newsfirstkannada.com

ಐವರು ಶಂಕಿತ ಉಗ್ರರ ಬಂಧನ ಪ್ರಕರಣ; ನಜೀರ್​​ಗೆ ಹಣ ತಲುಪಿಸುತ್ತಿದ್ದ ಜನರಲ್​ ಸ್ಟೋರ್​ ಮಾಲೀಕ

Share :

13-08-2023

    ಬೆಂಗಳೂರು ಶಂಕಿತ ಉಗ್ರರ ಬಂಧನ ಪ್ರಕರಣ

    ನಜೀರ್‌ಗೆ ಹಣ ತಲುಪಿಸುತ್ತಿದ್ದ ಅಂಗಡಿ ಮಾಲೀಕ

    ಕಮೀಷನ್ ಆಸೆಗೆ ಬಿದ್ದು ಹಣ ತಲುಪಿಸಲು ಈತ?

ಬೆಂಗಳೂರು: ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಉಗ್ರ ನಜೀರ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಉಗ್ರ ನಜೀರ್‌ಗೆ ಹಣ ತಲುಪಿಸುತ್ತಿರೋದು ಯಾರು ಅನ್ನೋದು ಬಯಲಾಗಿದೆ.

ಕಳೆದ 8 ತಿಂಗಳಿನಿಂದ ನಜೀರ್‌ಗೆ ಜನರಲ್ ಸ್ಟೋರ್ ಮಾಲೀಕ ಹಣ ತಲುಪಿಸುತ್ತಿದ್ದ ಅನ್ನೋದು ತಿಳಿದು ಬಂದಿದೆ. 8 ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ತಲುಪಿಸುತ್ತಿದ್ದನು. ಸದ್ಯ SLV ಜನರಲ್ ಸ್ಟೋರ್ ಮಾಲೀಕನನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ.

ಇನ್ನು, ಜನರಲ್‌ ಸ್ಟೋರ್ ಮಾಲೀಕನಿಗೆ ಈಗ ಅರೆಸ್ಟ್‌ ಆಗಿರೋ ಶಂಕಿತರೇ ಹಣ ಕೊಡ್ತಾ ಇದ್ದಿದ್ದು, ಶಂಕಿತರ ಹೇಳಿಕೆ ಆಧರಿಸಿ ಜನರಲ್ ಸ್ಟೋರ್ ಮಾಲೀಕನ ತೀವ್ರ ವಿಚಾರಣೆ ನಡೆಸಲಾಗ್ತಿದೆ. ಕಮೀಷನ್ ಆಸೆಗೆ ಬಿದ್ದು ಹಣ ತಲುಪಿಸಲು ಹೋಗ್ತಾ ಇದ್ದೆ ಎಂದು ಜನರಲ್ ಸ್ಟೋರ್ ಮಾಲೀಕ ಬಾಯ್ಬಿಟ್ಟಿದ್ದಾನೆ.

ಜುನೈದ್​ ಎಲ್ಲಿದ್ದಾನೆ ಗೊತ್ತಾ?

ಇನ್ನು ತಲೆಮರೆಸಿಕೊಂಡಿರುವ ಜುನೈದ್ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ಈಗಲೂ ದುಬೈನಲ್ಲಿ ಇರೋದ್ರ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಜುನೈದ್‌ ಜೊತೆ ಸಲ್ಮಾನ್ ಕೂಡ ಇರೋದಾಗಿ ಪೊಲೀಸರು ಹೇಳ್ತಿದ್ದಾರೆ.

ಶಂಕಿತರಿಗೆ ಗ್ರನೇಡ್‌ ತಂದು ಕೊಟ್ಟಿದ್ದೇ ಈ ಶಂಕಿತ ಉಗ್ರ ಸಲ್ಮಾನ್ ಅನ್ನೋದು ಬಯಲಾಗಿದೆ. ಗ್ರನೇಡ್‌ ಕೊಟ್ಟ ಬಳಿಕ ಅದನ್ನ ಬಳಸೋದ್ರ ಬಗ್ಗೆ ಡೆಮೋ ಕೂಡ ಕೊಟ್ಟಿದ್ದ. ಇತ್ತ ಯಾವಾಗ ಶಂಕಿತರು ಅರೆಸ್ಟ್ ಆದ್ರೋ ಆ ದಿನವೇ ಸಲ್ಮಾನ್ ದುಬೈಗೆ ಹಾರಿದ್ದಾನೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಜುನೈದ್ ಹಾಗೂ ಸಲ್ಮಾನ್‌ಗಾಗಿ ಸಿಸಿಬಿ ಬಲೆ ಬೀಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐವರು ಶಂಕಿತ ಉಗ್ರರ ಬಂಧನ ಪ್ರಕರಣ; ನಜೀರ್​​ಗೆ ಹಣ ತಲುಪಿಸುತ್ತಿದ್ದ ಜನರಲ್​ ಸ್ಟೋರ್​ ಮಾಲೀಕ

https://newsfirstlive.com/wp-content/uploads/2023/07/Nazir-2.jpg

Load More