ಅಪ್ಪು ಡಾಬಾ ಮುಂದೆ ನಡೆಯಿತು ಹಾಫ್ ಮರ್ಡರ್
ಟಿಶ್ಯೂ ವಿಚಾರಕ್ಕೆ ಗಲಾಟೆ, ಇಬ್ಬರಿಗೆ ಚಾಕು ಇರಿದ ವ್ಯಕ್ತಿ
ಈರುಳ್ಳಿ ಕತ್ತರಿಸುವ ಚಾಕು ತೆಗೆದು ಇಬ್ಬರಿಗೆ ಇರಿದ
ರಾಯಚೂರು: ಟಿಶ್ಯೂ ಪೇಪರ್ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಅಪ್ಪು ಡಾಬಾ ಮುಂದೆ ನಡೆದಿದೆ. ವಿರೇಶ್ ಎಂಬಾತ ರಮೇಶ್ ಮತ್ತು ಸತ್ತರ್ ಎಂಬ ಯುವಕರಿಗೆ ಚಾಕು ಇರಿದಿದ್ದಾನೆ.
ರಮೇಶ್ ಮತ್ತು ಸತ್ತರ್ ಗೆಳೆಯರೊಡನೆ ಡಾಬಾಕ್ಕೆ ಊಟಕ್ಕೆ ಬಂದಿದ್ದರು. ಅಲ್ಲೆ ಮಾಲೀಕ್ ಮತ್ತು ವಿರೇಶ್ ಸ್ಥಳದಲ್ಲೇ ಇದ್ದರು. ಈ ವೇಳೆ ವಿರೇಶ್ ಕಂಡು ಸತ್ತರ್ ವೇಟರ್ ಟಿಶ್ಯೂ ಪೇಪರ್ ಕೊಡು ಎಂದಿದ್ದಾನೆ. ಇದಕ್ಕೆ ಕೋಪಗೊಂಡ ವಿರೇಶ್ ನನ್ನ ವೇಟರ್ ಅಂತ ತಿಳಿದುಕೊಂಡಿದ್ದೀಯಾ ಎಂದು ಕಿರಿಕ್ ಮಾಡಿದ್ದಾನೆ.
ಕೊನೆಗೆ ವಿರೇಶ್ ಮತ್ತು ಸತ್ತರ್ ಫ್ರೆಂಡ್ಸ್ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಈರುಳ್ಳಿ ಕೊಯ್ಯುವ ಚಾಕುವಿನಿಂದ ವಿರೇಶ್ ಇರಿದಿದ್ದಾನೆ. ಘಟನೆಯಲ್ಲಿ ರಮೇಶ್ ಮತ್ತು ಸತ್ತರ್ ಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಮಾನ್ವಿ ಮತ್ತು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಚಾಕು ಇರಿದ ಆರೋಪಿ ವಿರೇಶ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ