newsfirstkannada.com

ಕೊಲೆಗಾರರಿಗೆ ಗಲ್ಲು ಶಿಕ್ಷೆಯಾಗಲಿ.. ಭೂ ವಿಜ್ಞಾನಿ ಪ್ರತಿಮಾ ಅಂತ್ಯ ಸಂಸ್ಕಾರದಲ್ಲಿ ಸಹೋದರರು, ಮಕ್ಕಳ ಕಣ್ಣೀರು

Share :

06-11-2023

    ಅಧಿಕಾರಿ ಪ್ರತಿಮಾ ಪಾರ್ಥಿವ ಶರೀರಕ್ಕೆ ಪುತ್ರ ಪಾರ್ಥ ಅಗ್ನಿ ಸ್ಪರ್ಶ

    ಗಂಡನ ಮನೆ ಎದುರು ಪಾರ್ಥಿವ ಶರೀರವನ್ನಿಟ್ಟು ಶ್ರದ್ಧಾಂಜಲಿ ಸಭೆ

    15 ದಿನದ ಹಿಂದೆ ಗೃಹ ಪ್ರವೇಶ ಮಾಡಿದ್ದ ಮನೆಯಲ್ಲಿ ಶೋಕ ಸಾಗರ

ಶಿವಮೊಗ್ಗ: ಬರ್ಬರವಾಗಿ ಹತ್ಯೆಯಾದ ಗಣಿ ಇಲಾಖೆ ಅಧಿಕಾರಿ ಪ್ರತಿಮಾರ ಅಂತ್ಯಕ್ರಿಯೆ ಕುಟುಂಬಸ್ಥರ ಶೋಕ ಸಾಗರದ ಮಧ್ಯೆ ನೆರವೇರಿದೆ. ಪ್ರತಿಮಾ ಅವರಿಗೆ ಅಂತಿಮ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದ ಸಂಬಂಧಿಕರು, ಕುಟುಂಬಸ್ಥರು ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಸರ್ಕಾರ ಗಲ್ಲು ಶಿಕ್ಷೆ ವಿಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.

ಬೆಂಗಳೂರಿನ ಮನೆಯಲ್ಲಿ ಒಂಟಿಯಾಗಿದ್ದ ಸರ್ಕಾರಿ ಅಧಿಕಾರಿ ಪ್ರತಿಮಾ ಅವರನ್ನ ನಿನ್ನೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಂದು ತೀರ್ಥಹಳ್ಳಿಯಲ್ಲಿರುವ ಪತಿಯ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದ್ದು, ಕುಟುಂಬಸ್ಥರು, ಸಂಬಂಧಿಕರು ಕಣ್ಣೀರಿನ ಕಡಲಲ್ಲಿ ಅಂತಿಮ ನಮನ ಸಲ್ಲಿಸಿದರು. ಮನೆಯ ಎದುರು ಪಾರ್ಥಿವ ಶರೀರವನ್ನಿಟ್ಟು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಮೌನಾಚರಣೆ ಮೂಲಕ ಪ್ರತಿಮಾಗೆ ಅಂತಿಮ ನಮನ ಸಲ್ಲಿಸಲಾಗಿದೆ.

15 ದಿನದ ಹಿಂದಷ್ಟೇ ಗೃಹ ಪ್ರವೇಶ

ಭೂ ವಿಜ್ಞಾನಿ ಪ್ರತಿಮಾ ಅವರು 15 ದಿನದ ಹಿಂದಷ್ಟೇ ಹೊಸ ಮನೆಯ ಗೃಹ ಪ್ರವೇಶಕ್ಕೆ ತೀರ್ಥಹಳ್ಳಿಗೆ ಆಗಮಿಸಿದ್ದರು. ಸಂಬಂಧಿಕರು, ಪ್ರತಿಮಾ ಜೊತೆ ಕಳೆದ ಸಮಯವನ್ನು ಮೆಲುಕು ಹಾಕಿದರು. ಪತಿ ಸತ್ಯನಾರಾಯಣ ಅವರ ಹೊಸ ಮನೆಯಲ್ಲೇ ಅಂತಿಮ ವಿಧಿ ವಿಧಾನ ನಡೆಯಿತು. ಮೃತ ಪ್ರತಿಮಾರ ಅಂತಿಮ ದರ್ಶನ ಪಡೆದ ಕುಟುಂಬಸ್ಥರು ದುಃಖದ ಮಡುವಿನಲ್ಲಿದ್ದರು. ಪ್ರತಿಮಾ ಸಹೋದರರಾದ ಪ್ರತೀಶ್ ಅವರು ಮಾತನಾಡಿ ಇನ್ನಾದ್ರೂ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡಿ ಎಂದು ಒತ್ತಾಯಿಸಿದ್ದಾರೆ.

ಪ್ರತಿಮಾರ ಪಾರ್ಥಿವ ಶರೀರಕ್ಕೆ ಪ್ರತಿಮಾ-ಸತ್ಯನಾರಾಯಣ ದಂಪತಿಯ ಪುತ್ರ ಪಾರ್ಥ ಅಗ್ನಿ ಸ್ಪರ್ಶ ಮಾಡಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ. ಪ್ರತಿಮಾ ಅವರ ಅಂತಿಮ ದರ್ಶನ ಪಡೆದ ಪುತ್ರ ಪಾರ್ಥ, ಸಹೋದರರಾದ ಪ್ರತೀಶ್ ಮತ್ತು ಪ್ರವೀಶ್, ತಾಯಿ ಯಶೋದಮ್ಮ ಮತ್ತು ಅತ್ತೆ ಪ್ರೇಮಕ್ಕ ಅವರು ಅಂತ್ಯ ಸಂಸ್ಕಾರದ ವೇಳೆ ಶೋಕ ಸಾಗರದಲ್ಲಿ ಮುಳುಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆಗಾರರಿಗೆ ಗಲ್ಲು ಶಿಕ್ಷೆಯಾಗಲಿ.. ಭೂ ವಿಜ್ಞಾನಿ ಪ್ರತಿಮಾ ಅಂತ್ಯ ಸಂಸ್ಕಾರದಲ್ಲಿ ಸಹೋದರರು, ಮಕ್ಕಳ ಕಣ್ಣೀರು

https://newsfirstlive.com/wp-content/uploads/2023/11/Prathima-6.jpg

Load More