newsfirstkannada.com

116ಕ್ಕೂ ಹೆಚ್ಚು.. ಹತ್ರಾಸ್‌ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ; ಅಸಲಿಗೆ ಆಗಿದ್ದೇನು?

Share :

Published July 2, 2024 at 10:17pm

  ಹತ್ರಾಸ್‌ನಲ್ಲಿ ಹೆಣಗಳ ರಾಶಿ, ಕಣ್ಣೀರು ಸುರಿಸುತ್ತಿರುವ ಸಾವಿರಾರು ಜನ

  ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ ನೂರಾರು ಮಂದಿ

  ಭೋಲೆ ಬಾಬಾರ ಪ್ರವಚನದಲ್ಲಿ ಮಹಾ ದುರಂತಕ್ಕೆ ಕಾರಣವೇನು?

ಉತ್ತರಪ್ರದೇಶದಲ್ಲಿ ಕಂಡು ಕೇಳರಿಯದಂತಹ ದುರಂತವೊಂದು ಸಂಭವಿಸಿದೆ. ಶಿವನ ಆರಾಧನೆ ಮಾಡಿ ವಾಪಸ್​ ಆಗುತ್ತಿದ್ದವರ ಮೇಲೆ ಏಕಾಏಕಿ ಜವರಾಯನ ದರ್ಶನವಾಗಿ ಬಿಟ್ಟಿದೆ. ಮಕ್ಕಳು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಮಂದಿ ಬಲಿ ಪಡೆದ ಭೋಲೆ ಬಾಬಾ ಯಾರು..? ಏನಿವರ ಮಿಸ್ಟ್ರಿ? 

ಹೌದು.. ಘೋರ, ನಿಜಕ್ಕೂ ಘನಘೋರ.. ಸಾಲು ಸಾಲು ಹೆಣಗಳ ರಾಶಿ. ಕಣ್ಣೀರು ಸುರಿಸುತ್ತಿರುವ ಹಲವಾರು ಜನರು. ಈ ದೃಶ್ಯಗಳನ್ನ ನೋಡುತ್ತಾ ಇದ್ರೆ ಇದೇನು ಸ್ಮಶಾನವೋ ಅಂತಾ ಅನಿಸುಬಿಡುತ್ತೆ. ಅಷ್ಟೂ ಭೀಕರವಾಗಿರುವ ಘಟನೆ ನಡೆದು ಹೋಗಿದೆ.

ಭೋಲೆ ಬಾಬಾರ ಪ್ರವಚನದಲ್ಲಿ ನಡೀತು ಮಹಾ ದುರಂತ!
ಹತ್ರಾಸ್​ ಕಾಲ್ತುಳಿತಕ್ಕೆ ನೂರಾರು ಮಂದಿ ದಾರುಣ ಬಲಿ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಧಾರ್ಮಿಕ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು. ಹತ್ರಾಸ್​ನ ಭಾನ್ಪುರ್​ ಎಂಬ ಗ್ರಾಮದಲ್ಲಿ ವಿಶಾಲವಾದ ಬಯಲಿನಲ್ಲಿ ಟೆಂಟ್ ಹಾಕಿ, ಶಿವನ ಆರಾಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನಸಂದಣಿ ಉಂಟಾಗಿದ್ದು, ಮಹಾದುರಂತ ಸಂಭವಿಸಿದೆ.

ಭೋಲೆ ಬಾಬಾ ಪ್ರವಚನ ನಡೆಯುತ್ತಿದ್ದ ಸಂದರ್ಭಲ್ಲಿ ಕಾಲ್ತುಳಿತ ಸಂಭವಿಸಿಬಿಟ್ಟಿದೆ. ಬಯಲಿನಲ್ಲಿ ಹಾಕಲಾಗಿದ್ದ ಟೆಂಟ್​ನೊಳಗೆ ಗಾಳಿಯಾಡಲು ಸಣ್ಣ ರಂಧ್ರವೂ ಇರಲಿಲ್ಲ. ಇದರ ಪರಿಣಾಮ ಟೆಂಟ್​ನೊಳಗೆ ಜನ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.

ದುರದೃಷ್ಟವಶಾತ್, ಅಲ್ಲಿ ಒಂದೇ ಒಂದು ಪ್ರವೇಶದ್ವಾರವಿತ್ತು. ಉಸಿರಾಟದ ತೊಂದರೆಯಿಂದಾಗಿ ಪ್ರವೇಶದ್ವಾರದ ಕಡೆಗೆ ಏಕಾಏಕಿ ಜನರು ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 116ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಭಕ್ತರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅನ್ನೋ ಮಾಹಿತಿ ಇದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದೆ.

ಘಟನೆಯಲ್ಲಿ ಸಾವಿಗೀಡಾದ 100ಕ್ಕೂ ಹೆಚ್ಚು ಮೃತದೇಹಗಳನ್ನ ಹತ್ರಾಸ್​ನ ಎಟಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ. ಈ ದುರಂತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ.. ಭೋಲೆ ಬಾಬಾ ಪ್ರವಚನ ಕೇಳಲು ಬಂದಿದ್ದ 80ಕ್ಕೂ ಹೆಚ್ಚು ಭಕ್ತರ ಸಾವು; ಆಗಿದ್ದೇನು?

ಅದೇನೆ ಹೇಳಿ… ದುರದೃಷ್ಟವೋ? ವಿಧಿ ಲಿಖಿತವೋ? ಗೊತ್ತಿಲ್ಲ. ಪ್ರವಚನ ಕೇಳಲು ಬಂದಿದ್ದ ನೂರಾರು ಜನ ಹೀಗೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದಂತೂ ದುರಂತವೇ ಸರಿ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

116ಕ್ಕೂ ಹೆಚ್ಚು.. ಹತ್ರಾಸ್‌ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/07/Hathras-stampede.jpg

Load More