newsfirstkannada.com

Breaking: ಟೈಟಾನಿಕ್ ದುರಂತದ ಅವಶೇಷ ನೋಡಲು ಹೋಗಿದ್ದ ಐವರು ನಿಧನ.. ಅಮೆರಿಕ ನೌಕಾ ಸೇನೆ ಹೇಳಿದ್ದೇನು?

Share :

23-06-2023

    ಟೈಟಾನ್ ಸಬ್ ಮರ್ಸಿಬಲ್ ಸ್ಫೋಟಕ್ಕೆ ಕಾರಣ ಇನ್ನು ಸಿಕ್ಕಿಲ್ಲ

    ಸಮುದ್ರದ ಆಳಕ್ಕೆ ಹೋಗುತ್ತಿದ್ದಂತೆ ಸಂಪರ್ಕ ಕಳೆದುಕೊಂಡಿತ್ತು

    ಅಮೆರಿಕದ ನೌಕಾಪಡೆಯಿಂದ ಸಬ್ ಮರ್ಸಿಬಲ್ ಬಗ್ಗೆ ಮಾಹಿತಿ

ಉತ್ತರ ಅಟ್ಲಾಂಟಿಕ್ ಸಮುದ್ರದ ಆಳದಲ್ಲಿನ ಟೈಟಾನಿಕ್ ಶಿಪ್​ನ ಅವಶೇಷಗಳನ್ನು ವೀಕ್ಷಿಸಲು ಟೈಟಾನ್ ಸಬ್ ಮರ್ಸಿಬಲ್ ಮೂಲಕ ತೆರಳಿದ್ದ ಐವರು ಜಲಸಮಾಧಿಯಾಗಿದ್ದಾರೆ.

ಟೈಟಾನ್ ಸಬ್ ಮರ್ಸಿಬಲ್​ನಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟನ್​ನ ಹಮೀಶ್ ಹಾರ್ಡಿಂಗ್, ಓಷಿಯನ್ ಗೇಟ್ ಎಕ್ಸ್‌ಪಿಡಿಯೇಷನ್ ಸ್ಥಾಪಕ ಸಿಇಓ ಸ್ಟೋಕ್ಟನ್ ರಶ್, ಫ್ರೆಂಚ್ ಡ್ರೈವರ್ ಪೌಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ. ಈ ಬಗ್ಗೆ ಅಮೆರಿಕದ ರಕ್ಷಣಾ ಪಡೆ ಮಾಹಿತಿ ನೀಡಿದೆ.

ಸಬ್ ಮರ್ಸಿಬಲ್ ಅಟ್ಲಾಂಟಿಕ್ ಸಮುದ್ರದಲ್ಲಿ ಕಾಣೆಯಾಗಿದೆ ಎಂಬ ಮಾಹಿತಿ ಮೇರೆಗೆ ಅಮೆರಿಕದ ನೌಕಾಪಡೆ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ನೌಕಾಪಡೆಯ ಮೈಕ್ರೋಫೋನ್‌ಗಳನ್ನು ಕಾರ್ಯಾಚರಣೆಗಾಗಿ ಬಳಸಲಾಗಿತ್ತು. ಇದರಲ್ಲಿ ಸಬ್ ಮರ್ಸಿಬಲ್ ಸ್ಫೋಟ ಆಗಿದೆಂದು ಪತ್ತೆ ಹಚ್ಚಿವೆ. ಈ ಹಿನ್ನೆಲೆಯಲ್ಲಿ ಅದರಲ್ಲಿದ್ದ ಐವರು ಸಾವನ್ನಪ್ಪಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆಯ ಮಾಹಿತಿ ನೀಡಿದೆ.

ಇದನ್ನು ಓದಿ: ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋದವರು ಯಾರು? ಮುಂದುವರಿದ ಶೋಧ; ಆ್ಯಕ್ಸಿಜನ್ ಲೆವೆಲ್ ಇನ್ನು 7 ಗಂಟೆಯಷ್ಟೇ ಬಾಕಿ

ನಾರ್ತ್ ಅಟ್ಲಾಂಟಿಕ್ ಸಮುದ್ರದ 12,500 ಮೀಟರ್ ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಟೈಟಾನ್ ಸಬ್ ಮರ್ಸಿಬಲ್ ನಾಪತ್ತೆ ಆಗಿತ್ತು. ಕಳೆದ ನಾಲ್ಕು ದಿನಗಳಿಂದ ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ಮಾಡಿದ ಐವರಿಗಾಗಿ ಅಮೆರಿಕ ಸೇನೆ ನಿರಂತರ ಶೋಧ ಕಾರ್ಯ ನಡೆಸಿತ್ತು. ಕೊನೆಗೆ ಮರ್ಸಿಬಲ್ ಸ್ಫೋಟಗೊಂಡಿರುವುದಾಗಿ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಟೈಟಾನಿಕ್ ದುರಂತದ ಅವಶೇಷ ನೋಡಲು ಹೋಗಿದ್ದ ಐವರು ನಿಧನ.. ಅಮೆರಿಕ ನೌಕಾ ಸೇನೆ ಹೇಳಿದ್ದೇನು?

https://newsfirstlive.com/wp-content/uploads/2023/06/Titanic_Submersible.jpg

Load More