newsfirstkannada.com

VIDEO: ಮಾವ ಮಲಗಿದ್ದ ಹಾಸಿಗೆಗೆ ಬೆಂಕಿ ಹಾಕಿದ ಸೊಸೆ.. ವಿಡಿಯೋ ರೆಕಾರ್ಡ್‌ ಮಾಡಿದ ಮಗ; ಆಮೇಲೆ ಏನಾಯ್ತು?

Share :

01-11-2023

    ಮನೆಯಲ್ಲಿ ಮಾವ ಮಲಗಿದ್ದ ಹಾಸಿಗೆ ಮೇಲೆ ಬೆಂಕಿ ಹಾಕಿದ ಸೊಸೆ

    ತಕ್ಷಣವೇ ಬೆಂಕಿಯನ್ನು ಹಾಸಿಗೆಯಿಂದ ಕೆಳಗೆ ಹಾಕಿದ ವೃದ್ಧನ ಮಗ

    ಬೆಂಕಿ ಹಾಕಿದ ಸೊಸೆ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಲು ಆಗ್ರಹ

ಈಗಂತೂ ಮಾನವೀಯತೆ ಮರೆಯಾಗುವುದರ ಜೊತೆಗೆ ಬಾಂಧವ್ಯಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇತ್ತೀಚೆಗೆ ಪಾಪಿ ಮಗನೊಬ್ಬ ಹೆತ್ತ ತಾಯಿಗೆ ಹಿಗ್ಗಾಮುಗ್ಗ ಹಲ್ಲೆ ಮಾಡೋ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಂದು ಅಂತಹದೇ ಅಮಾನವೀಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮನೆಯಲ್ಲಿ ಮಾವ ಮಲಗಿದ್ದ ಹಾಸಿಗೆ ಮೇಲೆ ಸೊಸೆ ಬೆಂಕಿ ಹಾಕಿದ್ದಾಳೆ. ಹಾಸಿಗೆ ಮೇಲೆ ಸೊಸೆ ಬೆಂಕಿ‌ ಹಾಕುವ ವಿಡಿಯೋವನ್ನು ಮಗ ರೆಕಾರ್ಡ್ ಮಾಡಿದ್ದಾನೆ. ತಕ್ಷಣವೇ ಬೆಂಕಿಯನ್ನು ಹಾಸಿಗೆಯಿಂದ ಕೆಳಗೆ ಹಾಕಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಮಾವ ಮಲಗಿದ್ದ ಹಾಸಿಗೆ ಮೇಲೆ ಸೊಸೆ ಬೆಂಕಿ ಹಾಕಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರ ಲಭ್ಯವಾಗಿಲ್ಲ. ವಿಡಿಯೋದಲ್ಲಿ ಮಗ ಹಿಂದಿಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಉತ್ತರ ಭಾರತದಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಮಾವ ಮಲಗಿದ್ದ ಹಾಸಿಗೆಗೆ ಬೆಂಕಿ ಹಾಕಿದ ಸೊಸೆ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಲು ಆಗ್ರಹಿಸುತ್ತಿದ್ದಾರೆ. ಮಾವನ ಜೊತೆ ಅಮಾನವೀಯವಾಗಿ ವರ್ತಿಸಿರೋ ಸೊಸೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮಾವ ಮಲಗಿದ್ದ ಹಾಸಿಗೆಗೆ ಬೆಂಕಿ ಹಾಕಿದ ಸೊಸೆ.. ವಿಡಿಯೋ ರೆಕಾರ್ಡ್‌ ಮಾಡಿದ ಮಗ; ಆಮೇಲೆ ಏನಾಯ್ತು?

https://newsfirstlive.com/wp-content/uploads/2023/11/Viral-Video.jpg

Load More