INDIA ಸಭೆ ನಡೆಸಿ ತೆರಳುತ್ತಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ನಾಯಕರ ಎಮರ್ಜೆನ್ಸಿ ಲ್ಯಾಂಡಿಂಗ್ ಬಗ್ಗೆ ಪೊಲೀಸರಿಂದ ಸ್ಪಷ್ಟನೆ
ಭೋಪಾಲ್: INDIA ಸಭೆ ನಡೆಸಿ ತೆರಳುತ್ತಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿದ್ದ ವಿಮಾನ ಮಧ್ಯಪ್ರದೇಶದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಬೆಂಗಳೂರಲ್ಲಿ ವಿರೋಧ ಪಕ್ಷದ ನಾಯಕರೆಲ್ಲಾ ಸೇರಿ ಇಂದು ಮಹತ್ವದ ಸಭೆ ನಡೆಸಿದ್ದರು. ಈ ಸಭೆಯ ಬಳಿಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ದೆಹಲಿಗೆ ತೆರಳುತ್ತಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತೆರಳುತ್ತಿದ್ದ ವಿಮಾನ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹವಾಮಾನ ವೈಪರಿತ್ಯವೇ ಈ ಘಟನೆ ಕಾರಣ ಎಂದು ಭೋಪಾಲ್ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ನಡೆದಿದ್ದ 26 ವಿಪಕ್ಷಗಳ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, UPA ಮೈತ್ರಿಕೂಟದ ಹೆಸರು ಬದಲಿಸಿದ್ದೇವೆ. ನಮ್ಮ ಮೈತ್ರಿಕೂಟ ಇನ್ಮುಂದೆ INDIA ಆಗಿದ್ದು, ಇದರ ಪೂರ್ಣ ಸ್ವರೂಪವನ್ನು ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲಯನ್ಸ್ ಎಂದು ಘೋಷಿಸಿದರು. ಮೈತ್ರಿ ಕೂಟದ ಹೆಸರು ಬದಲಾವಣೆಗೆ ಎಲ್ಲಾ ಪಕ್ಷಗಳು ಸಮ್ಮತಿ ಸೂಚಿಸಿವೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಅಂದು ಇನ್ನಷ್ಟು ತೀರ್ಮಾನಗಳು ಕೈಗೊಳ್ಳಲಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಘೋಷಣೆ ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ