newsfirstkannada.com

ಹೆಡ್ ಮಾಸ್ಟರ್ ಮೇಲೆ ಶಾಲಾ ಮಕ್ಕಳಿಂದಲೇ ಹಲ್ಲೆ.. ನಮಗೆ ಈ ಶಿಕ್ಷಕ ಬೇಡ ಎಂದು ಬೆದರಿಕೆ!

Share :

06-09-2023

    ನಮ್ಮ ಶಾಲೆಗೆ ಈ ಶಿಕ್ಷಕ ಬೇಡ ಎಂದು ಪ್ರತಿಭಟಿಸಿದ ಮಕ್ಕಳು

    ಹೆಡ್​ ಮಾಸ್ಟರ್​ ಮೇಲೆ ಹಲ್ಲೆ ನಡೆಸಿದ 30ಕ್ಕೂ ಅಧಿಕ ಮಕ್ಕಳು

    ಶಿಕ್ಷಕರಾಗಿ ಬಂದರೆ ಶಾಲೆ ತೊರೆಯುವುದಾಗಿ ಮಕ್ಕಳ ಬೆದರಿಕೆ

ದಾವಣಗೆರೆ: ನಮ್ಮ ಶಾಲೆಗೆ ಈ ಶಿಕ್ಷಕ ಬೇಡ ಅಂತ ಶಾಲಾ ಹೆಡ್ ಮಾಸ್ಟರ್ ಮೇಲೆ ಶಾಲಾ ಮಕ್ಕಳೇ ಹಲ್ಲೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕುಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲಾ ಹೆಡ್ ಮಾಸ್ಟರ್ ಶ್ರೀನಿವಾಸ್ ಮೂರ್ತಿ ವಿರುದ್ಧ ಸಾಕಷ್ಟು ಶಾಲಾ ಅಕ್ರಮದಲ್ಲಿ ಭಾಗಿಯಾಗಿರೋ ಆರೋಪ ಕೇಳಿಬಂದಿದ್ದು, ಶಾಲೆಗೆ ಬಂದ ಅಕ್ಕಿ, ಮೊಟ್ಟೆ ಮಾರಾಟ ಮಾಡಿರೋ ಆರೋಪ ಇದೆ. ಯಾರಾದ್ರೂ ಇದನ್ನ ಪ್ರಶ್ನೆ ಮಾಡಿದರೆ ಅವರ ಮೇಲೆ ಗಾಂಜಾ ಮಾರಾಟ ಮಾಡ್ತಾರೆ ಅಂತ ಸರ್ಕಾರಕ್ಕೆ ಸುಳ್ಳು ಪತ್ರ ಬರೆಯುತಿದ್ದರಂತೆ. ಹೀಗಾಗಿ ಇದರಿಂದ ರೊಚ್ಚಿಗೆದ್ದ 30ಕ್ಕೂ ಅಧಿಕ ಮಕ್ಕಳು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಶ್ರೀನಿವಾಸ್ ಮೂರ್ತಿ ಎಂಬ ಶಿಕ್ಷಕ ನಮಗೆ ಬೇಡ ಅವರು ಬಂದರೆ ಶಾಲೆ ತೊರೆಯುವುದಾಗಿ ಮಕ್ಕಳ ಬೆದರಿಕೆ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಡ್ ಮಾಸ್ಟರ್ ಮೇಲೆ ಶಾಲಾ ಮಕ್ಕಳಿಂದಲೇ ಹಲ್ಲೆ.. ನಮಗೆ ಈ ಶಿಕ್ಷಕ ಬೇಡ ಎಂದು ಬೆದರಿಕೆ!

https://newsfirstlive.com/wp-content/uploads/2023/09/davanagere-head-master.jpg

Load More