newsfirstkannada.com

Udupi Murder: ಗಗನಸಖಿ ಮೇಲೆ ವಿವಾಹಿತನ ಮೋಹ.. ಹತ್ಯೆಗೂ ಮೊದಲೇ ಮನೆಗೆ ಬಂದು ಹೋಗಿದ್ದ ಕೊಲೆಗಾರ?

Share :

16-11-2023

  ಮದುವೆಯಾಗಿದ್ದ ಪ್ರವೀಣ ಚೌಗಲೆಗೆ ಗಗನಸಖಿ ಮೇಲೆ ಪ್ರೀತಿ

  ಏರ್ ಇಂಡಿಯಾ ವಿಮಾನದಲ್ಲಿ ಜೊತೆಯಾಗಿ ಹಾರಾಡುತ್ತಿದ್ದಾಗ ಪ್ರೇಮ

  ಕ್ಯಾಬಿನ್ ಕ್ರ್ಯೂ ಪ್ರವೀಣ್‌, ಗಗನಸಖಿಯನ್ನು ಕೊಲೆ ಮಾಡಿದ್ದು ಯಾಕೆ?

ಉಡುಪಿ: ಒಂದೇ ಮನೆಯಲ್ಲಿ ನಾಲ್ವರ ಹತ್ಯಾಕಾಂಡ ನಡೆದಿದ್ದ ರಕ್ತಪಾತ ಬೆಚ್ಚಿ ಬೀಳಿಸಿದೆ. ಗಗನಸಖಿ ಅಯ್ನಾಸ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ ಕಿರಾತಕನ ಕ್ರೌರ್ಯ ಬಗೆದಷ್ಟು ಬಯಲಾಗ್ತಿದೆ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಪ್ರವೀಣ ಚೌಗಲೆ ತಾನು ಯಾರು? ಅಯ್ನಾಸ್‌ಳನ್ನು ಕೊಲೆ ಮಾಡಲು ಕಾರಣವೇನು ಅನ್ನೋ ಸ್ಫೋಟಕ ಸಂಗತಿಗಳನ್ನ ಬಾಯ್ಬಿಟ್ಟಿದ್ದಾನೆ.

ಹಂತಕ ಪ್ರವೀಣ ಚೌಗಲೆ ಗಗನಸಖಿ ಅಯ್ನಾಸ್‌ಳನ್ನು ಕೊಲೆ ಮಾಡಲು ನಿರ್ಧರಿಸಿಯೇ ಉಡುಪಿಗೆ ಬಂದಿದ್ದ. ಏರ್ ಇಂಡಿಯಾ ವಿಮಾನದಲ್ಲಿ ಜೊತೆ, ಜೊತೆಯಾಗಿ ಹಾರಾಡುತ್ತಿದ್ದ ಇವರಿಬ್ಬರ ಮಧ್ಯೆ ಪರಿಚಯವಾಗಿತ್ತು. ಪರಿಚಯ, ಸ್ನೇಹದಿಂದ ಇಬ್ಬರ ಮಧ್ಯೆ ಸಲುಗೆಯೂ ಬೆಳೆದಿತ್ತು. ಈಗಾಗಲೇ ಮದುವೆಯಾಗಿದ್ದ ಪ್ರವೀಣ ಚೌಗಲೆಗೆ ಗಗನಸಖಿ ಅಯ್ನಾಸ್‌ಳ ಮೇಲಿದ್ದ ಮೋಹವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

ಆರೋಪಿ ಪ್ರವೀಣ ಚೌಗಲೆ ಏರ್‌ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬಿನ್ ಕ್ರ್ಯೂ ಅಂದ್ರೆ ವಿಮಾನ ಹತ್ತಿದ ಮೇಲೆ ಪ್ರಯಾಣಿಕರು ವಿವರಣೆ ನೀಡೋ ಕಾರ್ಯ. ಇದೇ ವಿಮಾನದಲ್ಲಿ ಸಹೋದ್ಯೋಗಿಯಾಗಿದ್ದು ಗಗನಸಖಿ ಅಯ್ನಾಸ್‌. ಅಯ್ನಾಸ್‌ ಅಂದ್ರೆ ಪ್ರವೀಣ್ ಅದೆಷ್ಟು ಇಷ್ಟ ಪಡುತ್ತಿದ್ದ ಅಂದ್ರೆ, ಅಯ್ನಾಸ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪ್ರವೀಣ್ ಚೌಗಲೆ ಹುಚ್ಚನಂತಾಗಿದ್ದ.

ಅಯ್ನಾಸ್ ತನ್ನಿಂದ ದೂರ ಮಾಡಿದ್ದಕ್ಕೆ ಕೋಪಗೊಂಡ ಪ್ರವೀಣ್ ಕೊಲೆ ಮಾಡಲು ನಿರ್ಧರಿಸಿದ್ದ. ಈತನ ಉದ್ದೇಶ ಅಯ್ನಾಸ್ ಒಬ್ಬಳನ್ನೇ ಕೊಲೆ ಮಾಡುವುದಾಗಿತ್ತು. ಆದರೆ, ಸಾಕ್ಷ್ಯ ನಾಶದ ಕಾರಣಕ್ಕೆ ಅಯ್ನಾಸ್ ಜೊತೆಗಿದ್ದ ಅಮ್ಮ, ತಮ್ಮ, ತಂಗಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರವೀಣ್ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಿಷ್ಟೇ ಅಲ್ಲ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಹಂತಕ ಪ್ರವೀಣ್ ಕೊಲೆ ಮಾಡೋದಕ್ಕೂ ಮೊದಲೇ ಅಯ್ನಾಸ್ ಮನೆಗೆ ಬಂದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಉಡುಪಿ ಪೊಲೀಸರು ಪ್ರವೀಣ್ ಹೆಜ್ಜೆ ಗುರುತನ್ನೇ ಹಿಂಬಾಲಿಸಿಕೊಂಡು ಹೋಗಿ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi Murder: ಗಗನಸಖಿ ಮೇಲೆ ವಿವಾಹಿತನ ಮೋಹ.. ಹತ್ಯೆಗೂ ಮೊದಲೇ ಮನೆಗೆ ಬಂದು ಹೋಗಿದ್ದ ಕೊಲೆಗಾರ?

https://newsfirstlive.com/wp-content/uploads/2023/11/UDUPI-6.jpg

Load More