newsfirstkannada.com

ಒಂದು ಪೋಸ್ಟ್​ಗೆ 11.45 ಕೋಟಿ ಸಂಭಾವನೆ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ..!

Share :

Published August 13, 2023 at 1:31pm

Update August 13, 2023 at 1:33pm

    ನಿಜಕ್ಕೂ ಕೊಹ್ಲಿ​​ ಹಾಕಿದ ಪೋಸ್ಟ್​ಗೆ ಅಷ್ಟೊಂದು ಹಣ ಬರುತ್ತಾ?

    ಟ್ವೀಟ್ ಮಾಡಿ ವಿರಾಟ್ ಕೊಹ್ಲಿ ಹೇಳಿದ ಸತ್ಯವೇನು..?

    ವೈರಲ್ ಆಗಿರೋ ಸುದ್ದಿ ನೋಡಿ ಕೊಹ್ಲಿ ಬೇಸರ

ಯಾವಾಗಲೂ ಒಂದಿಲ್ಲೊಂದು ವಿಚಾರಗಳಿಗೆ ವಿರಾಟ್ ಕೊಹ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಇನ್‌ಸ್ಟಾಗ್ರಾಮ್‌ನ ಒಂದು ಪೋಸ್ಟ್‌ಗೆ 11.45 ಕೋಟಿ ಗಳಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಚಾರವನ್ನ ಸ್ವತಃ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿಯೇ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕೊಹ್ಲಿ, ಜೀವನದಲ್ಲಿ ನನಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ನನ್ನ ಸಾಮಾಜಿಕ ಮಾಧ್ಯಮದ ಗಳಿಕೆಯ ಬಗ್ಗೆ ಸುತ್ತುತ್ತಿರುವ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊಹ್ಲಿಯ ಇನ್​ಸ್ಟಾಗ್ರಾಮ್ ಪೋಸ್ಟ್ ಸಂಭಾವನೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ ವರ್ಷ ಒಂದು ಇನ್​ಸ್ಟಾ ಪೋಸ್ಟ್​ಗೆ 8.9 ಕೋಟಿ ಪಡೆಯುತ್ತಿದ್ದರು. 2023ರಲ್ಲಿ ಒಂದು ಇನ್​ಸ್ಟಾಗ್ರಾಮ್​ ಪೋಸ್ಟ್​ ಬೆಲೆ 11.14 ಕೋಟಿ ರೂಪಾಯಿ ಆಗಿದೆ. 2022 ರಲ್ಲಿ ಇನ್​​ಸ್ಟಾಗ್ರಾಮ್​​ನಿಂದಲೇ ಕೊಹ್ಲಿ 300 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಸುದ್ದಿಯಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಒಂದು ಪೋಸ್ಟ್​ಗೆ 11.45 ಕೋಟಿ ಸಂಭಾವನೆ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ..!

https://newsfirstlive.com/wp-content/uploads/2023/08/Kohli.jpg

Load More