newsfirstkannada.com

×

ದೇವರನಾಡಲ್ಲಿ ಭಾರೀ ಮಳೆ.. ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥ.. ಕೇದಾರನಾಥ ಯಾತ್ರೆ ತಾತ್ಕಾಲಿಕ ಬಂದ್

Share :

Published June 26, 2023 at 7:13am

    ಈ ಬಾರಿ ಡೆಹ್ರಾಡೂನ್‌, ಉತ್ತರಕಾಶಿಯಲ್ಲಿ ದಾಖಲೆಯ ವರ್ಷಧಾರೆ

    ಹರಿದ್ವಾರದಲ್ಲಿ ಕಳೆದ 24 ಗಂಟೆಗಳಲ್ಲಿ 78 ಮಿಲಿ ಮೀಟರ್ ಮಳೆ

    2013ರಲ್ಲಿ ಸಂಭವಿಸಿದ ರಣಭೀಕರ ಪ್ರವಾಹ ಯಾರೂ ಮರೆತಿಲ್ಲ

ಕೇದಾರನಾಥ: ದೇವರನಾಡು ಉತ್ತರಾಖಂಡ್‌ನಲ್ಲಿ ಭಾರೀ ಮಳೆಯಾಗಿದೆ. ವರುಣನ ಆರ್ಭಟದ ಹಿನ್ನೆಲೆ ಕೇದಾರನಾಥ ಯಾತ್ರಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಜೊತೆಗೆ ರಸ್ತೆಯಲ್ಲಿ ಗುಡ್ಡ ಕುಸಿತದ ಹಿನ್ನೆಲೆ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

2013ರಲ್ಲಿ ಉತ್ತರಾಖಂಡ್‌ ರಣಭೀಕರ ಪ್ರವಾಹಕ್ಕೆ ಸಿಲುಕಿತ್ತು. ಅಂದಿನ ಘಟನೆಯನ್ನ ಯಾರು ಮರೆಯಲು ಸಾಧ್ಯವಿಲ್ಲ. ಇದೀಗ ಉತ್ತರಾಖಂಡ್‌ನಲ್ಲಿ ಭಾರೀ ಮಳೆ ಹೆಚ್ಚಳವಾಗಿದ್ದು ರಾಜ್ಯ ಸರ್ಕಾರ ಕೇದಾರನಾಥ ಯಾತ್ರೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಸರ್ಕಾರದ ಮುಂದಿನ ಆದೇಶದವರೆಗೂ ಕೇದಾರನಾಥ ಯಾತ್ರೆಯನ್ನು ಬಂದ್ ಮಾಡಲಾಗಿದೆ. ಸೋನಪ್ರಯಾಗನಲ್ಲಿ ಹೆಚ್ಚಿದ‌ ಮಳೆಯ ಹಿನ್ನೆಲೆಯಲ್ಲಿ ರುದ್ರಪ್ರಯಾಗ ಜಿಲ್ಲಾಡಳಿತ ಇಂತಹ ಆದೇಶ ಹೊರಡಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಹರಿದ್ವಾರದಲ್ಲಿ ಕಳೆದ 24 ಗಂಟೆಗಳಲ್ಲಿ 78 ಮಿಲಿ ಮೀಟರ್ ಮಳೆಯಾಗಿದೆ. ಡೆಹ್ರಾಡೂನ್‌ನಲ್ಲಿ 33.2 ಮತ್ತು ಉತ್ತರಕಾಶಿಯಲ್ಲಿ 27.7ರಷ್ಟು ಮಳೆಯಾಗಿದೆ. ಮುಂಜಾಗೃತೆಯ ಹಿನ್ನೆಲೆಯಲ್ಲಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಮತ್ತಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಭಾರತದ ಹಲವೆಡೆ ವರುಣನ ಆರ್ಭಟ ಮುಂದುವರಿದಿದ್ದು, ಹರಿಯಾಣದಲ್ಲಿ ಕೊಚ್ಚಿ ಕೊಂಡು ಹೋಗುತ್ತಿದ್ದ ಕಾರಿನಲ್ಲಿದ್ದ ಮಹಿಳೆಯನ್ನು ಅದೃಷ್ಟವಶಾತ್ ರಕ್ಷಿಸಲಾಗಿದೆ. ಪ್ರವಾಹದ ಮಧ್ಯೆ ಮಹಿಳೆಯನ್ನು ರಕ್ಷಿಸಿದ ವಿಡಿಯೋ ರೋಮಾಂಚನಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರನಾಡಲ್ಲಿ ಭಾರೀ ಮಳೆ.. ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥ.. ಕೇದಾರನಾಥ ಯಾತ್ರೆ ತಾತ್ಕಾಲಿಕ ಬಂದ್

https://newsfirstlive.com/wp-content/uploads/2023/06/KEDARANATHA.jpg

Load More