ಬಾಲಿವುಡ್ ಸಿನಿಮಾಗಳು ದೇಶವನ್ನು ಚಿತ್ರಿಸುವ ಬಗ್ಗೆ ರಿಷಬ್ ಶೆಟ್ಟಿ ಹೇಳಿಕೆ
ಕಾಂತಾರ ನಾಯಕನ ಟೀಕೆಯನ್ನು ಸಹಿಸಿಕೊಳ್ಳದ ಬಾಲಿವುಡ್ ಪ್ರೇಮಿಗಳು
ಕಾಂತಾರ ಸಿನಿಮಾ ಬಗ್ಗೆ ಅಂದು ಇಲ್ಲದ ಟೀಕೆ-ಟಿಪ್ಪಣಿಗಳು ಇಂದು ಶುರು
ಬೆಂಗಳೂರು: ಕಾಂತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಆಡಿದ ಒಂದು ಮಾತು ಈಗ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಸಂದರ್ಶನವೊಂದರಲ್ಲಿ ರಿಷಬ್ ಹೇಳಿದ ಮಾತು ಈಗ ಬಾಲಿವುಡ್ ಸಿನಿಮಾ ಪ್ರೇಮಿಗಳ ಕಣ್ಣನ್ನು ಕೆಂಪು ಮಾಡಿಸಿದೆ. ಕಾಂತಾರ ಚಿತ್ರದ ಬಗ್ಗೆ ಈಗ ಬೇಡದ ಮಾತುಗಳನ್ನು ಆಡುತ್ತಿದ್ದಾರೆ.
ಇದನ್ನೂ ಓದಿ: ಮೋದಿಯನ್ನು ಮೀರಿಸಿದ ಶ್ರದ್ಧಾ.. ಇನ್ಸ್ಟಾ ಫಾಲೋವರ್ಸ್ ಹೆಚ್ಚಿಸಿಕೊಂಡ ಬಾಲಿವುಡ್ ಬ್ಯೂಟಿ
ಇತ್ತೀಚೆಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕಾಂತಾರ ಸಿನಿಮಾದ ಅಭಿನಯಕ್ಕಾಗಿ ಕನ್ನಡಿಗ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಇದಾದ ಬಳಿಕ ಸಂದರ್ಶನದಲ್ಲಿ ರಿಷಬ್ ಶೆಟ್ಟಿ, ಬಾಲಿವುಡ್ ಸಿನಿಮಾದ ಬಗ್ಗೆ ಮಾತನಾಡುತ್ತಾ. ಬಾಲಿವುಡ್ನ ಅನೇಕ ಸಿನಿಮಾಗಳು ನಮ್ಮ ದೇಶವನ್ನ ಋಣಾತ್ಮಕವಾಗಿ (nagetive) ಚಿತ್ರಿಸಿವೆ. ಇಂತಹ ಸಿನಿಮಾಗಳೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತವೆ ಮತ್ತು ಪ್ರಶಸ್ತಿಗಳನ್ನು ಗಳಿಸುತ್ತವೆ ಎಂದು ಹೇಳಿದ್ದರು. ಅದು ಅಲ್ಲದೇ ನನಗೆ ನನ್ನ ದೇಶ, ನನ್ನ ರಾಜ್ಯ ಹಾಗೂ ನನ್ನ ಭಾಷೆಯ ಬಗ್ಗೆ ಹೆಮ್ಮೆಯಿದೆ. ಅವುಗಳನ್ನು ಹೆಮ್ಮೆಪಡುವ ರೀತಿ ಚಿತ್ರಿಸಲು ನಾನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ಇದು ಈಗ ಬಾಲಿವುಡ್ ಅಂಗಳದಲ್ಲಿ ಬೆಂಕಿ ಬಿರುಗಾಳಿಯಂತೆ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?
ಸೋಷಿಯಲ್ ಮಿಡಿಯಾದಲ್ಲಿ ಅನೇಕರು ರಿಷಬ್ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೇ ಕಾಂತಾರ ಸಿನಿಮಾದ ದೃಶ್ಯಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ನಟಿ ಸಪ್ತಮಿ ಗೌಡ ಸೊಂಟವನ್ನು ಗಿಲ್ಲುವುದು ಯಾವ ಸಂದೇಶ ನೀಡುತ್ತದೆ. ರಿಷಬ್ ಸೊಂಟ ಗಿಲ್ಲಿದಾಗ ಸಪ್ತಮಿ ಗೌಡ ವಿರೋಧಿಸುತ್ತಾಳೆ. ಇದು ಲೈಂಗಿಕ ಕಿರುಕುಳದ ಸಂದೇಶ ನೀಡಿದಂತೆ ಅಲ್ಲವೇ ಎಂಬ ಟೀಕೆಗಳು ಸದ್ಯ ಕೇಳಿ ಬರುತ್ತಿವೆ. ಕಾಂತಾರ ಅದ್ಭುತ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ, ಆದ್ರೆ ಅದರಲ್ಲಿ ಲೈಂಗಿಕ ಕಿರುಕುಳವನ್ನು ಪ್ರಚೋದಿಸುವ ದೃಶ್ಯಗಳಿವೆ ಎಂದು ಈಗ ಟೀಕೆಗೆ ಇಳಿದಿದ್ದಾರೆ ಬಾಲಿವುಡ್ ಭಕ್ತರು.
“Indian films, especially Bollywood, show India in a bad light.”
-Popular Kannada Actor Rishab Shetty.#RishabhShetty #RishabShetty pic.twitter.com/g2nkiyUSVv
— Political Quest (@PoliticalQuestX) August 21, 2024
ಸಂದರ್ಶದನ ವಿಡಿಯೋಗೆ ಮತ್ತೊಬ್ಬರು ಕಮೆಂಟ್ ಹಾಕಿದ್ದು, ಇವರು ಒಂದೇ ಸಿನಿಮಾ ಹಿಟ್ ಆಗಿದ್ದರಿಂದ ತಮ್ಮನ್ನು ತಾವು ಸ್ಟೀವನ್ ಸ್ಪೈಲ್ಬರ್ಗ್ ಅಂದುಕೊಂಡಿದ್ದಾರೆ. ಕಾಂತಾರ ಒಂದು ಅತಿಯಾಗಿ ವೈಭವಿಕರಿಸಲಾದ ಸಿನಿಮಾ, ಮತ್ತೆ ಮತ್ತೆ ನೋಡುವಂತ ಗುಣವಿಲ್ಲದ ಸಿನಿಮಾ ಎಂದು ಟೀಕಿಸಿದ್ದಾರೆ. ಈ ಟೀಕೆ ಟಿಪ್ಪಣಿಗಾಚೆಯೂ, ರಿಷಬ್ ಹೇಳಿರುವ ಮಾತುಗಳಲ್ಲಿ ಕೊಂಚ ವಾಸ್ತವವಿದೆ ಹೀಗಾಗಿಯೇ ಇದು ವಿವಾದಕ್ಕೆ ಗುರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ