ಹಣಕೋಣ ಉದ್ಯಮಿ ವಿನಾಯಕ ಅವರ ಬರ್ಬರ ಹ*ತ್ಯೆ ಕೇಸ್
ಪ್ರಮುಖ ಆರೋಪಿ ಇದೇ ಕಾರವಾರ ಮೂಲದ ಗುರುಪ್ರಸಾದ್
ಪೂನಾ ಉದ್ಯಮಿಯಾಗಿದ್ದ ವಿನಾಯಕ ಅವರ ಸಾವಿಗೆ ಕಾರಣವೇನು?
ಕಾರವಾರ: ಮನೆ ಮುಂದೆಯೇ ಹಣಕೋಣ ಉದ್ಯಮಿ ವಿನಾಯಕ ಅವರ ಬರ್ಬರ ಹ*ತ್ಯೆ ಭಯಾನಕವಾಗಿತ್ತು. ಬೆಳ್ಳಂಬೆಳಗ್ಗೆ ಈ ಸುದ್ದಿ ಕೇಳಿದ ಕಾರವಾರ ಜನರು ಅಕ್ಷರಶಃ ಬೆಚ್ಚಿ ಬೀಳುವಂತೆ ಮಾಡಿತ್ತು. ಹಣಕೋಣ ಉದ್ಯಮಿ ದುರಂತ ಸಾವಿನ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಉದ್ಯಮಿ ವಿನಾಯಕ ಅವರ ಕೊ*ಲೆ ಪ್ರಕರಣದ ಪ್ರಮುಖ ಆರೋಪಿ ಇದೇ ಕಾರವಾರ ಮೂಲದ ಗುರುಪ್ರಸಾದ್ ಎನ್ನಲಾಗಿತ್ತು. ಈ ಪ್ರಮುಖ ಆರೋಪಿ ಕೂಡ ಗೋವಾದ ಉದ್ಯಮಿಯಾಗಿದ್ದರು. ಇದೀಗ ಆರೋಪಿ ಗುರುಪ್ರಸಾದ ಗೋವಾದ ಮಾಂಡವಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮನೆಯ ಹೊಸ್ತಿಲಲ್ಲೇ ರಣ ಭೀಕರ ಹ*ತ್ಯೆ.. ಕಾರವಾರದಲ್ಲಿ ಉದ್ಯಮಿಯ ದಾರುಣ ಅಂತ್ಯ; ಆಗಿದ್ದೇನು?
ಪೂನಾ ಉದ್ಯಮಿ ವಿನಾಯಕ ಹಾಗೂ ಗೋವಾ ಉದ್ಯಮಿಯಾಗಿದ್ದ ಗುರುಪ್ರಸಾದ್ ಅವರ ಮಧ್ಯೆ ವೈಯಕ್ತಿಕ ಕಾರಣಕ್ಕೆ ದ್ವೇಷ ಉಂಟಾಗಿತ್ತು. ಈ ವೈಯಕ್ತಿಕ ಕಾರಣದಿಂದಲೇ ಉದ್ಯಮಿ ವಿನಾಯಕ ನಾಯ್ಕ್ ಅವರನ್ನ ಗುರುಪ್ರಸಾದ್ ತನ್ನ ಕಂಪನಿ ಕೆಲಸ ಮಾಡುತ್ತಿದ್ದ ಬಿಹಾರಿಗಳಿಂದ ಹ*ತ್ಯೆ ಮಾಡಿಸಿದ್ದರು.
ಕಳೆದ ಸೆಪ್ಟೆಂಬರ್ 22ರಂದು ಹಣಕೋಣದ ವಿನಾಯಕ ಅವರ ಮನೆಯಲ್ಲಿ ಹ*ತ್ಯೆ ಮಾಡಲಾಗಿತ್ತು. ಆರೋಪಿ ಪತ್ತೆಗೆ ಕಾರವಾರ ಪೊಲೀಸರು ಬಲೆ ಬೀಸಿದ್ದರು. ಈಗಾಗಲೇ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಪ್ರಮುಖ ಆರೋಪಿ ಗುರುಪ್ರಸಾದ್ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಪ್ರಮುಖ ಆರೋಪಿ ಗುರುಪ್ರಸಾದ್ ಅವರು ಕಾರವಾರ ತಾಲೂಕಿನ ಹಳಗಾ ಗ್ರಾಮದವರು. ಗೋವಾದಲ್ಲಿ ಉದ್ಯಮ ಮಾಡುತ್ತಿದ್ದ ಗುರುಪ್ರಸಾದ್ ಹಾಗೂ ಪೂನಾದಲ್ಲಿ ಉದ್ಯಮಿಯಾಗಿದ್ದ ವಿನಾಯಕ ಮಧ್ಯೆ ವೈಯಕ್ತಿಕ ದ್ವೇಷವಿತ್ತು. ಈ ವೈಯಕ್ತಿಕ ದ್ವೇಷವೇ ಇಬ್ಬರ ದುರಂತ ಸಾವಿನಲ್ಲಿ ಅಂತ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ