newsfirstkannada.com

KSRTC ಚಾಲಕ ಆತ್ಮಹತ್ಯೆ ಯತ್ನ ಕೇಸ್​.. ‘ಆ್ಯಂಬುಲೆನ್ಸ್ ತಡೆದಿದ್ದಾರೆ’ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ JDS ವಿಡಿಯೋ ರಿಲೀಸ್ ಮಾಡಿ ಕೌಂಟರ್!

Share :

Published July 11, 2023 at 10:24am

    ಆ್ಯಂಬುಲೆನ್ಸ್ ತಡೆದ ವಿಚಾರಕ್ಕೆ ಟ್ವಿಸ್ಟ್ ಕೊಟ್ಟ ಜೆಡಿಎಸ್​

    ಚಲುವರಾಯಸ್ವಾಮಿಯವರ ಆರೋಪಕ್ಕೆ ಜೆಡಿಎಸ್​ ಉತ್ತರ

    ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಜೆಡಿಎಸ್

ಮಂಡ್ಯ: ಇತ್ತೀಚೆಗೆ ನಾಗಮಂಗಲ ಕೆಎಸ್‌ಆರ್‌ಟಿಸಿ ಬಸ್​ ಡ್ರೈವರ್ ಜಗದೀಶ್ ಎಂಬವವರು ಆತ್ಮಹತ್ಯೆಗೆ ಯತ್ನಿಸಿದ್ದರು. ಸಚಿವ ಚಲುವರಾಯಸ್ವಾಮಿ ಉದ್ದೇಶಪೂರ್ವಕವಾಗಿಯೇ ವರ್ಗಾವಣೆ ಮಾಡಿಸಿದ್ದಾರೆ. ಮಾತ್ರವಲ್ಲ ಹಿರಿಯ ಅಧಿಕಾರಿಗಳಿಂದ ನನಗೆ ಕಿರುಕುಳ ಕೊಡಿಸಿದ್ದಾರೆ ಎಂದು ಆರೋಪಿಸಿ, ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ವಿಚಾರವನ್ನು ಕುಮಾರಸ್ವಾಮಿ, ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದರು. ಕುಮಾರಸ್ವಾಮಿ ಆರೋಪ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಜಗದೀಶ್ ಪ್ರಾಣಕ್ಕೆ ಅಪಾಯ ಇದೆ ಎಂದು ಗೊತ್ತಾದಾಗ ಅವರನ್ನು ಮಂಡ್ಯದ ಆಸ್ಪತ್ರೆಯಿಂದ ಮೈಸೂರು ಖಾಸಗಿ ಆಸ್ಪತ್ರೆಗೆ ಅವರ ಕುಟುಂಬಸ್ಥರು ನಿರ್ಧರಿಸಿದ್ದರು. ಆ್ಯಂಬುಲೆನ್ಸ್​ನಲ್ಲಿ ಮೈಸೂರಿನತ್ತ ಹೋಗ್ತಿದ್ದಾಗ ಜೆಡಿಎಸ್​ನ ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಜೆಡಿಎಸ್​ ಕಾರ್ಯಕರ್ತರು ಆ್ಯಂಬುಲೆನ್ಸ್ ತಡೆದಿದ್ದಾರೆ. ಈ ಮೂಲಕ ಆತ್ಮಹತ್ಯೆ ಕೇಸ್​ ಅನ್ನು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ವಿರುದ್ಧ ಚಲುವರಾಯಸ್ವಾಮಿ ಆರೋಪಿಸಿದ್ದರು. ಆದರೀಗ ಜೆಡಿಎಸ್​ ತನ್ನ ಮೇಲೆ ಹೊರಿಸಿದ್ದ ಆರೋಪಕ್ಕೆ ಉತ್ತರಿಸುವ ಮೂಲಕ ಮತ್ತೊಂದು ಟ್ವಿಸ್ಟ್​ ಕೊಟ್ಟಿದೆ.

ಜಗದೀಶ್​​ರನ್ನ ಬದುಕಿಸುವ ಉದ್ದೇಶ ಇವರಿಗೆ ಇರಲಿಲ್ಲ

ಜಗದೀಶ್‌ರನ್ನು ಬಿಜಿಎಸ್ ಆಸ್ಪತ್ರೆಯಿಂದ ಮೈಸೂರಿಗೆ ರವಾನೆ ಮಾಡುವಾಗ ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಜೆಡಿಎಸ್‌ ಕಾರ್ಯಕರ್ತರು ತಡೆದಿದ್ರು ಎಂದು ಚಲುವರಾಯಸ್ವಾಮಿ ಆರೋಪಿಸಿದ್ದರು. ಅಲ್ಲದೇ ಜಗದೀಶ್​ರನ್ನು ಬದುಕಿಸುವ ಉದ್ದೇಶ ಇವರಿಗೆ ಇರಲಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದರು. ಆದರೆ ಹೆಚ್​​ ಡಿ ಕುಮಾರಸ್ವಾಮಿ ನಮ್ಮ ಕಾರ್ಯಕರ್ತರು ಆ್ಯಂಬುಲೆನ್ಸ್ ಅಡ್ಡಗಟ್ಟಿಲ್ಲ ಎಂದು ಹೇಳಿದ್ದರು. ಇದೀಗ ಆ್ಯಂಬುಲೆನ್ಸ್ ಅಡ್ಡಗಟ್ಟುವ ದೃಶ್ಯ ಪತ್ತೆಯಾಗಿದೆ.

ಆ್ಯಂಬುಲೆನ್ಸ್ ಅಡ್ಡಗಟ್ಟುವ ದೃಶ್ಯ ಸೆರೆ

ಮಾಜಿ‌ ಶಾಸಕ ಸುರೇಶ್‌ಗೌಡ ಹಾಗೂ ಬೆಂಬಲಿಗರು ಆ್ಯಂಬುಲೆನ್ಸ್ ಅಡ್ಡಗಟ್ಟುವ ದೃಶ್ಯ ಪತ್ತೆಯಾಗಿದೆ. ನಾಗಮಂಗಲ‌ದ ಟಿಬಿ ವೃತ್ತದ ಬಳಿ ಸುರೇಶ್‌ಗೌಡ ಆ್ಯಂಬುಲೆನ್ಸ್ ಅಡ್ಡಗಟ್ಟಿ ನಿಲ್ಲಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 6ರ ಮಧ್ಯರಾತ್ರಿ 1 ಗಂಟೆಯ ವೇಳೆ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಸುರೇಶ್​ಗೌಡ ಆ್ಯಂಬುಲೆನ್ಸ್ ನಿಲ್ಲಿಸಿ ಮಾತನಾಡಿರುವುದು ಕಂಡಿದೆ. ಆದರೆ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಬಳಿಕ ಆ್ಯಂಬುಲೆನ್ಸ್ ಮೈಸೂರು ಕಡೆ ತೆರಳಿದೆ.

ವಿಡಿಯೋ ಬಿಡುಗಡೆ ಮಾಡಿದ ಜೆಡಿಎಸ್

ಆ್ಯಂಬುಲೆನ್ಸ್ ತಡೆದ ವಿಚಾರಕ್ಕೆ ಜೆಡಿಎಸ್​ ಟ್ವಿಸ್ಟ್​ಕೊಟ್ಟಿದೆ. ನಾವು ಜಗದೀಶ್ ಆರೋಗ್ಯ ವಿಚಾರಿಸಲು ಆ್ಯಂಬುಲೆನ್ಸ್ ನಿಲ್ಲಿಸಿದ್ದು. ಜಗದೀಶ್‌ ಅವರನ್ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ?. ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ?. ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದೀರಾ?. ಸರಿ ಹೋಗಿ ಎನ್ನುವ ಸುರೇಶ್‌ಗೌಡ ಅವರ ವಿಡಿಯೋವನ್ನ ರಿಲೀಸ್ ಮಾಡಿದೆ. ಆ ಮೂಲಕ ಕೃಷಿ ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದ ಹೇಳಿಕೆಗೆ ಉತ್ತರ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಚಾಲಕ ಆತ್ಮಹತ್ಯೆ ಯತ್ನ ಕೇಸ್​.. ‘ಆ್ಯಂಬುಲೆನ್ಸ್ ತಡೆದಿದ್ದಾರೆ’ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ JDS ವಿಡಿಯೋ ರಿಲೀಸ್ ಮಾಡಿ ಕೌಂಟರ್!

https://newsfirstlive.com/wp-content/uploads/2023/07/AMBULENCE.jpg

Load More