ಮಾಲೀಕ ಸತ್ತ ಕೆಲವೇ ಹೊತ್ತಿನಲ್ಲಿ ಎತ್ತು ಕೂಡ ಸಾವು
ಇಬ್ಬರನ್ನು ಅಕ್ಕ-ಪಕ್ಕ ಇಟ್ಟು ಸಮಾಧಿ ಮಾಡಿದ ಗ್ರಾಮಸ್ಥರು
ವಿಸ್ಮಯಕಾರಿ ಘಟನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಕಣ್ಣೀರು
ಗದಗ: ಮಾಲೀಕ ಸಾವನ್ನಪ್ಪಿದ ಘಟನೆ ಕೇಳಿ ಸಾಕುಪ್ರಾಣಿಗಳು ಕಣ್ಣೀರು ಹಾಕಿರೋದನ್ನು ಕೇಳಿರಬಹುದು ಅಥವಾ ನೋಡಿರಬಹುದು. ಅಷ್ಟೇ ಏಕೆ ಸಾಕು ಪ್ರಾಣಿಗಳು ಮಾಲೀಕ ಸತ್ತ ಸುದ್ದಿ ಕೇಳಿ ಅನ್ನ ನೀರು ಬಿಟ್ಟಿದ್ದೂ ಇದೆ. ಆದರೆ ಇಲ್ಲೊಂದು ಎತ್ತು ರೈತ ಸಾವನ್ನಪ್ಪಿದ ಕೆಲವೇ ಹೊತ್ತಿನಲ್ಲಿ ಉಸಿರು ನಿಲ್ಲಿಸಿದೆ.
ಎತ್ತು ಕೂಡ ಮೃತ್ಯು
ಹೌದು. ರೈತ ಮತ್ತು ಆತನ ಎತ್ತು ಸಾವಿನಲ್ಲಿ ಒಂದಾದ ಘಟನೆ ಗದಗ ತಾಲ್ಲೂಕಿನ ಬೆನಕನಕೊಪ್ಪದಲ್ಲಿ ನಡೆದಿದೆ. ಭೀಮಪ್ಪ ಕಣಗಿನಹಾಳ (90) ನಿನ್ನೆ ಅಕಾಲಿಕವಾಗಿ ಮರಣ ಹೊಂದಿದ್ದರು. ಭೀಮಪ್ಪ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಎತ್ತು ಕೊನೆಯುಸಿರೆಳೆದಿದೆ.
ಅಂದಹಾಗೆಯೇ ಭೀಮಪ್ಪ ಕಣಗಿನಹಾಳ ಸಾಕಿದ್ದ ಎತ್ತು ಕೃಷಿಕಾರ್ಯದಲ್ಲಿ ಜೊತೆಗೂಡಿ ಅದೆಷ್ಟೋ ಸಹಾಯ ಮಾಡಿತ್ತು. ಆದರೆ ಮಾಲೀಕ ಸತ್ತ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದೆ.
ಗ್ರಾಮಸ್ಥರು ಕಣ್ಣೀರು
ಇನ್ನು ಮಾಲೀಕನ ಸಾವಿನ ಬೆನ್ನಲ್ಲೇ ಎತ್ತು ಸಾವನ್ನಪ್ಪಿದ್ದನ್ನ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಈ ವಿಸ್ಮಯಕಾರಿ ಘಟನೆ ಕಂಡ ಸುತ್ತಮುತ್ತಲಿನ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ. ಗ್ರಾಮಸ್ಥರು ಮತ್ತು ಮನೆಯವರು ಮೃತ ಮಾಲೀಕ ಮತ್ತು ಎತ್ತನ್ನು ಜಮೀನನಲ್ಲಿ ಅಕ್ಕ-ಪಕ್ಕ ಇಟ್ಟು ಸಮಾಧಿ ಮಾಡಿದ್ದಾರೆ. ಲಿಂಗಾಯತ ವಿಧಿವಿಧಾನದಂತೆ ರೈತ ಭೀಮಪ್ಪ ಮತ್ತು ಆತನ ಎತ್ತಿನ ಅಂತ್ಯಸಂಸ್ಕಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ