newsfirstkannada.com

ಹೊಸ ವಿವಾದದಲ್ಲಿ ಶಾರುಖ್​ ಖಾನ್​​.. ಜವಾನ್​ ಸಿನಿಮಾದ ಈ ಸೀನ್​ಗಳು ಕದ್ದಿದ್ದಾ? ಸ್ಟೋರಿ ಓದಿ!

Share :

18-09-2023

  ಜವಾನ್​ ಚಿತ್ರತಂಡದ ವಿರುದ್ಧ ಸೀನ್ಸ್​ ಕದ್ದ ಆರೋಪ

  ಬೇರೆ ಸಿನಿಮಾಗಳಿಂದ ಕದ್ದು ಜವಾನ್​ ಮಾಡಲಾಗಿದ್ಯಾ?

  ನಟ ಶಾರುಖ್​ ಖಾನ್​​ ವಿರುದ್ಧ ಮತ್ತೊಂದು ಆರೋಪ..!

ನಟ ಶಾರುಖ್​​ ಖಾನ್​​ ಬಾಲಿವುಡ್​ ಬಾದ್​ ಶಾ. ಇತ್ತೀಚೆಗೆ ರಿಲೀಸ್​ ಆದ ಶಾರುಖ್​ ಹೊಸ ಸಿನಿಮಾ ಜವಾನ್​​​ ಸಖತ್​ ಹಿಟ್​ ಆಗಿದೆ. ಸುಮಾರು 800 ಕೋಟಿಗೂ ಹೆಚ್ಚು ರೂ. ಕಲೆಕ್ಷನ್​ ಮಾಡಿದೆ. ತಮಿಳು ಸ್ಟಾರ್​ ಡೈರೆಕ್ಟರ್​ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾವನ್ನು ಶಾರುಖ್​ ಒಡೆತನದ ರೆಡ್​​ ಚಿಲ್ಲೀಸ್​​ ಎಂಟರ್​ಟೈನ್ಮೆಂಟ್​​​ ಸಂಸ್ಥೆ ನಿರ್ಮಾಣ ಮಾಡಿದೆ. ಶಾರುಖ್​​ ಜತೆ ಲೇಡಿ ಸೂಪರ್​ ಸ್ಟಾರ್​​ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಬಣ್ಣ ಹಚ್ಚಿದ್ದಾರೆ.

ಜವಾನ್​ಗೆ ಮುನ್ನ ರಿಲೀಸ್​ ಆಗಿದ್ದ ಶಾರುಖ್​​ ಪಠಾಣ್​​ ಸಿನಿಮಾ ಸಾಕಷ್ಟು ವಿವಾದಗಳಲ್ಲಿ ಸಿಲುಕಿತ್ತು. ಆರೇಂಜ್​​​ ಕಲರ್​ ಬಿಕಿನಿ ಧರಿಸಿ ದೀಪಿಕಾ ಬೇಷರಂ ರಂಗ್​ ಸಾಂಗ್​​ನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಡೀ ದೇಶಾದ್ಯಂತ ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈಗ ಪಠಾಣ್​​ ನಂತರ ರಿಲೀಸ್​ ಆದ ಜವಾನ್​​ ಸಿನಿಮಾಗೂ ಅದೇ ರೀತಿಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಈ ಬಾರಿ ಎದುರಾಗಿದ್ದು ಯಾವುದೇ ರಾಜಕೀಯ ಸಮಸ್ಯೆ ಅಲ್ಲ, ಬದಲಿಗೆ ಸಿನಿಮಾದ ಕೆಲವು ದೃಶ್ಯಗಳು ಬೇರೆ ಸಿನಿಮಾಗಳಿಂದ ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಟ್ವಿಟರ್​ (X) ಖಾತೆಯಲ್ಲಿ ನೆಟ್ಟಿಗರು ಕದ್ದಿದ್ದಾರೆ ಎನ್ನಲಾದ ದೃಶ್ಯಗಳನ್ನು ಪೊಸ್ಟ್​​ ಮಾಡಿ ಒರಿಜಿನಲ್​​ ಸೀನ್ಸ್​​​ ಯಾವುದು ಎಂದು ಬಿಚ್ಚಿಟ್ಟಿದ್ದಾರೆ.

ಮನಿ ಹೀಸ್ಟ್, ಶಿವಾಜಿ ದಿ ಬಾಸ್​​, ಎಸ್​ಆರ್​ಕೆ, ಅಪೋಕಾಲಿಪ್ಟೋ, ಬಾಹುಬಲಿ 2 ಹೀಗೆ ಹಲವು ಸಿನಿಮಾಗಳಿಂದ ಕದ್ದಿದ್ದಾರೆ ಎನ್ನುವ ಆರೋಪ ಜವಾನ್​​ ಚಿತ್ರತಂಡದ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ನೆಟ್ಟಿಗರು ಜವಾನ್​​ ಸಿನಿಮಾದ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ವಿವಾದದಲ್ಲಿ ಶಾರುಖ್​ ಖಾನ್​​.. ಜವಾನ್​ ಸಿನಿಮಾದ ಈ ಸೀನ್​ಗಳು ಕದ್ದಿದ್ದಾ? ಸ್ಟೋರಿ ಓದಿ!

https://newsfirstlive.com/wp-content/uploads/2023/09/Sharukh-Khan.bmp

Load More