ಅನುಮಾನ ಬಂದು ವಿಚಾರಣೆ ಮಾಡಿದಾಗ ಬಯಲಾಯ್ತು ಸತ್ಯ
ಕಂಡಕ್ಟರ್ ಎಂದು ಸುಳ್ಳು ಹೇಳಿ ಸರ್ಕಾರಿ ಬಸ್ಗಳಲ್ಲಿ ತಿರುಗಾಟ.!
ಯೂನಿಫಾರ್ಮ್ ಧರಿಸಿ ಟಿಕೆಟ್ ಖರೀದಿಸದೇ ಬಸ್‌ನಲ್ಲಿ ಪ್ರಯಾಣ
ಬೆಂಗಳೂರು: KSRTCಯ ಕಂಡಕ್ಟರ್ ಯೂನಿಫಾರ್ಮ್ ಧರಿಸಿಕೊಂಡು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಫ್ರಿಯಾಗಿ ಓಡಾಡುತ್ತಿದ್ದ ಕಿಲಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಬೆಳಗಾವಿಯ ಅಥಣಿ ಮೂಲದ ಆನಂದ್ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದ ಆರೋಪಿ. ತುಮಕೂರು ಡಿಪೋದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಂಡಕ್ಟರ್ ಟಿಕೆಟ್ ಕೇಳಿದ್ದಾರೆ. ಈ ವೇಳೆ ನಾನು ಕಂಡಕ್ಟರ್ ಎಂದು ಹೇಳಿದ್ದಾನೆ. ಆದ್ರೆ ಬಸ್ ಕಂಡಕ್ಟರ್ಗೆ ಅನುಮಾನ ಬಂದು ಟೋಕನ್ ನಂಬರ್ ಏನು ಎಂದು ಕೇಳಿದ್ದಾರೆ. ಬಳಿಕ ಇನ್ನೊಂದೆರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಆದ್ರೆ ಯಾವುದಕ್ಕೂ ಆಸಾಮಿ ಏನು ಕೂಡ ಉತ್ತರ ಕೊಟ್ಟಿಲ್ಲ. ಅಲ್ಲದೇ ಫೇಕ್ ಬಸ್ ಟಿಕೆಟ್ಗಳನ್ನು ಕೂಡ ತನ್ನ ಬಳಿ ಇಟ್ಟುಕೊಂಡು ಓಡಾಡುತ್ತಿದ್ದನು. ಹೀಗಾಗಿ ಫೇಕ್ ಕಂಡಕ್ಟರ್ ಎಂದು ಗೊತ್ತಾಗಿ ಆರೋಪಿಯನ್ನು ಹಿಡಿದು ಗೊರಗುಂಟೆಪಾಳ್ಯ ಡಿಪೋ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು.
ಬಳಿಕ ಡಿಪೋ ಅಧಿಕಾರಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿರುವ ಪೊಲೀಸರು ಆರೋಪಿ ಹೆಸರು ಆನಂದ್ ಎಂದು ಗೊತ್ತಾಗಿದೆ. ಅಥಣಿ ಮೂಲದ ಈತ ಬೆಂಗಳೂರಿನ ಗೊರಗುಂಟೆಪಾಳ್ಯದ ಗ್ಯಾರೇಜ್ವೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ