newsfirstkannada.com

Breaking News: ತರಬೇತಿ ವೇಳೆ ವಿಮಾನ ಪತನ.. ಪ್ಯಾರಾಚ್ಯೂಟ್​ ಮೂಲಕ ಜೀವ ಉಳಿಸಿಕೊಂಡ ಪೈಲಟ್​ಗಳು

Share :

01-06-2023

    ಹಾರುತ್ತಿದ್ದ ಲಘು ವಿಮಾನ ಏಕಾಏಕಿ ಪತನ

    ಇಬ್ಬರು ಸಿಬ್ಬಂದಿಗಳು ಬದುಕುಳಿದದ್ದೇ ರೋಚಕ

    ಪ್ಯಾರಾಚೂಟ್‌ನಿಂದ​ ಪೈಲಟ್​ಗಳು ಪಾರು

ಚಾಮರಾಜನಗರ: ತರಬೇತಿ ವೇಳೆ ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಚಾಮರಾಜನಗರ ತಾಲೂಕು ಎಚ್. ಮೂಕಳ್ಳಿ ಬಳಿ ನಡೆದಿದೆ. ವಿಮಾನದೊಳಗೆ ಇಬ್ಬರು ಪೈಲಟ್​ಗಳಿದ್ದು, ವಿಮಾನದಲ್ಲಿ ಸಮಸ್ಯೆ ಕಂಡುಬಂದಂತೆ ಆಗಸದಿಂದ ಹಾರಿದ್ದಾರೆ.  ಪ್ಯಾರಾಚೂಟ್​ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಆಗಸದಲ್ಲಿ ತರಬೇತಿ ನೀಡುತ್ತಿದ್ದ ವೇಳೆ ವಿಮಾನದಲ್ಲಿ ದೋಷ ಕಂಡು ಬಂದಿದೆ. ಪುರುಷ ಪೈಲಟ್​ ಮಹಿಳೆಗೆ ಪೈಲಟ್​ಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಆಗಸದಿಂದ ವಿಮಾನ ಪತನಗೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಪುರುಷ ಮತ್ತು ಮಹಿಳಾ ತರಬೇತಿ ಪೈಲಟ್​ ಕೂಡಲೇ ಪ್ಯಾರಚೂಟ್​ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಅತ್ತ ನೆಲಕ್ಕೆ ಬಿದ್ದ ವಿಮಾನ ನುಜ್ಜು ನುಜ್ಜಾಗಿ ತುಂಡರಿಸಿ ಬಿದ್ದಿವೆ. ಪೈಟಲ್​​ಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಸಂತೆಮರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ತರಬೇತಿ ವೇಳೆ ವಿಮಾನ ಪತನ.. ಪ್ಯಾರಾಚ್ಯೂಟ್​ ಮೂಲಕ ಜೀವ ಉಳಿಸಿಕೊಂಡ ಪೈಲಟ್​ಗಳು

https://newsfirstlive.com/wp-content/uploads/2023/06/Flight-1.jpg

Load More