ಪ್ರತಿನಿತ್ಯ ವಿರಸವನ್ನೇ ಕಂಡು ಬೇಸರಗೊಂಡಿದ್ದ ಪತಿ ಆತ್ಮಹತ್ಯೆಗೆ ಯತ್ನ
ನನಗೆ ಜೀವನವೇ ಸಾಕಾಗಿದೆ ಎಂದು ಮಗುನೊಂದಿಗೆ ನೀರಿನ ಟ್ಯಾಂಕ್ ಏರಿದ್ದ
ಎರಡು ವರ್ಷದ ಮಗುವಿನೊಂದಿಗೆ ಸಾಯಲು ನಿರ್ಧರಿಸಿದ್ದ ಕೂಲಿ ಕಾರ್ಮಿಕ ಗಂಡ
ಮೈಸೂರು: ಪತ್ನಿ ಜೊತೆಗಿನ ಕಲಹದಿಂದ ಬೇಸತ್ತು ಗಂಡ ಮಗುವಿನೊಂದಿಗೆ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ ಕೃಷ್ಣಮೂರ್ತಿಯಿಂದ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಕೃಷ್ಣಮೂರ್ತಿ ದಾಂಪತ್ಯದಲ್ಲಿ ಪ್ರತಿನಿತ್ಯ ವಿರಸವನ್ನೇ ಕಂಡಿದ್ದನ್ನು. ಹೀಗಾಗಿ ಮನನೊಂದು ಎರಡು ವರ್ಷದ ಮಗುವಿನೊಂದಿಗೆ ನೀರಿನ ಟ್ಯಾಂಕ್ ಏರಿದ್ದಾನೆ.
ಕೆಲವು ತಿಂಗಳ ಹಿಂದೆ ಕೃಷ್ಣಮೂರ್ತಿ ಮತ್ತು ಹೆಂಡತಿ ನಡುವಿನ ಜಗಳ ನಂಜನಗೂಡು ಗ್ರಾಮಾಂತರ ಠಾಣೆಯವರೆಗೂ ಸಾಗಿತ್ತು. ಬಳಿಕ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಕಳಿಸಿದ್ದರು. ಇದೀಗ ಮತ್ತೆ ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿದೆ. ಇದರಿಂದ ಮಗುವಿನೊಂದಿಗೆ ಮನೆಯಿಂದ ಹೊರಬಂದ ಕೃಷ್ಣಮೂರ್ತಿ ನೀರಿನ ಟ್ಯಾಂಕ್ ಏರಿದ್ದಾನೆ.
ಟ್ಯಾಂಕ್ ಏರಿದ್ದ ಕೃಷ್ಣಮೂರ್ತಿ, ನನಗೆ ಜೀವನವೇ ಸಾಕಾಗಿದೆ ಎನ್ನುತ್ತಲೇ ನಿನ್ನೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಓವರ್ ಹೆಡ್ ನೀರಿನ ಟ್ಯಾಂಕ್ ಹತ್ತಿದ್ದಾನೆ. ಇದನ್ನು ಕಂಡು ಕೆಳಗೆ ಇಳಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ನನಗೆ ಜೀವನವೇ ಬೇಡ, ಮಗುವಿನೊಂದಿಗೆ ಇಲ್ಲಿಂದ ಬಿದ್ದು ಸಾಯುತ್ತೇನೆ’ ಎಂದು ಬೆದರಿಸಿದ್ದಾನೆ.
ಕೊನೆಗೆ ಗ್ರಾಮಸ್ಥರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರನ್ನು ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಸಹಾಯವಾಣಿಯ ಸಿಬ್ಬಂದಿಗಳಾದ ಗಿರೀಶ ಹಾಗೂ ಚೇತನ್ ನಿಮ್ಮ ವಿರಸವನ್ನು ನಾವು ಬಗೆಹರಿಸಿ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಕೃಷ್ಣಮೂರ್ತಿಯ ಮನವೊಲಿಸಿದ್ದಾರೆ. ಕೊನೆಗೂ ಕೃಷ್ಣಮೂರ್ತಿಯನ್ನ ಮಗುವಿನೊಂದಿಗೆ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ