ಪತಿರಾಯನ ಹುಚ್ಚಾಟಕ್ಕೆ ಪರಲೋಕ ಸೇರಿದ ಪಾಪದ ಪತ್ನಿ
ಆಸ್ಪತ್ರೆಗೆ ಹೋಗದೇ ಆವಿಷ್ಕಾರಕ್ಕೆ ಮುಂದಾಗಿದ್ದ ಮಾದೇಶ
ಹೊಕ್ಕಳಬಳ್ಳಿ ಕತ್ತರಿಸುವ ಹೊತ್ತಲ್ಲಿ ಅರಿವಿಲ್ಲದೇ ಯಡವಟ್ಟು
ಇವಾಗೆನಿದ್ರೂ ಯೂಟ್ಯೂಬ್ ದುನಿಯಾ. ಅಡುಗೆ ಮಾಡೋಕು ಯೂಟ್ಯೂಬ್. ಮೇಕಪ್ ಮಾಡೋಕು ಯೂಟ್ಯೂಬ್. ಎಲ್ಲದಕ್ಕೂ ಯೂಟ್ಯೂಬ್. ಹೀಗೆ ಇರೋ ಬರೋದನ್ನೆಲ್ಲ ಯೂಟ್ಯೂಬ್ ನೋಡಿ ಮಾಡ್ತೀವಿ ಅಂದ್ರೆ ಒಂದು ಹೋಗಿ ಮತ್ತೊಂದಾಗುತ್ತೆ. ಸದ್ಯ ಇಲ್ಲಾಗಿದ್ದು ಅದೇ ನೋಡಿ. ಯೂಟ್ಯೂಬ್ ನೋಡಿ ಡಾಕ್ಟರ್ ಆಗಲು ಹೊರಟ ಆಸಾಮಿ. ಆದ್ರೆ ನೋಡೋದೆಲ್ಲಾ ನೋಡಿ ಅದನ್ನ ಪ್ರಾಕ್ಟಿಕಲ್ ಆಗಿ ಮಾಡಲು ಹೋದ ಈತ, ಮೆಚ್ಚಿನ ಮಡದಿಗೆ ಯಮನಾಗಿಬಿಟ್ಟಿದ್ದಾನೆ.
ಯೂಟ್ಯೂಬ್ ನೋಡಿ ಪತ್ನಿಗೆ ಡೆಲಿವರಿ ಮಾಡಿಸಿದ ಪತಿರಾಯ!
ಈತನ ಹೆಸರು ಮಾದೇಶ ಅಂತ. ತಮಿಳುನಾಡಿನ ಪೊಚಂಪಳ್ಳಿಯವನಾಗಿರೋ ಈತನ ಪತ್ನಿ ತುಂಬು ಗರ್ಭಿಣಿಯಾಗಿದ್ಲು.
ಡೆಲಿವರಿ ಬಳಿಕ ಮಾದೇಶನ ಪತ್ನಿ ಸಾವು, ಮಗು ಸೇಫ್
ನಿನ್ನೆ ಈ ಮಾದೇಶನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದ್ರೆ ಆಸ್ಪತ್ರೆಗೆ ಕರೆದೊಯ್ದು ಪತ್ನಿಗೆ ಹೆರಿಗೆ ಮಾಡಿಸಬೇಕಿದ್ದ ಈತ ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದ. ಮೊಬೈಲ್ನಲ್ಲಿ ಯೂಟ್ಯೂಬ್ ವಿಡಿಯೋ ನೋಡಿಕೊಂಡು ತಾನೇ ಡೆಲಿವರಿ ಮಾಡಿಸಲು ಮುಂದಾಗಿದ್ದ. ಯೂಟ್ಯೂಬ್ ಡೆಲಿವರಿಯಲ್ಲಿ ಸಕ್ಸಸ್ ಆಗಿದ್ದ ಈ ಮಾದೇಶ ಕೊನೆಯ ಹೆಜ್ಜೆಯಲ್ಲಿ ಎಡವಿಬಿಟ್ಟಿದ್ದ. ಮಗು ಆಚೆ ಬಂದ ಬಳಿಕ ಹೊಕ್ಕಳಬಳ್ಳಿ ಕತ್ತರಿಸುವ ಹೊತ್ತಲ್ಲಿ ಅರಿವಿಲ್ಲದೇ ಎಡವಟ್ಟು ಮಾಡಿದ್ದ. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಮಾದೇಶನ ಪತ್ನಿ ಉಸಿರು ಚೆಲ್ಲಿದ್ಲು. ಆದರೆ ಮಗು ಮಾತ್ರ ಸೇಫ್ ಆಗಿ ತಾಯಿಯ ಮಡಿಲಲ್ಲಿ ಮಲಗಿತ್ತು. ಮಾದೇಶನ ಪತ್ನಿ ಸಾವನ್ನಪ್ಪಿರೋ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನ್ನ ಅರೆಸ್ಟ್ ಮಾಡಿದ್ರು.
ಒಟ್ಟಿನ ಲ್ಲಿ ಯೂಟ್ಯೂಬ್ ನೋಡಿ ಹೆಂಡತಿಗೆ ಡೆಲಿವರಿ ಮಾಡಿಸಿ ಹಣ ಉಳಿಸ್ತೀನಿ ಅಂತ ಹೊರಟ ಪತಿರಾಯ ಪತ್ನಿ ಪಾಲಿಗೆ ಕೊಲೆಗಾರನಾಗಿದ್ದಾನೆ. ಪತಿಯ ಹುಚ್ಚಾಟಕ್ಕೆ ಸಾಥ್ ನೀಡಿ ಕಂದನ ನೋಡುವ ತವಕದಲ್ಲಿದ್ದ ಪಾಪದ ಪತ್ನಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ