮ್ಯಾಟೋ ಮುಟ್ಟೋಕೆ ಧೈರ್ಯ ಅಂತಾ ಕೆಂಪು ರಾಣಿಗೆ ರಕ್ಷಕನಾಗಿ ಹೈ ಸೆಕ್ಯೂರಿಟಿ ಕೊಟ್ಟಿದೆ ನಾಗರಹಾವು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.

ಅತ್ತ ನಾಗರಾಜ ಮನೆಯಲ್ಲಿದ್ದ ಟೊಮ್ಯಾಟೋಗೆ ಭದ್ರತೆ ನೀಡಿದ್ರೆ, ಇತ್ತ ತೆಲಂಗಾಣದ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೆಂಪು ಸುಂದರಿಯರಿಗೆ ಪೊಲೀಸರೇ ಟೈಟ್​ ಸೆಕ್ಯೂರಿಟಿ ಕೊಟ್ಟಿದ್ದಾರೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ದೆಹಲಿಗೆ ತೆರಳುತ್ತಿದ್ದ ಟೊಮ್ಯಾಟೋ ತುಂಬಿದ ಲಾರಿ ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದಿದೆ.

ಲಾರಿ ಪಲ್ಟಿಯಾಗ್ತಿದ್ದಂತೆ ಟೊಮ್ಯಾಟೋ ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದರು. ಮೊದಲೇ ಬಂಗಾರದ ಬೆಲೆ ಬಂದಿರೋ ಟೊಮ್ಯಾಟೋ ಹಾಗೇ ಬಿಟ್ರೇ ಜನರು ಸಿಕ್ಕಿದ್ದೇ ಸಿರುಂಡೇ ಅಂತಾ ಬಾಚ್ಕೊಂಡು ಹೋಗ್ತಾರೆ. ಇದನ್ನ ಅರಿತ ಪೊಲೀಸರು ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಕಳ್ಳರಿಂದ ಟೊಮ್ಯಾಟೋಗೆ ರಕ್ಷಣೆ ನೀಡಲು ತೆಲಂಗಾಣ ಪೊಲೀಸರು ಮೂವರು ಸಿಬ್ಬಂದಿಯನ್ನ ನಿಯೋಜಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

WATCH: ಟೊಮ್ಯಾಟೋ ಕಾಯಲು ಬಂದ ನಾಗರಹಾವು.. ಪಲ್ಟಿಯಾದ ಲಾರಿಗೆ ಪೊಲೀಸ್ ಟೈಟ್ ಸೆಕ್ಯೂರಿಟಿ!

https://newsfirstlive.com/wp-content/uploads/2023/07/Tamoto-Snake.jpg

Load More