newsfirstkannada.com

Prakash Raj Trolls: ‘ಚಂದ್ರಯಾನ-3 ತೆಗೆದ ಮೊದಲ ಪಿಕ್ಚರ್’- ಪ್ರಕಾಶ್ ರಾಜ್‌, ಟ್ರೋಲರ್‌ಗಳ ಮಧ್ಯೆ ಸಖತ್ ಫೈಟ್‌

Share :

23-08-2023

    ಚಂದ್ರಯಾನ-3 ತೆಗೆದ ಫೋಟೋದಲ್ಲಿ ಪ್ರಕಾಶ್ ರಾಜ್‌ ಪ್ರತ್ಯಕ್ಷ!

    ಚಾಯಾವಾಲನ ಪೋಟೋಗೆ ಟೀಕೆ ವ್ಯಕ್ತವಾದ ಮೇಲೂ ಟಾಂಗ್

    ಪ್ರಕಾಶ್ ರಾಜ್‌ಗೆ ಟ್ರೋಲಿಗರು ತಿರುಗೇಟು ಕೊಟ್ಟ ಫೋಟೋ ಇವು

ಚಂದ್ರಯಾನ-3 ವಿಚಾರದಲ್ಲಿ ನಟ ಪ್ರಕಾಶ್ ರಾಜ್ ಹಾಗೂ ಟ್ರೋಲಿಗರ ನಡುವೆ ನಡೆಯುತ್ತಿರುವ ಏಟು-ಎದಿರೇಟು ತಾರಕಕ್ಕೇರಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗುತ್ತಿದ್ದಂತೆ ಟ್ರೋಲಿಗರು ಸೋಷಿಯಲ್ ಮೀಡಿಯಾದಲ್ಲಿ ಡಿಸೈನ್, ಡಿಸೈನ್ ಫೋಟೋ, ವಿಡಿಯೋಗಳನ್ನ ಶೇರ್ ಮಾಡುತ್ತಿದ್ದಾರೆ. ಟ್ರೋಲ್‌ ಪೇಜ್‌ಗಳ ಫೋಟೋಗಳನ್ನು ಸಾವಿರಾರು ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಾ ನಟ ಪ್ರಕಾಶ್ ರಾಜ್ ಅವರಿಗೆ ಕಾಲೆಳೆಯುತ್ತಿದ್ದಾರೆ. ನಟ ಪ್ರಕಾಶ್ ರಾಜ್‌ ಅವರ ಈ ಫೋಟೋ ಫೈಟ್ ಶುರುವಾಗಿದ್ದು ಹೇಗೆ? ಆ ಒಂದೇ ಒಂದು ಫೋಟೋ ವೈರಲ್ ಆದ ಬಳಿಕ ಪ್ರಕಾಶ್ ರಾಜ್‌ ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದ ಮೂರು ದಿನದ ಹಿಂದಷ್ಟೇ ಅಂದ್ರೆ ಆಗಸ್ಟ್ 20ರಂದು ನಟ ಪ್ರಕಾಶ್ ರಾಜ್ ಅವರು ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದ್ರಶ್ಯ ಎಂದು ಚಾಯ್‌ವಾಲನ ಫೋಟೋ ಶೇರ್ ಮಾಡಿದ್ದರು. ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ನೆಟ್ಟಿಗರು, ಟ್ರೋಲ್ ಪೇಜ್‌ನ ಅಡ್ಮಿನ್‌ಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ‘ಚಾಯ್​ವಾಲಾ ಅಂದ್ರೆ ಕೇವಲ ಮೋದಿಯಲ್ಲ’- ಟ್ರೋಲಿಗರಿಗೆ ಬುದ್ಧಿವಾದ ಹೇಳಿದ ನಟ ಪ್ರಕಾಶ್ ರಾಜ್

ಚಾಯಾವಾಲನ ಪೋಟೋಗೆ ಭಾರೀ ಟೀಕೆ ವ್ಯಕ್ತವಾದ ಮೇಲೂ ನಟ ಪ್ರಕಾಶ್ ರಾಜ್ ಮತ್ತೆ ನೆಟ್ಟಿಗರನ್ನು ಕೆಣಕಿದ್ರು. ಕೇವಲ ಚಾಯ್​ವಾಲಾ ಅಂದರೆ ಪ್ರಧಾನಿ ಮೋದಿ ಮಾತ್ರ ಅಂತಾ ಅನ್​ಅಕಾಡೆಮಿ ಟ್ರೋಲಿಗರಿಗೆ ಗೊತ್ತಿರುವುದು. ಬೇರೆಯವರ ಬಗ್ಗೆ ತಿಳಿದುಕೊಂಡಿಲ್ಲ. ನಾವು ಹೆಮ್ಮೆ ಪಡುವಂತಹ 1960ರಲ್ಲಿ ನಮ್ಮ ದೇಶದವರೇ ಆದ ಮಲಯಾಳಂನ ಚಾಯ್​ವಾಲಾ ಒಬ್ಬರ ಸ್ಫೂರ್ತಿದಾಯಕ ಸ್ಟೋರಿ ಇದೆ. ನೀವು ಈ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಪ್ಲೀಸ್​ ಇದನ್ನು ಓದಿ ಎಂದು ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದರು. ಇಷ್ಟೇ ಅಲ್ಲ ದ್ವೇಷ ಮಾಡೋರಿಗೆ ದ್ವೇಷ ಮಾತ್ರ ಕಾಣಿಸುತ್ತದೆ. ನನ್ನ ಜೋಕ್​​​ ಆರ್ಮ್ಸ್ಟ್ರಾಂಗ್ ಕಾಲಕ್ಕೆ ಸಂಬಂಧಿಸಿದ್ದು. ನಮ್ಮ ಕೇರಳ ಚಾಯ್​ವಾಲಾ ಸಲೆಬ್ರೇಷನ್​ ಇದು. ನೀವು ನನ್ನನ್ನು ಟ್ರೋಲ್​ ಮಾಡಿದ್ರೆ ಯಾವ ಚಾಯ್​ವಾಲಾ ನೋಡ್ತಾರೆ. ನಿಮಗೆ ಇದು ಕೂಡ ಜೋಕ್​ ಅನಿಸಲಿಲ್ಲ ಅಂದರೆ ಈ ಜೋಕ್​ ನಾನು​ ನಿಮ್ಮ ಮೇಲೆ ಹಾಕಿದ್ದು ಎಂದರ್ಥ ಎಂದು ಬರೆದುಕೊಂಡಿದ್ದರು.

ಇಂದು ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ಅವರನ್ನು ಮತ್ತೊಮ್ಮೆ ಟ್ರೋಲಿಗರು ಟಾರ್ಗೆಟ್ ಮಾಡಿದ್ದಾರೆ. ನಟ ಪ್ರಕಾಶ್ ರಾಜ್ ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು ಧನ್ಯವಾದಗಳು ಎಂದು ಅಭಿನಂದಿಸಿದ್ದಾರೆ. ಇಷ್ಟಾದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Prakash Raj Trolls: ‘ಚಂದ್ರಯಾನ-3 ತೆಗೆದ ಮೊದಲ ಪಿಕ್ಚರ್’- ಪ್ರಕಾಶ್ ರಾಜ್‌, ಟ್ರೋಲರ್‌ಗಳ ಮಧ್ಯೆ ಸಖತ್ ಫೈಟ್‌

https://newsfirstlive.com/wp-content/uploads/2023/08/Prakash-Raj-Trolls.jpg

Load More