newsfirstkannada.com

Modi Statue: 182 ಮೀಟರ್‌ಗಿಂತಲೂ ಎತ್ತರವಾದ ಮೋದಿ ಪ್ರತಿಮೆ ನಿರ್ಮಾಣಕ್ಕೆ ಮಾಸ್ಟರ್‌ ಪ್ಲಾನ್‌?; ಡಿಸೆಂಬರ್ 2023ಕ್ಕೆ ಲೋಕಾರ್ಪಣೆ?

Share :

06-08-2023

    ಗುಜರಾತ್‌ನಲ್ಲಿರುವ ಏಕತಾ ಪ್ರತಿಮೆ 182 ಮೀಟರ್ ಎತ್ತರದಲ್ಲಿದೆ

    ಚೀನಾದಲ್ಲಿರುವ ಬುದ್ಧನ ಸ್ಪ್ರಿಂಗ್ ಸ್ಟ್ಯಾಚೂ 128 ಮೀಟರ್ ಎತ್ತರ

    ಭಾರತದಲ್ಲಿ ತಲೆ ಎತ್ತಲಿದ್ಯಾ ಅತಿ ಎತ್ತರವಾದ ಮೋದಿ ಪ್ರತಿಮೆ?

ಪುಣೆ: ಭಾರತದ ಮೊಟ್ಟ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಗುಜರಾತ್‌ನಲ್ಲಿ ನಿರ್ಮಿಸಲಾಗಿದೆ. 182 ಮೀಟರ್ ಎತ್ತರ ಇರುವ ಪಟೇಲ್ ಪ್ರತಿಮೆ ಜಗತ್ತಿನ ಅತಿ ಎತ್ತರವಾದ ಪ್ರತಿಮೆ ಅನ್ನೋ ಪ್ರಖ್ಯಾತಿಗಳಿಸಿದೆ. ಚೀನಾದಲ್ಲಿ ಬುದ್ಧನ ಸ್ಪ್ರಿಂಗ್ ಸ್ಟ್ಯಾಚೂ 128 ಮೀಟರ್ ಎತ್ತರದಲ್ಲಿದ್ದು 2ನೇ ಸ್ಥಾನದಲ್ಲಿದೆ. ಇದೀಗ ಸರ್ದಾರ್ ವಲ್ಲಭ್‌ಭಾಯಿ ಪಟೇಲ್‌ ಅವರ ದಾಖಲೆಯನ್ನು ಬ್ರೇಕ್ ಮಾಡೋ ಸುದ್ದಿಯೊಂದು ಬಂದಿದೆ. ಪುಣೆಯಲ್ಲಿ ಜಗತ್ತಿನಲ್ಲೇ ಅತಿ ಎತ್ತರವಾದ ಪ್ರತಿಮೆಯನ್ನು ಕಟ್ಟುವ ಪ್ಲಾನ್ ನಡೆದಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 190 ರಿಂದ 200 ಮೀಟರ್ ಎತ್ತರದ ಪ್ರತಿಮೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಅನ್ನೋ ಸುದ್ದಿಯೊಂದು ವರದಿಯಾಗಿದೆ.

ಮಹಾರಾಷ್ಟ್ರದ DPIL ಅಂದ್ರೆ ಡಾರ್ವಿನ್ ಪ್ಲಾಟ್‌ಫಾರ್ಮ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಇಂತಹದೊಂದು ಮಾಹಿತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎತ್ತರದ ಪ್ರತಿಮೆ ಕಟ್ಟಲು DPIL ಖಾಸಗಿ ಗಿರಿಧಾಮವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಪುಣೆ ಬಳಿಯ ಲಾವಾಸಾ ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿ ಜಗತ್ತಿನಲ್ಲೇ ಅತಿ ಎತ್ತರವಾದ ಮೋದಿ ಪ್ರತಿಮೆಯನ್ನು ನಿರ್ಮಿಸೋ ಪ್ಲಾನ್ ಮಾಡಲಾಗಿದೆ. ಈ ಪ್ರತಿಮೆಯನ್ನು ಡಿಸೆಂಬರ್ 31, 2023ರ ವೇಳೆಗೆ ಲೋಕಾರ್ಪಣೆ ಮಾಡೋ ಗುರಿ ಹೊಂದಲಾಗಿದೆ. 2024ಕ್ಕೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನವೇ ಈ ವರ್ಷಾಂತ್ಯಕ್ಕೆ ಮೋದಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡೋ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

ಡಾರ್ವಿನ್ ಪ್ಲಾಟ್‌ಫಾರ್ಮ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ಮೂಲಭೂತ ಸೌಕರ್ಯ ಕಾಂಟ್ರಾಕ್ಟರ್ಸ್‌ಗೆ ಹೆಸರುವಾಸಿಯಾದ ಸಂಸ್ಥೆ. ಈ ಸಂಸ್ಥೆಯ ಅಜಯ್ ಹರಿನಾಥ ಸಿಂಗ್ ಅವರು ಹೇಳುವ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ಎತ್ತರದ ಪ್ರತಿಮೆಯು ದೇಶಕ್ಕೆ ಅವರು ನೀಡಿದ ಕೊಡುಗೆಗೆ ಗೌರವ ಸಮರ್ಪಿಸಲಿದೆ ಎಂದಿದ್ದಾರೆ.

‘ಪಟೇಲ್ ಪ್ರತಿಮೆಗೆ 10 ವರ್ಷ ಬೇಕಾಯ್ತು’

ಗುಜರಾತ್‌ನಲ್ಲಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣವಾಗಲು ಬರೋಬ್ಬರಿ 10 ವರ್ಷಗಳೇ ಬೇಕಾಯ್ತು. 2013ರಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ವಲ್ಲಭಬಾಯಿ ಪಟೇಲರ ಪ್ರತಿಮೆ ಅಡಿಪಾಯ ಹಾಕಿದರು. ಮೊದಲ ಹಂತದ ಟೆಂಡರ್ ಅನ್ನು ಅಕ್ಟೋಬರ್ 2013ರಲ್ಲಿ ಆಹ್ವಾನಿಸಿದ್ದು, ನವೆಂಬರ್, 31 ಅಕ್ಟೋಬರ್ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಇದೀಗ DPIL 182 ಅಡಿಗಿಂತಲೂ ಎತ್ತರವಾದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯನ್ನು ಡಿಸೆಂಬರ್ 2023ಕ್ಕೆ ಪ್ರತಿಮೆ ಲೋಕಾರ್ಪಣೆ ಮಾಡುವುದಾಗಿ ಹೇಳಿದೆ. ಇದು ನಿಜಕ್ಕೂ ಸಾಧ್ಯನಾ ಅನ್ನೋ ಪ್ರಶ್ನೆ ಮೂಡಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Modi Statue: 182 ಮೀಟರ್‌ಗಿಂತಲೂ ಎತ್ತರವಾದ ಮೋದಿ ಪ್ರತಿಮೆ ನಿರ್ಮಾಣಕ್ಕೆ ಮಾಸ್ಟರ್‌ ಪ್ಲಾನ್‌?; ಡಿಸೆಂಬರ್ 2023ಕ್ಕೆ ಲೋಕಾರ್ಪಣೆ?

https://newsfirstlive.com/wp-content/uploads/2023/08/Narendra-modi-Statue.jpg

Load More