newsfirstkannada.com

ಚಿನ್ನಸ್ವಾಮಿಯಲ್ಲಿ ಕನ್ನಡಿಗನ ‘ಚಿನ್ನ’ದಂತ ಸೆಂಚುರಿ.. ದೀಪಾವಳಿಗೆ ಶತಕದ ಗಿಫ್ಟ್​ ನೀಡಿದ ಕೆ.ಎಲ್ ರಾಹುಲ್

Share :

13-11-2023

    ದೀಪಾವಳಿಗೆ ಬಂಪರ್ ಶತಕದ ಗಿಫ್ಟ್​ ನೀಡಿದ ಲೋಕಲ್​ ಬಾಯ್​​​

    ಕರುನಾಡ ಕಲಿಯ ಬ್ಯಾಟಿಂಗ್ ರೌದ್ರನರ್ತನಕ್ಕೆ ಡಚ್ಚರು ಉಡೀಸ್​​

    ಅನ್​​​ಲಕ್ಕಿ ಗ್ರೌಂಡ್​ನಲ್ಲಿ 'ಲಕ್ಕಿ' ಶತಕ..! ಫ್ಯಾನ್ಸ್​​​​ ಫುಲ್ ಖುಷ್​​​..!

ಅಬ್ಬಬ್ಬಾ..! ಅದೇನ್​​ ಆಟ ಅಂತೀರಾ ? ನಿಜಕ್ಕೂ ವಂಡರ್​​ಫುಲ್​​​​​​​​​​​​​..! ಚಿನ್ನಸ್ವಾಮಿಯಲ್ಲಿ ಅಬ್ಬರಿಸಿದ ಬೊಬ್ಬಿರಿದ ಕೆ.ಎಲ್​ ರಾಹುಲ್​​​​​​​​ ದೀಪಾವಳಿಗೆ ಸೆಂಚುರಿ ಗಿಫ್ಟ್​ ನೀಡಿದ್ದಾರೆ. ಕನ್ನಡಿಗನ ವೀರಾವೇಶಕ್ಕೆ ಡಚ್ಚರ ಬೌಲಿಂಗ್ ಧೂಳೀಪಟವಾಯ್ತು. ಇದುವರೆಗೆ ಯಾವೊಬ್ಬ ಇಂಡಿಯನ್ ಮಾಡದ ದಾಖಲೆ ರಾಹುಲ್ ಹೆಸರಿಗೆ ಸೇರಿಕೊಂಡಿತು.

ವಿಶ್ವಕಪ್​​ನ ಫೈನಲ್​ ಲೀಗ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಬಿಗ್​ ವಿಕ್ಟರಿ ದಾಖಲಿಸ್ತು. ಜಬರ್ದಸ್ತ್​​​​ಬ್ಯಾಟಿಂಗ್​​​​, ಮಿಂಚಿನ ಬೌಲಿಂಗ್​​, ಚುರುಕಿನ ಫೀಲ್ಡಿಂಗ್​​​​​​​​​​. ಮೂರು ವಿಭಾಗದಲ್ಲಿ ಇಂಡಿಯನ್​ ಕಲಿಗಳು ಶೈನ್ ಆದ್ರು. ಬೃಹತ್ ಗೆಲುವು ಕಂಡ ಭಾರತ ಅಜೇಯವಾಗಿ ಗ್ರೂಪ್​​ ಸ್ಟೇಜ್​​ಗೆ ಗುಡ್​​​ ಬೈ ಹೇಳಿದೆ. ಚಿನ್ನಸ್ವಾಮಿಯಲ್ಲಿ ರೋಹಿತ್​​ ಪಡೆಯ ಚಿನ್ನದಂತ ಗೆಲುವಿಗೆ ಕಾರಣವಾಗಿದ್ದು, ಕನ್ನಡಿಗ ಕೆ.ಎಲ್​​ ರಾಹುಲ್​​..!

ಚಿನ್ನಸ್ವಾಮಿಯಲ್ಲಿ ಕನ್ನಡಿಗ ರಾಹುಲ್ ‘ಚಿನ್ನ’ದಂತ ಸೆಂಚುರಿ..!

ರಾಹುಲ್​​, ರಾಹುಲ್​​, ರಾಹುಲ್​​​..! ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ಪೂರ್ತಿ ಪ್ರತಿಧ್ವನಿಸಿದ್ದು ಇದೊಂದು ಹೆಸರೇ. ಹೋಮ್​ಗ್ರೌಂಡ್​​ನಲ್ಲಿ ಹೈಎಕ್ಸ್​ಪೆಕ್ಟೇಶನೊಂದಿಗೆ ರಾಹುಲ್​ ಕಣಕ್ಕಿಳಿದಿದ್ರು. ಕೊನೆಗೂ ಆ ನಿರೀಕ್ಷೆ ಹುಸಿಗೊಳಿಸಲಿಲ್ಲ. ಡಚ್ಚರ ಬೌಲಿಂಗ್​​​ಗೆ ಡಿಚ್ಚಿ ಕೊಟ್ಟ ರಾಹುಲ್ ಸ್ಪೋಟಕ ಶತಕ ಸಿಡಿಸಿ ಶೈನ್ ಆದ್ರು. ಆ ಮೂಲಕ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್​​ಗೆ ಬಂಪರ್​​ ದೀಪಾವಳಿ ಗಿಫ್ಟ್​​​​​​​​ ನೀಡಿದ್ರು.

ಕಿಂಗ್ ಕೊಹ್ಲಿ ನಿರ್ಗಮನದ ಬಳಿಕ ಕ್ರೀಸ್​​ಗೆ ದಾಂಗುಡಿ ಇಟ್ಟ ರಾಹುಲ್​​ ಸಿಕ್ಸರ್​​​​-ಬೌಂಡ್ರಿಗಳ ಮಳೆಗರೆದ್ರು. ಮೈದಾನದ ಅಷ್ಟ ದಿಕ್ಕಿಗೂ ಚೆಂಡಿನ ದರ್ಶನ ಮಾಡಿದ ರಾಕಿಂಗ್ ಸ್ಟಾರ್​ ಡಚ್ಚರ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ್ರು. ಆ ಮೂಲಕ ಪ್ರಸಕ್ತ ವಿಶ್ವಕಪ್​​ನಲ್ಲಿ ಚೊಚ್ಚಲ ಶತಕ ಸಿಡಿಸಿ ರಾರಾಜಿಸಿದ್ರು.

ಇದನ್ನು ಓದಿ: ನಂಬಿದ್ರೆ ನಂಬಿ.. 40 ವರ್ಷದ ವ್ಯಕ್ತಿಯ ಜೀವ ಉಳಿಸಿದ್ದು ಮತ್ತ್ಯಾರು ಅಲ್ಲ, ಆ್ಯಪಲ್​ ವಾಚ್!​ 

ನೆದರ್​ರ್ಲೆಂಡ್ಸ್ ವಿರುದ್ಧ ರಾಹುಲ್ ಸಾಧನೆ

ಹೋಮ್​ಗ್ರೌಂಡ್​ನಲ್ಲಿ ವಿಷ್ಣುವಿನ ರೂಪ ತಾಳಿದ ರಾಹುಲ್​ 64 ಎಸೆತಗಳಲ್ಲಿ ಸ್ಪೋಟಕ 102 ರನ್ ಬಾರಿಸಿದ್ರು. 159.37 ರ ಸ್ಟ್ರೈಟ್​​​ರೇಟ್​​​​ನಲ್ಲಿ ಬ್ಯಾಟ್ ಬೀಸಿದ್ದು, ಅವರ ಬ್ಯಾಟ್​ನಿಂದ 11 ಬೌಂಡ್ರಿ ಹಾಗೂ 4 ಸಿಕ್ಸರ್​​ಗಳು ಸಿಡಿದವು.

ಅನ್​​​ಲಕ್ಕಿ ಗ್ರೌಂಡ್​ನಲ್ಲಿ ‘ಲಕ್ಕಿ’ ಶತಕ..!

ಹೋಮ್​ಗ್ರೌಂಡ್​​ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ರಾಹುಲ್ ವಿಷ್ಯದಲ್ಲಿ ಮಾತ್ರ ಉಲ್ಟಾ. ಯಾಕಂದ್ರೆ ಚಿನ್ನಸ್ವಾಮಿ ಸ್ಟೇಡಿಯಂ ರಾಕಿಂಗ್ ಸ್ಟಾರ್​​ಗೆ ಅನ್​ಲಕ್ಕಿ ಗ್ರೌಂಡ್​ ಆಗಿ ಪರಿಣಮಿಸಿತ್ತು. ಆಡಿದ ಏಕೈಕ ಏಕದಿನ ಪಂದ್ಯದಲ್ಲಿ 19 ರನ್​ ಗಳಿಸಿದ್ರೆ, 2 ಟಿ20 ಪಂದ್ಯಗಳಿಂದ ಜಸ್ಟ್​ 19 ರನ್​ ಗಳಿಸಿದ್ರು. ಆದ್ರೆ ನಿನ್ನೆ ಅಮೋಘ ಶತಕ ಸಿಡಿಸುವ ಮೂಲಕ ತವರಿನಂಗಳದಲ್ಲಿ ವೈಫಲ್ಯ ಮೆಟ್ಟಿನಿಂತ್ರು.

ಇದನ್ನು ಓದಿ:ABD ದಾಖಲೆಗೆ ಧ್ವಂಸ  ಮಾಡಿದ ರೋಹಿತ್​ ಶರ್ಮಾ.. 8 ಬೌಂಡರಿ, 2 ಸಿಕ್ಸರ್​​, ಭರ್ಜರಿ ಹಾಫ್​ ಸೆಂಚುರಿ.!

ರೋಹಿತ್​​ ರೆಕಾರ್ಡ್​ ಖತಂ​..ವಿಶ್ವಕಪ್​​ನಲ್ಲಿ ಶರವೇಗದ ಶತಕ..!

ಫೆಂಟಾಸ್ಟಿಕ್ ಇನ್ನಿಂಗ್ಸ್ ಕಟ್ಟಿದ ರಾಹುಲ್​​, ರೋಹಿತ್​​ ಶರ್ಮಾ ಹೆಸರಿನಲ್ಲಿದ್ದ ಫಾಸೆಸ್ಟ್​​​​ ಶತಕದ ದಾಖಲೆಯನ್ನ ಅಳಿಸಿ ಹಾಕಿದ್ರು. ಹಿಟ್​ಮ್ಯಾನ್ ಇದೇ ವಿಶ್ವಕಪ್​​ನಲ್ಲಿ 63 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ರು. ಸದ್ಯ ರಾಹುಲ್​ 64 ಎಸೆತಗಳಲ್ಲಿ ಬಾರಿಸುವ ಮೂಲಕ ವಿಶ್ವಕಪ್ ಹಿಸ್ಟರಿಯಲ್ಲಿ ಭಾರತ ಪರ ಶರವೇಗದ ಶತಕ ಸಿಡಿಸಿದ ಸಾಧನೆ ಮಾಡಿದ್ರು.

ಇದಿಷ್ಟೇ ಅಲ್ಲದೇ, ವಿಶ್ವಕಪ್​​ ಟೂರ್ನಮೆಂಟ್​ನಲ್ಲಿ ರಾಹುಲ್ ದ್ರಾವಿಡ್ ಬಳಿಕ ಶತಕ ಬಾರಿಸಿದ ಭಾರತದ 2ನೇ ವಿಕೆಟ್ ಕೀಪರ್​ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು. ಒಟ್ಟಿನಲ್ಲಿ ಹೋಮ್​ಗ್ರೌಂಡ್​ನಲ್ಲಿ ವಂಡರ್​ಫುಲ್ ಸೆಂಚುರಿ ಬಾರಿಸಿದ ರಾಹುಲ್​ ದೀಪಾವಳಿ ಗಿಫ್ಟ್​ ನೀಡಿದ್ದಲ್ಲದೇ, ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಮತ್ತೊಮ್ಮೆ ಆಪತ್ಬಾಂಧವರಾಗಿ ಹೊರಹೊಮ್ಮಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಿನ್ನಸ್ವಾಮಿಯಲ್ಲಿ ಕನ್ನಡಿಗನ ‘ಚಿನ್ನ’ದಂತ ಸೆಂಚುರಿ.. ದೀಪಾವಳಿಗೆ ಶತಕದ ಗಿಫ್ಟ್​ ನೀಡಿದ ಕೆ.ಎಲ್ ರಾಹುಲ್

https://newsfirstlive.com/wp-content/uploads/2023/11/KL-Rahul.jpg

Load More