newsfirstkannada.com

Video: ಹೆಣದ ಮುಂದೆ ವೈದ್ಯನ ಹಣದ ಆಸೆ.. ಮರಣೋತ್ತರ ಪರೀಕ್ಷೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಡಾಕ್ಟರ್​ ಅಮಾನತು

Share :

15-09-2023

    ಮರಣೋತ್ತರ ಪರೀಕ್ಷೆಗೂ ಮುನ್ನ ಹಣ ಕೇಳಿದ ವೈದ್ಯ

    2 ಸಾವಿರ ಕೊಟ್ಟರು ಮತ್ತೊಂದು ಸಾವಿರ ಬೇಕೆಂದು ಪಟ್ಟು

    ವೈದ್ಯನ ಅಸಿಸ್ಟೆಂಟ್‌ಗಳು ಸಹ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ

ಆತ್ಮಹತ್ಯೆ ಮಾಡ್ಕೊಂಡ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೂ ವೈದ್ಯನೊಬ್ಬ ಹಣ ಕೇಳಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ಶ್ರೀನಿವಾಸು ಎಂಬಾತ ಮರಣೋತ್ತರ ಪರೀಕ್ಷೆ ಮಾಡುವ ಮುನ್ನ 3 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. 2 ಸಾವಿರ ರೂಪಾಯಿ ನೀಡಿದರು ಸಹ ಮತ್ತೊಂದು ಸಾವಿರ ಬೇಕು ಎಂದು ಪಟ್ಟು ಹಿಡಿದಿದ್ದಾನೆ.

ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದ ವ್ಯಕ್ತಿಯನ್ನ ಕುಟುಂಬಸ್ಥರು, ಮೃತದೇಹವನ್ನು ಕೊಡಗು ಜಿಲ್ಲೆಯ ವಿರಾಜಪೇಟೆಯ ಆಸ್ಪತ್ರೆಗೆ ಕರೆತಂದು ಮರಣೋತ್ತರ ಪರೀಕ್ಷೆ ಮಾಡುವಂತೆ ವೈದ್ಯರ ಬಳಿ ಬಂದು ಮನವಿ ಮಾಡಿದ್ರು. ಆದರೆ ವೈದ್ಯ ಶ್ರೀನಿವಾಸು ಮಾತ್ರ ಹಣಕ್ಕಾಗಿ ಬಾಯಿಬಿಟ್ಟಿದ್ದಾನೆ.

ಬಳಿಕ ವೈದ್ಯನ ಲಂಚಾವತಾರದ ದೃಶ್ಯವನ್ನ ವ್ಯಕ್ತಿಯ ಕುಟುಂಬಸ್ಥರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಇದಷ್ಟೇ ಅಲ್ಲದೇ, ಮರಣೋತ್ತರ ಪರೀಕ್ಷೆ ಬಳಿಕವೂ ವೈದ್ಯನ ಅಸಿಸ್ಟೆಂಟ್‌ಗಳು ಸಹ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಲಂಚಾವತಾರದ ಘಟನೆ ಬೆಳಕಿಗೆ ಬಂದಂತೆ ವಿರಾಜಪೇಟೆ ಶಾಸಕ ಪೊನ್ನಣ್ಣ ಲಂಚಕೋರ ವೈದ್ಯನ ಅಮಾನತಿಗೆ ಆದೇಶ ನೀಡಿದ್ದಾರೆ. ಅದರಂತೆಯೇ ವೈದ್ಯ ಶ್ರೀನಿವಾಸ ಮೂರ್ತಿ ಅವರನ್ನು ಅಮಾನತು ಮಾಡಲಾಗಿದ್ದು, ಭ್ರಷ್ಟಾಚಾರ ವಿರೋಧಿ ಕಾಯ್ದೆ ಅಡಿಯಲ್ಲಿ ತನಿಖೆಗೂ ಆದೇಶ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹೆಣದ ಮುಂದೆ ವೈದ್ಯನ ಹಣದ ಆಸೆ.. ಮರಣೋತ್ತರ ಪರೀಕ್ಷೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಡಾಕ್ಟರ್​ ಅಮಾನತು

https://newsfirstlive.com/wp-content/uploads/2023/09/Doctor-1.jpg

Load More