ಸರ್ಕಾರಿ ಭೂಮಿ ಬಿಡಿಸಲು ಪೊಲೀಸರು ಹೋದಾಗ ಘಟನೆ
ನಮಗೆ ಭೂಮಿ ಬಿಟ್ಟು ಕೊಡಿ ಎಂದು ಪ್ರತಿಭಟಿಸಿದ ಕುಟುಂಬಗಳು
ಪ್ರತಿಭಟನೆ ನಡುವೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿ, ಆಸ್ಪತ್ರೆಗೆ ದಾಖಲು
ಹಾಸನ: ವ್ಯಕ್ತಿಯೋರ್ವ ಪೊಲೀಸರೆದುರು ವಿಷದ ಬಾಟಲಿ ಹಿಡಿದು, ವಿಷವನ್ನ ಮೈ ಮೇಲೆ ಸುರಿದು ಕೊಂಡು ಹೈಡ್ರಾಮಾ ಸೃಷ್ಟಿಸಿದ ಘಟನೆ ಬೇಲೂರು ತಾಲ್ಲೂಕಿನ ತಟ್ಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.
50ಕ್ಕೂ ಹೆಚ್ಚು ಕುಟುಂಬಗಳು 30 ವರ್ಷಗಳಿಂದ ಸರ್ಕಾರಿ ಗೋಮಾಳವನ್ನು ಉಳುಮೆ ಮಾಡುತ್ತಿದ್ದರು. ಆದರೆ ಭೂಮಿ ಬಿಡಿಸಲು ಪೊಲೀಸರು ಹೋದಾಗ ತುಂಬಿದ ಜನರ ನಡುವೆ ವ್ಯಕ್ತಿಯೋರ್ವ ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ್ದಲ್ಲದೆ, ವಿಷ ಕುಡಿಯಲು ಯತ್ನಿಸಿದ್ದಾನೆ.
ಕಂದಾಯ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಭೂಮಿ ಉಳುಮೆ ಮಾಡುತ್ತಿದ್ದ ಕುಟುಂಬಗಳನ್ನು ತೆರವು ಮಾಡಲು ಮುಂದಾಗುತ್ತಾರೆ. ಸರ್ಕಾರಿ ಗೋಮಾಳದಲ್ಲಿ ನೆಟ್ಟಿದ್ದ ತೆಂಗಿನಗಿಡ ಕಿತ್ತಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಪ್ರತಿಭಟಿಸುತ್ತಾರೆ. ನಮಗೆ ಭೂಮಿ ಬಿಟ್ಟು ಕೊಡಿ ನಾವು ಉಳುಮೆ ಮಾಡುತ್ತಿದ್ದೇವೆ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಇನ್ನು ಪ್ರತಿಭಟನೆ ನಡುವೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
https://twitter.com/NewsFirstKan/status/1688477138977206272?s=20
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ