newsfirstkannada.com

ಸೆಲ್ಫಿ ಹುಚ್ಚರೇ ಎಚ್ಚರ.. ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಟೆಕ್ಕಿ ಶವ ಪತ್ತೆ; ಆಗಿದ್ದೇನು?

Share :

Published June 24, 2024 at 4:51pm

Update June 24, 2024 at 4:52pm

  ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬೆ ಫಾಲ್ಸ್‌

  ಬೆಂಗಳೂರಿನಿಂದ 12 ಮಂದಿ ಪ್ರವಾಸಕ್ಕೆ ಹೋಗಿದ್ದಾಗ ದುರಂತ

  ನಿರಂತರ 18 ಗಂಟೆ ಶೋಧ ಕಾರ್ಯಾಚರಣೆ ಬಳಿಕ ಶವ ಪತ್ತೆ!

ಶಿವಮೊಗ್ಗ: ಅಬ್ಬಿ ಫಾಲ್ಸ್‌ ವೀಕ್ಷಣೆಗೆ ಹೋಗಿದ್ದ ಸ್ನೇಹಿತರಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಕಾಲು ಜಾರಿ ಬಿದ್ದಿದ್ದರು. ಟೆಕ್ಕಿ ವಿನೋದ್ ಫೋಟೋಗೆ ಪೋಸ್‌ ಕೊಡೋ ಜೋಶ್‌ನಲ್ಲಿ ಮೈಮರೆತಿದ್ದು ಕೊಚ್ಚಿ ಹೋಗಿದ್ದರು. ಇದೀಗ 26 ವರ್ಷದ ವಿನೋದ್ ಮೃತದೇಹ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ 12 ಮಂದಿ ಪ್ರವಾಸಿಗರು ಪ್ರವಾಸಕ್ಕೆಂದು ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬೆ ಫಾಲ್ಸ್‌ಗೆ ತೆರಳಿದ್ದರು. ಅಬ್ಬೆ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಸಾಫ್ಟ್‌ವೇರ್ ಉದ್ಯೋಗಿ ನೀರು ಪಾಲಾಗಿದ್ದರು. ನಿನ್ನೆಯಿಂದ ನಿರಂತರ ಶೋಧ ಕಾರ್ಯಾಚರಣೆ ನಡೆದಿದ್ದು ಇದೀಗ ಅಂತ್ಯವಾಗಿದೆ.

ಇದನ್ನೂ ಓದಿ: ದರ್ಶನ್ ಅಭಿಮಾನಿ ಅಂತ ರೌಡಿಸಂ.. A4 ರಘು ಪತ್ನಿಯು ಐನಾತಿ ಕಳ್ಳಿ; ಪತಿ-ಪತ್ನಿ ಕಳ್ಳಾಟ ಹೇಗಿತ್ತು ಗೊತ್ತಾ? 

ಪ್ರವಾಸಿಗನೊಬ್ಬ ಕಾಲು ಜಾರಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನಿರಂತರ 18 ಗಂಟೆ ಶೋಧ ಕಾರ್ಯಾಚರಣೆ ಬಳಿಕ ವಿನೋದ್ ಮೃತದೇಹ ಪತ್ತೆ ಹಚ್ಚಲಾಗಿದೆ.

ಇದನ್ನೂ ಓದಿ: BREAKING: ದರ್ಶನ್‌ ಗ್ಯಾಂಗ್‌ಗೆ ಬಿಗ್‌ ಶಾಕ್.. ನಾಲ್ವರು ಮಾತ್ರ ಬೇರೆ ಜೈಲಿಗೆ ಶಿಫ್ಟ್; ಕಾರಣವೇನು? 

ಅಬ್ಬಿ ಫಾಲ್ಸ್‌ನಲ್ಲಿ ಜಾರಿ ಹೋದ ವಿನೋದ್ ಮೃತದೇಹ ಕೊಚ್ಚಿ ಹೋದ ಮೇಲೆ ಬಹಳ ದೂರ ಹೋಗಿತ್ತು. ರಕ್ಷಣಾ ಸಿಬ್ಬಂದಿ ರಸ್ತೆ ಕಿರಿದಾದ ಹಿನ್ನೆಲೆಯಲ್ಲಿ ಕಂಬಕ್ಕೆ ಮೃತದೇಹವನ್ನು ಕಟ್ಟಿ ತೆಗೆದುಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಅಬ್ಬಿ ಫಾಲ್ಸ್‌ ಪ್ರವಾಸಕ್ಕೆ ಬಂದಿದ್ದ 12 ಪ್ರವಾಸಿಗರ ಪೈಕಿ ಬಳ್ಳಾರಿ ಮೂಲದ ವಿನೋದ್ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಲ್ಫಿ ಹುಚ್ಚರೇ ಎಚ್ಚರ.. ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಟೆಕ್ಕಿ ಶವ ಪತ್ತೆ; ಆಗಿದ್ದೇನು?

https://newsfirstlive.com/wp-content/uploads/2024/06/death17.jpg

Load More