newsfirstkannada.com

‘ನವಗ್ರಹ’ಗಳಾದ 9 ವಾಹನಗಳು.. ಇದೇ ದರ್ಶನ್ ಗ್ಯಾಂಗ್‌ಗೆ ಅತಿ ದೊಡ್ಡ ಕಂಟಕ; ಅಸಲಿಗೆ ಆಗಿದ್ದೇನು?

Share :

Published July 9, 2024 at 9:50pm

Update July 9, 2024 at 9:51pm

  ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದ ದರ್ಶನ್​ ಅಂಡ್​ ಗ್ಯಾಂಗ್​

  ರೇಣುಕಾ ಕೊಲೆ ವೇಳೆ ಬಳಕೆಯಾದ 9 ವಾಹನಗಳನ್ನು ಪೊಲೀಸ್ ವಶಕ್ಕೆ

  ಜಪ್ತಿಯಾದ ವಾಹನಗಳು ಯಾರ ಹೆಸರಲ್ಲಿದೆ ಅಂತ ಪೊಲೀಸರಿಂದ ಮಾಹಿತಿ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್​ ಸೆರೆಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತ ರೇಣುಕಾ ಕೊಲೆ ಕೇಸ್​ನಲ್ಲಿ ಬಳಕೆಯಾದ ವಾಹನಗಳ ಕಥೆ ಬಗ್ಗೆ ರಿವೀಲ್​ ಆಗಿದೆ. ಡೆವಿಲ್ ಗ್ಯಾಂಗ್ ಕೊಲೆಗೆ ಬಳಸಿಕೊಂಡ ಕಾರು, ಬೈಕ್ ವಾಹನಗಳನ್ನು ಪೊಲೀಸರು ಈಗಾಗಲೇ ಕಬ್ಜ ಮಾಡಿದ್ದಾರೆ. ಸದ್ಯ ಇವುಗಳ ಮಾಹಿತಿ ಕೇಳಿ ಪೊಲೀಸರು ಪತ್ರ ಬರೆದಿದ್ದಾರೆ. ಇದ್ರಲ್ಲೇನು ವಿಶೇಷ ಅಂದ್ರೆ ಈ ಪತ್ರದಿಂದ ವಾಹನಗಳ ಮೂಲ ಮಾಲೀಕರಿಗೆ ನಡುಕ ಶುರುವಾಗಿದೆ.

ಇದನ್ನೂ ಓದಿ: ಕೊನೆಗೂ ಬದಲಾದ ದಾಸ.. ಜೈಲಿನಲ್ಲಿ ನಗು, ನಗುತ್ತಾ ಕಾಲ ಕಳೆಯುತ್ತಿರುವ ದರ್ಶನ್‌; ಏನಾಯ್ತು ಗೊತ್ತಾ?

ನಮ್ಮ ವಾಹನಗಳನ್ನು ಬೇರೆಯವರಿಗೆ ಬಳಸಲು ಕೊಡುವ ಮುಂಚೆ ಹತ್ತಾರು ಬಾರಿ ಯೋಚಿಸಬೇಕು. ಇಲ್ಲಾ ಅಂದ್ರೆ ನಮ್ಮ ವಾಹನಗಳನ್ನು ಹೀಗೆ ಪೊಲೀಸ್ ಠಾಣೆಯಲ್ಲಿ ಕೊಳೆಯುವ ಸ್ಥಿತಿ ನೋಡಬೇಕಾಗಿ ಬರುತ್ತದೆ. ದರ್ಶನ್ ಅಂಡ್​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ವೇಳೆ ಬಳಕೆಯಾದ 9 ವಾಹನಗಳನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಿದ್ದಾರೆ. ಸದ್ಯ ಜಪ್ತಿಯಾದ ಈ ವಾಹನಗಳ ಮಾಹಿತಿ ಕೇಳಿ ಆರ್​​ಟಿಓಗೆ ಪೊಲೀಸರು ಪತ್ರ ಬರೆದಿದ್ದಾರೆ. ವಾಹನಗಳ ಮೂಲ ಮಾಲೀಕರು ಯಾರು? ಯಾರ ಹೆಸರಲ್ಲಿ ವಾಹನ ಇದೆ ಅಂತ ಮಾಹಿತಿ ನೀಡುವಂತೆ ಕೋರಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ ತನಿಖೆ ಮತ್ತಷ್ಟು ಚುರುಕು!

ರೇಣುಕಾಸ್ವಾಮಿ ಕೊಲೆ ವೇಳೆ ಬೈಕ್, ಕಾರಿನಲ್ಲಿ ಆರೋಪಿಗಳು ಶೆಡ್​ಗೆ ಬಂದಿದ್ದರು. ಈ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳು ಯಾವೆಲ್ಲ ಗಾಡಿಗಳಲ್ಲಿ ಓಡಾಡಿದ್ರು ಎಂಬುವುದರ ಬಗ್ಗೆ ಮಾಹಿತಿ ನೀಡಲಾಗಿದೆ. ಧನರಾಜ್ & ನಂದೀಶ್ ತಮ್ಮ ಹೆಸರಿನಲ್ಲಿರುವ ಸ್ವಂತ ಬೈಕ್ ಬಳಕೆ ಮಾಡಿದ್ರೆ ಉಳಿದ ಆರೋಪಿಗಳು ಬೇರೆಯವರ ಹೆಸರಲ್ಲಿದ್ದ ಬೈಕ್​ ಬಳಸಿದ್ರು. ಹೀಗಾಗಿ ಮೂಲ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೈಕ್ ಕೊಡಲು ಕಾರಣವೇನು? ಆರೋಪಿಗೂ ನಿಮಗೂ ಏನು ಸಂಬಂಧ? ಯಾವ ಕಾರಣಕ್ಕೆ ಬೈಕ್ ಕೊಟ್ಟಿದ್ರಿ ಎಂದು ವಿಚಾರಣೆ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನವಗ್ರಹ’ಗಳಾದ 9 ವಾಹನಗಳು.. ಇದೇ ದರ್ಶನ್ ಗ್ಯಾಂಗ್‌ಗೆ ಅತಿ ದೊಡ್ಡ ಕಂಟಕ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/07/darshan1-1.jpg

Load More