newsfirstkannada.com

Video: ನಿದ್ರೆ ಕಣ್ಣಲ್ಲಿ 3 KM ನಡೆದುಕೊಂಡು ಕೊರಗಜ್ಜನ ಬಳಿ ಬಂದ ಬಾಲಕಿ! ಇದು ಪವಾಡವೆಂದ ಜನರು 

Share :

20-07-2023

    ಒಂದಲ್ಲ, ಮೂರು ಕಿ.ಮೀ ನಡೆದುಕೊಂಡ ಬಂದ ಬಾಲಕಿ

    ನಿದ್ರೆ ಕಣ್ಣಲ್ಲಿ ಕೊರಗಜ್ಜನ ಬಳಿ ಬಂದ 6 ವರ್ಷದ ಪೋರಿ

    ಇದೆಲ್ಲಾ ಅಜ್ಜನ ಪವಾಡವೆಂದು ಕರೆದ ಗ್ರಾಮಸ್ಥರು

ಕುಂದಾಪುರ: ಬಾಲಕಿಯೊಬ್ಬಳು ನಿನ್ನೆ ನಿದ್ರೆ ಕಣ್ಣಲ್ಲಿ ನಡೆದುಕೊಂಡು ಬಂದು ಕೊರಗಜ್ಜನ ದೇವಸ್ಥಾನದ ನಾಮಫಲಕದ ಮುಂದೆ ನಿಂತ ಘಟನೆ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ನಡೆದಿದೆ. ರಾತ್ರಿ 3 ಗಂಟೆ ಸುಮಾರಿಗೆ ಬಾಲಕಿ 3 ಕಿ.ಮೀ ದೂರ ನಡೆದುಕೊಂಡು ಬಂದಿದ್ದಾಳೆ. ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಊರಿನ ಜನರು ಇದು ಕೊರಗಜ್ಜನ ಪವಾಡ ಎಂದು ಹೇಳುತ್ತಿದ್ದಾರೆ.

ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎಂಬುವವರು ಪುಟ್ಟ ಬಾಲಕಿ ಕೊರಗಜ್ಜನ ದೇವಸ್ಥಾನದ ನಾಮಫಲಕ ಮುಂದೆ ನಿಂತಿರುವುದನ್ನು ಕಂಡು ಕಾರು ನಿಲ್ಲಿಸಿದ್ದಾರೆ. ಬಳಿಕ ಬಾಲಕಿಯನ್ನ ಮಾತಾಡಿಸಿದಾಗ ನಿದ್ದೆಗಣ್ಣಲ್ಲಿ ನಡ್ಕೊಂಡು ಬಂದ ವಿಷಯ ತಿಳಿದಿದೆ. ನಂತರ ವಿಶ್ವ ಬಾಲಕಿಯನ್ನ ಮನೆಗೆ ತಲುಪಿಸಿದ್ದಾರೆ. ಆದರೆ, ಸ್ಥಳೀಯರು ಇದು ಕೊರಗಜ್ಜನ ಪವಾಡ, ಕೊರಗಜ್ಜ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಅಂತಿದ್ದಾರೆ.

ಇನ್ನು 6 ವರ್ಷದ ಬಾಲಕಿ ನಿದ್ದೆಗಣ್ಣಲ್ಲಿ ಮೂರು ಕಿಲೋ ಮೀಟರ್​ ದೂರ ನಡೆದುಕೊಂಡು ಬಂದಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ನಿದ್ರೆ ಕಣ್ಣಲ್ಲಿ 3 KM ನಡೆದುಕೊಂಡು ಕೊರಗಜ್ಜನ ಬಳಿ ಬಂದ ಬಾಲಕಿ! ಇದು ಪವಾಡವೆಂದ ಜನರು 

https://newsfirstlive.com/wp-content/uploads/2023/07/Kundapura.jpg

Load More