newsfirstkannada.com

VIDEO: ಮಹಿಳೆಗೆ ಕರೆ ಮಾಡು ಎಂದು ಪೀಡಿಸುತ್ತಿದ್ದ ವ್ಯಕ್ತಿಗೆ ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದ ಗಂಡ

Share :

16-07-2023

    ಡಿಶ್ ರಿಪೇರಿಗೆ ಬಂದಿದ್ದಾಗ ಮೊಬೈಲ್ ನಂಬರ್ ಕೊಟ್ಟಿದ್ದ

    ಬಳಿಕ ಮಹಿಳೆಗೆ ಕಾಲ್ ಮಾಡುವಂತೆ ಟಾರ್ಚರ್ ನೀಡಿದ್ದ ವ್ಯಕ್ತಿ

    ನಡುರಸ್ತೆಯಲ್ಲೇ ಅಡ್ಡಗಟ್ಟಿ ಬಳಿಕ ಅಟ್ಟಾಡಿಸಿ ಹೊಡೆದ ಗಂಡ

ಚಿಕ್ಕಮಗಳೂರು: ಮಹಿಳೆಗೆ ಕಾಲ್ ಮಾಡುವಂತೆ ಪೀಡಿಸುತ್ತಿದ್ದ ವ್ಯಕ್ತಿಗೆ ಗಂಡನೇ ತನ್ನ ಕೈಯಾರೆ ಅಟ್ಟಾಡಿಸಿಕೊಂಡು ಹೊಡೆದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ನಡೆದಿದೆ. ಅಂದಹಾಗೆಯೇ ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ.

ಕಟ್ಟೆಮನೆ ಗ್ರಾಮದ ರಮೇಶ್ ಎಂಬುವವರ ಪತ್ನಿಗೆ ಬಶೀರ್ ಎಂಬಾತ ಮೊಬೈಲ್ ನಂಬರ್ ನೀಡಿದ್ದ. ಡಿಶ್ ರಿಪೇರಿಗೆ ಬಂದಿದ್ದಾಗ ಮೊಬೈಲ್ ನಂಬರ್ ಕೊಟ್ಟಿದ್ದ. ಬಳಿಕ ಕಾಲ್ ಮಾಡುವಂತೆ ಟಾರ್ಚರ್ ನೀಡಿದ್ದಾನೆ. ಈ ವಿಚಾರವನ್ನು ಪತ್ನಿ ತನ್ನ ಪತಿ ರಮೇಶ್ ಬಳಿ ಹೇಳಿಕೊಂಡಿದ್ದಾಳೆ.

ಬಶೀರ್ ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡುತ್ತಿದ್ದ. ಆದರೆ ರಮೇಶ್​ ತನ್ನ ಪತಿಗೆ ಕರೆ ಮಾಡುವಂತೆ ಬಶೀರ್​ ಟಾರ್ಚರ್​ ನೀಡುತ್ತಿದ್ದಾನೆ ಎಂಬ ವಿಚಾರ ತಿಳಿದಂತೆ ನಡುರಸ್ತೆಯಲ್ಲಿ ಆತನನ್ನು ಅಡ್ಡಗಟ್ಟಿದ್ದಾನೆ. ಬಳಿಕ ಅಟ್ಟಾಡಿಸಿ ಹೊಡೆದಿದ್ದಾನೆ.

ಕೆಲ ದಿನ ಹಿಂದೆ ನಡೆದಿದ್ದ ಘಟನೆ ಇದಾಗಿದ್ದು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಮಹಿಳೆಗೆ ಕರೆ ಮಾಡು ಎಂದು ಪೀಡಿಸುತ್ತಿದ್ದ ವ್ಯಕ್ತಿಗೆ ನಡುರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೊಡೆದ ಗಂಡ

https://newsfirstlive.com/wp-content/uploads/2023/07/Chikamagaluru-Fight.jpg

Load More