newsfirstkannada.com

×

ಡಿವೋರ್ಸ್​ ಕೇಳಿದ ದಂಪತಿಗೆ ಗವಿಸಿದ್ದೇಶ್ವರ ಮಠಕ್ಕೆ ಹೋಗಿ ಬನ್ನಿ ಎಂದ ಜಡ್ಜ್​.. ಆಮೇಲೇನಾಯ್ತು?

Share :

Published September 22, 2024 at 6:08am

    ಡಿವೋರ್ಸ್​ಗಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿ

    ಡಿವೋರ್ಸ್​ ಕೇಳಿದ್ದವರಿಗೆ ಮಠಕ್ಕೆ ಹೋಗಿ ಅಂತ ಜಡ್ಜ್ ಸೂಚನೆ

    ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಹೋಗುವುದಾಗಿ ಒಪ್ಪಿದ ದಂಪತಿ

ಮುನಿಸು ಎಂಬುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ. ಪತಿ-ಪತ್ನಿ ಪರಸ್ಪರ ಎಷ್ಟೇ ದೂರಿದರೂ ಮುನಿಸು ಮರೆತು ಹೊಂದಿಕೊಂಡು ಜೀವನ ಮಾಡುತ್ತಾರೆ. ಇತ್ತೀಚೆಗೆ ದಾಂಪತ್ಯ ಕಲಹಗಳು ದ್ವೇಷಕ್ಕೆ ತಿರುಗಿ ಪತಿ-ಪತ್ನಿ ವಿರುದ್ಧ ದಿಕ್ಕಿನಲ್ಲೂ ಸಾಗಿದ ಉದಾಹರಣೆಗಳೂ ಸಾಕಷ್ಟಿವೆ. ಹಲವು ಪ್ರಕರಣಗಳು ಕೋರ್ಟ್​ ಮೆಟ್ಟಿಲೇರಿ ಕೋರ್ಟ್​​ನಲ್ಲಿ ಸುಖಾಂತ್ಯಕ್ಕೆ ತಿರುಗಿದ ಉದಾಹರಣೆಗಳೂ ಇವೆ.

ಡಿವೋರ್ಸ್​ಗಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚನೆ ಕೊಟ್ಟಿದ್ದಾರೆ. ಡಿವೋರ್ಸ್​ ಕೇಳಿದ್ದವರಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚಿಸಿದ್ದು ಹಲವರಲ್ಲಿ ಕುತೂಹಲ ಮೂಡಿಸಿದೆ. 4 ವರ್ಷದ ಹಿಂದೆ ಗದಗ ಜಿಲ್ಲೆಯ ದಂಪತಿ ಡಿವೋರ್ಸ್​ ಬೇಕು ಅಂತ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 17ರಂದು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ.ಶ್ರೀ ಕೃಷ್ಣ ದೀಕ್ಷಿತ್ ಅವರು, ದಂಪತಿಗೆ ಬುದ್ಧಿವಾದ ಹೇಳಿದ್ದಾರೆ. ಗಂಡ-ಹೆಂಡತಿ ಜಗಳ ಕಾಮನ್. ಸಣ್ಣ ವಿಚಾರಕ್ಕೆ ಮುನಿಸಿಕೊಂಡು ದೂರ ಆಗಿ ಜೀವನ ಹಾಳ್ ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಿ. ಏನಾದರೂ ಮಾನಸಿಕವಾಗಿ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿಗೆ ಹೋಗಿ ಅಂತ ತಿಳಿ ಹೇಳಿದ್ದಾರೆ.

ಇದನ್ನೂ ಓದಿ: ಸ್ನಾನ ಮಾಡದ ಗಂಡನಿಗೆ ಡಿವೋರ್ಸ್‌.. 40 ದಿನದ ನವವಿವಾಹಿತೆ ನಿರ್ಧಾರಕ್ಕೆ ಎಲ್ರೂ ಶಾಕ್‌; ಅಸಲಿಗೆ ಆಗಿದ್ದೇನು? 

ನಾವು ಮನೋವೈದ್ಯರ ಬಳಿ ಹೋಗಿದ್ವಿ. ಆದರೂ ಸಮಸ್ಯೆ ಬಗೆಹರಿದಿಲ್ಲ ಅಂತ ಕೋರ್ಟ್​ಗೆ ದಂಪತಿ ಹೇಳಿದ್ದಾರೆ. ಆಗ ನ್ಯಾಯಮೂರ್ತಿಗಳು ಯಾವುದಾದ್ರೂ ಮಠಾಧೀಶರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಜಡ್ಜ್ ಮಾತಿಗೆ ಒಪ್ಪಿದ ಗಂಡ ಗದಗ್​ನ ತೋಂಟದಾರ್ಯ ಮಠದ ಸ್ವಾಮೀಜಿ ಹತ್ರ ಹೋಗ್ತೀವಿ ಅಂತ ಹೇಳಿದ್ದಾನೆ. ಕೋರ್ಟ್​ನಲ್ಲಿ ಗಂಡನ ಮಾತಿಗೆ ಒಪ್ಪದ ಹೆಂಡತಿ ತೋಂಟದಾರ್ಯ ಮಠ ಬೇಡ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗ್ತೀವಿ ಅಂದಿದ್ದಾಳೆ. ಈ ವೇಳೆ ನ್ಯಾಯಮೂರ್ತಿಗಳು ಒಳ್ಳೆಯದೇ ಆಯ್ತು. ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಂತೆ ಇದ್ದಾರೆ. ಅವರ ಭಾಷಣ ಕೇಳಿದ್ದೇನೆ. ಅವರ ಬಳಿಯೇ ಹೋಗಿ ಅಂತ ಸಲಹೆ ಕೊಟ್ಟಿದ್ದಾರೆ.

ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಒಂದಾಗಿರುವ ಗವಿಸಿದ್ದೇಶ್ವರ ಮಠ ಕೊಪ್ಪಳ ಜಿಲ್ಲೆಯಲ್ಲಿದೆ. ಇದನ್ನು ಗವಿಮಠ ಎಂತಲೂ ಕರೆಯುತ್ತಾರೆ. ಇದು ಉತ್ತರ ಕರ್ನಾಟಕದ ಹಳೆಯ ಮಠಗಳಲ್ಲಿ ಒಂದು. 800 ವರ್ಷಗಳಷ್ಟು ಹಳೆಯದಾಗಿರುವ ಈ ಮಠ ಲಿಂಗಾಯತ ಮಠಗಳಲ್ಲಿ ಒಂದು.

ಪರಸ್ಪರ ದೂರವಾಗಿದ್ದ ಪತಿ-ಪತ್ನಿಗೆ ಗವಿ ಮಠಕ್ಕೆ ಹೋಗಿ, ಶ್ರೀಗಳ ಆಶೀರ್ವಾದ ಪಡೆದು ಹೊಸ ಜೀವನ ನಡೆಸಿ ಅಂತ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ. ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಸೆ.22ರಂದು ಇಂದು ದಂಪತಿಗಳು ಗವಿಸಿದ್ದೇಶ್ವರ ಮಠಕ್ಕೆ ಹೋಗುವುದಾಗಿ ಒಪ್ಪಿದ್ದಾರೆ. ಇಂದು ಈ ದಂಪತಿಯ ನಿರ್ಧಾರ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿವೋರ್ಸ್​ ಕೇಳಿದ ದಂಪತಿಗೆ ಗವಿಸಿದ್ದೇಶ್ವರ ಮಠಕ್ಕೆ ಹೋಗಿ ಬನ್ನಿ ಎಂದ ಜಡ್ಜ್​.. ಆಮೇಲೇನಾಯ್ತು?

https://newsfirstlive.com/wp-content/uploads/2024/09/Dharwad-High-court.jpg

Load More