newsfirstkannada.com

ಅವಳೇ ನನ್ನ ದೂರ ತಳ್ಳಿದ್ದಳು.. 22 ಬಾರಿ ಚುಚ್ಚಿ ಕೊಲೆ ಮಾಡಿದ ಕಿರಾತಕ ಬಾಯ್ಬಿಟ್ಟ ಸ್ಫೋಟಕ ಸತ್ಯ!

Share :

30-05-2023

  22 ಬಾರಿ ಚುಚ್ಚಿ, ಚುಚ್ಚಿ ಕೊಂದ ರಾಕ್ಷಸ ಹೇಳಿದ್ದೇನು?

  ದೆಹಲಿಯಿಂದ ತಪ್ಪಿಸಿಕೊಂಡು ಹೋದ ಹಂತಕನ ಸೆರೆ

  ಅವಳು ಮತ್ತು ಅವನ ಪ್ರೀತಿಯಲ್ಲಿ ಮತ್ತೊಬ್ಬ ಬಂದ

ನವದೆಹಲಿ: ಪ್ರೀತಿಸಿದ ಯುವತಿಗೆ 22 ಬಾರಿ ಚುಚ್ಚಿ, ಚುಚ್ಚಿ ಕೊಲೆ ಮಾಡಿದ ನರರಾಕ್ಷಸನ ಕರಾಳಮುಖ ಬಗೆದಷ್ಟು ಬಯಲಾಗ್ತಿದೆ. ದೆಹಲಿ ಪೊಲೀಸರು ಆರೋಪಿ ಸಾಹಿಲ್‌ನನ್ನು ಬಂಧಿಸಿದ್ದು, ಭೀಕರ ಹತ್ಯೆಗೆ ಕಾರಣವಾದ ಅಂಶಗಳನ್ನ ಬಾಯ್ಬಿಡಿಸಿದ್ದಾರೆ. ವಿಚಾರಣೆ ವೇಳೆ ಪಾಪಿ ಸಾಹಿಲ್, ಯಾವುದೇ ಪಶ್ಚಾತ್ತಾಪ ಪಡದೇ ತಾನೇಕೆ ಅಮಾನುಷವಾಗಿ ಕೊಂದೇ ಅನ್ನೋ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ಕೊಲೆಯಾದ ಯುವತಿ ಹಾಗು 20 ವರ್ಷದ ಸಾಹಿಲ್ ಮಧ್ಯೆ ಸ್ನೇಹವಿತ್ತು. ಸ್ನೇಹದಿಂದ ಪ್ರೀತಿ ಶುರುವಾಗಿತ್ತು. ಪ್ರೀತಿಸಿದ ನನ್ನನ್ನು ಅವಳು ನಿರ್ಲಕ್ಷ್ಯ ಮಾಡಿದ್ದಳು. ಆಕೆ ಮಾಜಿ ಗೆಳೆಯನ ಜೊತೆ ಸಂಬಂಧ ಹೊಂದಿದ್ದಳು. ಹೀಗಾಗಿ ನಾನು ಕೊಲೆ ಮಾಡಲು ನಿರ್ಧರಿಸಿದೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸಾಹಿಲ್ ಹೇಳಿಕೆ ನೀಡಿದ್ದಾನೆ. ಸದ್ಯ ಸಾಹಿಲ್‌ನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿ ಭೀಕರ ಹತ್ಯೆ ಪ್ರಕರಣದ ಹಿಂದೆ ಸದ್ಯ ಲವ್ ಫೆಲ್ಯೂರ್ ತಳುಕು ಹಾಕಿಕೊಂಡಿದೆ.

ದೆಹಲಿಯಲ್ಲಿ ಕೊಂದು ಪರಾರಿ
ಪ್ರೀತಿಸಿದ ಹುಡುಗಿಯನ್ನೇ ಚುಚ್ಚಿ, ಚುಚ್ಚಿ ಕೊಂದ ಸಾಹಿಲ್ ತಕ್ಷಣವೇ ದೆಹಲಿಯಿಂದ ತಪ್ಪಿಸಿಕೊಂಡಿದ್ದ. ಈತನ ಸುಳಿವು ಕಂಡು ಹಿಡಿದ ಪೊಲೀಸರು ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಸಾಹಿಲ್ ದೆಹಲಿಯಲ್ಲಿ ಎಸಿ ರಿಪೇರಿ ಕೆಲಸ ಮಾಡಿಕೊಂಡು ಇದ್ದ. ಪರಿಚಯವಾದ ಹುಡುಗಿಯನ್ನ ಪ್ರೀತಿಸಿ, ಆಕೆ ನನ್ನನ್ನು ದೂರ ಮಾಡುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೆಹಲಿಯಲ್ಲಿ ಸಾಹಿಲ್ ಕೊಲೆ ಮಾಡಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅವಳೇ ನನ್ನ ದೂರ ತಳ್ಳಿದ್ದಳು.. 22 ಬಾರಿ ಚುಚ್ಚಿ ಕೊಲೆ ಮಾಡಿದ ಕಿರಾತಕ ಬಾಯ್ಬಿಟ್ಟ ಸ್ಫೋಟಕ ಸತ್ಯ!

https://newsfirstlive.com/wp-content/uploads/2023/05/Delhi-Murder-1.jpg

Load More