ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನ ಬಿಟ್ಟಿಲ್ಲ..
ಚುನಾವಣೆ ಟೈಮ್‌ನಲ್ಲಿ ಬಾಲ ಬಿಚ್ಚಿದ ಕಳ್ಳರು, ಖದೀಮರು
ಸಿಸಿಟಿವಿಯಲ್ಲಿ ಖದೀಮರ ಕೈಚಳಕದ ದೃಶ್ಯಗಳು
ಕಳೆದ ಒಂದೂವರೆ ತಿಂಗಳಿಂದ ಚುನಾವಣೆ ಮೂಡ್ನಲ್ಲಿದ್ದ ಪೊಲೀಸರು ಇದೀಗ ಅಲರ್ಟ್ ಆಗಿದ್ದಾರೆ. ಪೊಲೀಸರು ಇಲ್ಲದ್ದಲ್ಲಿ ಅಡ್ವಂಟೇಜ್ ಮಾಡಿಕೊಂದು ಕಳ್ಳತನ ಮಾಡ್ತಿದ್ದ ಖದೀಮರು ಬಲೆಗೆ ಬಿದ್ದಿದ್ದಾರೆ. ಚುನಾವಣೆ ವೇಳೆ ರಾಜ್ಯದ ಹಲವೆಡೆ ಅಪರಾಧ ಪ್ರಕರಣಗಳು ಹೆಚ್ಚಿರುವುದು ಜನರನ್ನು ಭಯಭೀತರನ್ನಾಗಿ ಮಾಡಿದೆ.
ಚುನಾವಣೆ ಸಮಯದಲ್ಲಿ ಬಾಲ ಬಿಚ್ಚಿದ ಕಳ್ಳರು, ಖದೀಮರು
ರಾಜ್ಯದಲ್ಲಿ ಎಲೆಕ್ಷನ್ ರಂಗು ಮುಗಿದಿದೆ. ನೂತನ ಸರ್ಕಾರ ರಚನೆ ಆಗಿದೆ. ಚುನಾವಣೆ ವೇಳೆ ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ರಾಜ್ಯದಲ್ಲಿ ಸಾಕಷ್ಟು ಕಳ್ಳಾಟ ಆಡಿರುವುದು ಇದೀಗ ಬೆಳಕಿಗೆ ಬಂದಿದೆ.
ಚುನಾವಣೆ ಕಾರಣಕ್ಕೆ ಕಲಬುರಗಿ ಪೊಲೀಸರು, ಎಲೆಕ್ಷನ್ ಮೂಡ್ಗೆ ಜಾರಿದ್ದರು.. ಆದ್ರೆ, ಎಲೆಕ್ಷನ್ ಟೈಮ್ ಕಳೆದೊಂದು ತಿಂಗಳಿನಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನ ಬಿಟ್ಟಿಲ್ಲ.. ಬೇಸಿಗೆ ಅಂತ ಮಾಳಿಗೆ ಮೇಲೆ ಮಲಗಿದ್ದಾಗ, ಊರಿಗೆ ಹೋದಾಗ ಮನೆಗಳಿಗೆ ಕನ್ನ ಹಾಕಲಾಗಿದೆ. ಮಟಮಟ ಮಧ್ಯಾಹ್ನ ಬಸ್‌ಗಾಗಿ ರಸ್ತೆ ಬದಿ ಕಾಯುತ್ತ ನಿಂತ ಮಹಿಳೆಯರ ಕೊರಳಲ್ಲಿನ ಚಿನ್ನದ ಸರ ಕಿತ್ತೊಯ್ದಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ಠಾಣೆಗಳ ಪೊಲೀಸರು ಚುನಾವಣಾ ಬಂದೋಬಸ್ತ್‌ನಲ್ಲಿ ಇದ್ದಾಗ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ದೇವನಗರದಲ್ಲಿ 6 ಮನೆ, ಬನಶಂಕರಿ ಬಡಾವಣೆಯಲ್ಲಿ ಬೈಕ್ನಲ್ಲಿನ ಪೆಟ್ರೋಲ್ ಕಳ್ಳತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇನ್ನು ಮೋಮಿನಪುರ ಬಡಾವಣೆ ಮನೆ ದರೋಡೆ ಆಗಿದ್ರೆ, ಹುಮನಾಬಾದ್ ರಿಂಗ್ರೋಡ್ನಲ್ಲಿ ಮಹಿಳೆಯೊಬ್ಬಳ ವ್ಯಾನೆಟಿ ಬ್ಯಾಗ್ನಲ್ಲಿದ್ದ 1.85 ಲಕ್ಷ ರೂ. ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ್ದಾರೆ. ಇತ್ತ, ಶಹಬಜಾರ್ ಬಡಾವಣೆಯಲ್ಲಿ ಕೆಲ ಪುಂಡರು ಮಚ್ಚು ಹಿಡಿದು ಭಯ ಹುಟ್ಟಿಸಿದ್ದಾರೆ.
ಪುಂಡರ ಅಟ್ಟಹಾಸ
ಕಲಬುರಗಿ ಮಾತ್ರವಲ್ಲ, ಧಾರವಾಡ ಜಿಲ್ಲೆಯಲ್ಲೂ ಪುಂಡರು ಹಾಡಹಗಲೇ ಅಟ್ಟಹಾಸ ಮೆರೆದಿದ್ದಾರೆ. ಧಾರವಾಡದ ಕೃಷಿ ವಿವಿ ಬಳಿಯ ವಿಕೆ ಪ್ಯಾಲೇಸ್‌ನಲ್ಲಿ ಬುದ್ಧಿವಾದ ಹೇಳಿದ್ದಕ್ಕೆ, ಕೆಲ ಯುವಕರ ಗುಂಪು ದಾಂಧಲೆ ನಡೆಸಿದೆ. ಹೋಟೆಲ್ನ ಸಿಬ್ಬಂದಿ, ಮಾಲೀಕರ ಮೇಲೆ ಹಲ್ಲೆ ಮಾಡಿದೆ. ಇತ್ತ, ಗಡಿ ಜಿಲ್ಲೆ ಬೀದರ್‌ನಲ್ಲಿ ಖತರ್ನಾಕ್ ಖದೀಮನೊಬ್ಬ ಕದ್ದ ಬೈಕ್ಗೆ ಪೆಟ್ರೋಲ್ ಖದಿಯಲು ಹೋಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಚುನಾವಣೆ ಭದ್ರತೆಯಲ್ಲಿ ಪೊಲೀಸರು ಬ್ಯುಸಿಯಾಗಿದ್ರೆ, ಇದೇ ಉತ್ತಮ ಅವಕಾಶ ಎಂದು ಖದೀಮರು ಕೈಚಳಕ ತೋರಿದ್ದಾರೆ. ಸದ್ಯ ಎಲೆಕ್ಷನ್ ಎಲ್ಲಾ ಮುಗಿದಿದ್ದು, ಪೊಲೀಸರು ಕ್ರೈಮ್ ಕಂಟ್ರೋಲ್ಗೆ ಕ್ರಮಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಡಿ ಜಿಲ್ಲೆ ಬೀದರ್‌ನಲ್ಲಿ ಖತರ್ನಾಕ್ ಖದೀಮನೊಬ್ಬ ಕದ್ದ ಬೈಕ್ಗೆ ಪೆಟ್ರೋಲ್ ಖದಿಯಲು ಹೋಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ#Thug #Theft pic.twitter.com/kAtVKrqMqb
— NewsFirst Kannada (@NewsFirstKan) May 21, 2023