ಮರೆವು ಎನ್ನುವುದು ಎಲ್ಲರಿಗೂ ಸ್ವಲ್ಪ ಇದ್ದೇ ಇರುತ್ತದೆ ಅಲ್ವಾ.!
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಏನು ಮಾಡಿದ್ರು?
ರೋಹಿತ್ ಶರ್ಮಾ ಟಾಸ್ ಗೆದ್ದ ಮೇಲೆ ಎಲ್ಲ ಮರೆತು ಹೋಗಿದ್ದರು
ಮರೆವು ಯಾರಿಗಿಲ್ಲ ಹೇಳಿ..? ಎಲ್ಲರಿಗೂ ಇರುತ್ತೆ. ಆದ್ರೆ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಮಾತ್ರ ತುಸು ಜಾಸ್ತಿನೇ ಇದೆ. ನಾವು ಯಾಕೆ ಇದನ್ನ ಹೇಳ್ತಿದ್ದೀವಿ ಅನ್ನೋದನ್ನ ನೀವ್ ತಿಳ್ಕೋಬೇಕು ಅಂದರೆ, ಇವತ್ತಿನ ಸಖತ್ ಸ್ಟೋರಿ ನೀವು ಓದಲೇಬೇಕು.
ಮರೆವು.. ಇದು ನಮಗೆ ವರವೂ ಆಗಬಹುದು ಶಾಪವೂ ಆಗಬಹುದು. ಆದ್ರೆ ಇದು ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಶಾಪ ಆಗಿದೆ. ಯಾಕಂದ್ರೆ, ಪ್ರತಿ ಬಾರಿ ಏನಾದರೂ ಒಂದನ್ನು ಮರೆಯೋದರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಸ್ಟ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎಂದರೇ ಇದೆ ವರ್ಷ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ಟಾಸ್ ವೇಳೆ ನಡೆದ ಘಟನೆ. ಈ ಪಂದ್ಯದ ವೇಳೆ ಟಾಸ್ ಗೆದ್ದಿದ್ದ ರೋಹಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದೋ ಅಥವಾ ಬೌಲಿಂಗ್ ಆಯ್ದುಕೊಳ್ಳೋದಾ ಎನ್ನುವುದನ್ನು ಮರೆತು ಬಿಟ್ಟಿದ್ದರು.
ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ರೋಹಿತ್ ಹೀಗೆ ಮರೆತಿರೋದು ಇದೇ ಮೊದಲಲ್ಲ. ಬಸ್, ಹೋಟೆಲ್, ವಿಮಾನದಲ್ಲಿ ಹಲವು ವಸ್ತುಗಳನ್ನ ಮರೆತಿದ್ದಾರೆ. ಆಶ್ಚರ್ಯಕರ ವಿಚಾರ ಅಂದ್ರೆ, ಒಮ್ಮೆ ರೋಹಿತ್ ತಮ್ಮ ಎಂಗೇಜ್ಮೆಂಟ್ ರಿಂಗ್ ಅನ್ನು ಹೋಟೆಲ್ನಲ್ಲಿ ಮರೆತು ಹೋಗಿದ್ದರಂತೆ. ರೋಹಿತ್ ಮರೆವು ವಿಚಾರ ಗೊತ್ತಿರೋ ಲಾಜಿಸ್ಟಿಕ್ ಮ್ಯಾನೇಜರ್ ಎಲ್ಲ ವಸ್ತಗಳು ಇವೆಯೇ ಎಂದು ಪ್ರತಿ ಬಾರಿ ರೋಹಿತ್ರನ್ನ ಕೇಳ್ತಾರಂತೆ. ಇದ್ರಿಂದಾನೇ ಗೊತ್ತಾಗುತ್ತೆ ಮುಂಬೈಕರ್ ಮರೆಗುಳಿ ಎಷ್ಟರ ಮಟ್ಟಿಗಿದೆ ಅನ್ನೋದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
🚨 Toss Update 🚨#TeamIndia win the toss and elect to field first in the second #INDvNZ ODI.
Follow the match ▶️ https://t.co/V5v4ZINCCL @mastercardindia pic.twitter.com/YBw3zLgPnv
— BCCI (@BCCI) January 21, 2023