ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿದ್ದ ನೇತ್ರಾವತಿ
ಸಕ್ರೇಬೈಲು ಆನೆ ಬಿಡಾರದಿಂದ ಮೈಸೂರಿನತ್ತ ಆಗಮಿಸಿದ ಆನೆ
5ನೇ ಬಾರಿ ಮರಿಗೆ ಜನ್ಮ ನೀಡಿದ ನೇತ್ರಾವತಿ ಆನೆ
ಶಿವಮೊಗ್ಗ: ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
28 ವರ್ಷದ ನೇತ್ರಾವತಿ ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿತ್ತು. ಸಕ್ರೇಬೈಲು ಆನೆ ಬಿಡಾರದಿಂದ ಆಗಮಿಸಿತ್ತು. ಇಂದು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿತ್ತು. ಇದೀಗ ನೇತ್ರಾವತಿ ಆನೆ 5ನೇ ಬಾರಿ ಮರಿ ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದೆ.
ಇನ್ನು ನೇತ್ರಾವತಿ ಆನೆಯನ್ನು ವೈದ್ಯ ಡಾ. ವಿನಯ್ ಪರಿಶೀಲಿಸಿದ್ದರು. ಕಳೆದ 3 ತಿಂಗಳ ಹಿಂದೆ ಡಾ.ವಿನಯ್ ಅನಾರೋಗ್ಯಕ್ಕೀಡಾಗಿ ರಜೆಯಲ್ಲಿದ್ದರು. ಆದರೆ ಆನೆ ಗರ್ಭ ಧರಿಸಿದ್ದು, ಗೊತ್ತಾಗದೆ ನೇತ್ರಾವತಿಯನ್ನು ಕರೆತಂದಿದ್ದರು.
ಸದ್ಯ ಬಾಣಂತಿ ಆನೆಯ ಆರೈಕೆಯಲ್ಲಿ ತೊಡಗಿರುವ ಮಾವುತರು, ಕಾವಾಡಿಗರು ತೊಡಗಿದ್ದಾರೆ. ಹಾಗಾಗಿ ಇಂದಿನ ಜಂಬೂ ಸವಾರಿಯಲ್ಲಿ ನೇತ್ರಾವತಿ ಭಾಗವಹಿಸುವುದು ಅನುಮಾನ. ಮತ್ತೊಂದೆಡೆ ಗರ್ಭಿಣಿ ಆನೆಯನ್ನು ಮೆರವಣಿಗೆಗೆ ಕರೆತಂದ ಬಿಡಾರದ ವೈದ್ಯರು-ಸಿಬ್ಬಂದಿ ಬಗ್ಗೆ ಸ್ಥಳೀಯರ ಅಸಮಾಧಾನ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ