newsfirstkannada.com

×

ರಸ್ತೆ ಗುಂಡಿಯಲ್ಲಿ ಹೆಂಡತಿ ಬಿದ್ದಿದ್ದಕ್ಕೆ ಗಂಡನ ಮೇಲೆ ಕೇಸ್‌ ಹಾಕಿದ ಪೊಲೀಸರು; ಆಮೇಲೇನಾಯ್ತು?

Share :

Published September 24, 2024 at 11:06pm

Update September 24, 2024 at 11:15pm

    ಏನೂ ತಪ್ಪೇ ಮಾಡದ ಗಂಡನ ಮೇಲೆ ಕೇಸ್ ಹಾಕಿದ ಪೊಲೀಸರು

    ರಸ್ತೆ ಗುಂಡಿಯಲ್ಲಿ ಬಿದ್ದ ಪತ್ನಿ ಜೀವನ್ಮರಣದ ಮಧ್ಯೆ ಹೋರಾಟ

    ಗಂಡನ ಮೇಲೆ FIR ಹಾಕಿದ ಪೊಲೀಸರ ಕ್ರಮಕ್ಕೆ ವ್ಯಾಪಕ ಖಂಡನೆ

ಇಂದೋರ್: ಗುಂಡಿಯ ಗಂಡಾಂತರ ವಾಹನ ಸವಾರರಿಗೆ ಎಂದಿಗೂ ತಪ್ಪೋದಿಲ್ಲ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇಂತಹದೇ ಪರಿಸ್ಥಿತಿ ಇದೆ. ಮನೆಯಿಂದ ಹೊರಟವರು ಗುಂಡಿಯ ರಸ್ತೆಗಿಳಿದ್ರೆ ವಾಪಸ್ ಮನೆಗೆ ಹೋಗೋದು ಅನುಮಾನ. ರಸ್ತೆ ಗುಂಡಿಗಳು ವೀಸಾ, ಪಾಸ್‌ಪೋರ್ಟ್‌ ಇಲ್ಲದೇ ಸೀದಾ ಯಮಲೋಕಕ್ಕೆ ಪಾರ್ಸಲ್ ಮಾಡಿಬಿಡುತ್ತವೆ. ಇಡೀ ದೇಶದಲ್ಲಿ ರಸ್ತೆ ಗುಂಡಿಗಳಿಗೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ರೋಡಲಿ ಸಾಗುತ ಹೊಂಡವ ದಾಟುತ.. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಖ್ಯಾತ ಉದ್ಯಮಿಗಳ ವ್ಯಂಗ್ಯ! VIDEO 

ಮಧ್ಯಪ್ರದೇಶದಲ್ಲೂ ಇಂತಹದೇ ದಾರುಣ ಘಟನೆಯೊಂದು ನಡೆದಿದೆ. ರವಿ ಗೌರ್ ಎಂಬ ವ್ಯಕ್ತಿ ತನ್ನ ಹೆಂಡತಿ ಶಾನು ಗೌರ್‌ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ. ದಾರಿ ಮಧ್ಯೆ ರಸ್ತೆ ಗುಂಡಿಗೆ ಬಿದ್ದ ಈತನ ಪತ್ನಿಗೆ ಬಲವಾದ ಪೆಟ್ಟಾಗಿದೆ. ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಶಾನು ಗೌರ್ ಗಾಯಗೊಂಡಿದ್ರೆ ಆತನ ಪತ್ನಿ ಕೋಮಾಕ್ಕೆ ಹೋಗಿದ್ದಾರೆ.

ರವಿ ಗೌರ್ ಅವರ ಪತ್ನಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದರೆ ಇಂದೋರ್ ಪೊಲೀಸರ ನಡೆ ಅಚ್ಚರಿಗೆ ಕಾರಣವಾಗಿದೆ. ಈ ಗುಂಡಿಯ ಪ್ರಕರಣ ದಾಖಲಿಸಿರೋ ಇಂದೋರ್ ಪೊಲೀಸರು ಹೆಂಡತಿ ಗಂಭೀರ ಗಾಯಗೊಂಡಿದ್ದಕ್ಕೆ ರವಿ ಗೌರ್ ಮೇಲೆ ಕೇಸ್ ದಾಖಲಿಸಿದ್ದಾರೆ. ವೇಗವಾಗಿ ವಾಹನ ಚಲಾಯಿಸಿದ ತಪ್ಪಿಗೆ ಗಂಡನ ಮೇಲೆ FIR ಹಾಕಿದ್ದಾರೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ರಸ್ತೆ ಗುಂಡಿಗಳೇ; ಬೆಂಗಳೂರಿಗರು ಓದಲೇಬೇಕಾದ ಸ್ಟೋರಿ ಇದು..! 

ಕಳೆದ ಸೆಪ್ಟೆಂಬರ್ 14ರಂದು ಇಂದೋರ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ದೊಡ್ಡ ರಸ್ತೆ ಗುಂಡಿಯ ಅವಾಂತರದಿಂದ 23 ವರ್ಷದ ಮಹಿಳೆ ಕೋಮಾದಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಗಂಡನ ಮೇಲೆ ಪೊಲೀಸರು ಕೇಸ್ ಹಾಕಿ ನಗೆಪಾಟಲಿಗೀಡಾಗಿದ್ದಾರೆ.

ಇಂದೋರ್ ಪೊಲೀಸರ ಈ ಕೇಸ್ ಸಾಕಷ್ಟು ಚರ್ಚೆಗೀಡಾಗಿದ್ದು ಕಾಂಗ್ರೆಸ್ ಪಕ್ಷದ ನಾಯಕರು ಇದೆಂಥಾ ನ್ಯಾಯ. ತಪ್ಪೇ ಮಾಡದ ಗಂಡನ ಮೇಲೆ ಕೇಸ್ ಹಾಕಿದ ಪೊಲೀಸರ ಮೇಲೆ ಕರ್ತವ್ಯ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. ನಗರ ಪಾಲಿಕೆಯ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಅಪಘಾತವಾದ ರಸ್ತೆ ಕಾಮಗಾರಿ ಕೈಗೊಂಡ ಏಜೆನ್ಸಿಯ ಮಾಹಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ದುರಸ್ಥಿಯಲ್ಲಿ ನಿರ್ಲಕ್ಷ್ಯ ತೋರಿರುವ ಪಾಲಿಕೆ ಹಾಗೂ ಏಜೆನ್ಸಿಯ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಗುಂಡಿಯಲ್ಲಿ ಹೆಂಡತಿ ಬಿದ್ದಿದ್ದಕ್ಕೆ ಗಂಡನ ಮೇಲೆ ಕೇಸ್‌ ಹಾಕಿದ ಪೊಲೀಸರು; ಆಮೇಲೇನಾಯ್ತು?

https://newsfirstlive.com/wp-content/uploads/2024/09/Pathole-road-Accident-1.jpg

Load More