newsfirstkannada.com

BREAKING: ವಾಲ್ಮೀಕಿ ನಿಗಮದ ಹಗರಣಕ್ಕೆ ಮಹತ್ವದ ಸುಳಿವು.. ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ

Share :

Published July 10, 2024 at 2:41pm

  ನಾಗೇಂದ್ರ ಪಿ.ಎ ಹರೀಶ್‌ ಅವರ ಪಾತ್ರದ ಬಗ್ಗೆಯು ಸುಳಿವು

  ಹರೀಶ್ ಅಕೌಂಟ್‌ಗೆ ಎಂ.ಡಿ ಕಡೆಯಿಂದ ಹಣ ವರ್ಗಾವಣೆ

  ಸತತ 6 ಗಂಟೆಗಳಿಂದ ಮಾಜಿ ಸಚಿವ ನಾಗೇಂದ್ರ ವಿಚಾರಣೆ

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿ ಹಗರಣದ ತನಿಖೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಂದು ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದು, ಆರೋಪಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ 18ಕ್ಕೂ ಹೆಚ್ಚು ಕಡೆ ದಾಳಿ ಮಾಡಿರುವ ಇ.ಡಿ ಅಧಿಕಾರಿಗಳು, ಮಾಜಿ ಸಚಿವ ನಾಗೇಂದ್ರ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಇಷ್ಟೇ ಅಲ್ಲ ನಾಗೇಂದ್ರ ಅವರ ಪಿಎ ಹರೀಶ್ ಅವರನ್ನು ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಬಳಿಕ ಹರೀಶ್ ಅವರನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್‌.. ಮಾಜಿ ಸಚಿವ ನಾಗೇಂದ್ರಗೆ ‘ED’ ಲಾಕ್‌? ಏನಿದು ₹187 ಕೋಟಿ ಕಥೆ? 

ಹರೀಶ್ ಬಂಧನ ಯಾಕೆ? 
ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಪಿ.ಎ ಹರೀಶ್‌ ಅವರ ಪಾತ್ರದ ಬಗ್ಗೆಯು ಸುಳಿವು ಸಿಕ್ಕಿದೆ. ಹರೀಶ್ ಅವರ ಅಕೌಂಟ್‌ಗೆ ಎಂ.ಡಿ ಪದ್ಮನಾಭ ಕಡೆಯಿಂದ ಹಣ ವರ್ಗಾವಣೆ ಆಗಿದೆ. 25 ಲಕ್ಷ ರೂಪಾಯಿ ಹಣ ಬಂದಿರುವ ಹಿನ್ನೆಲೆಯಲ್ಲಿ ಹರೀಶ್ ಅವರನ್ನು ಬಂಧಿಸಲಾಗಿದೆ.

ಇದರ ಜೊತೆಗೆ ಹರೀಶ್ ಅವರು ಅವ್ಯವಹಾರದ ವೇಳೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ್ದಾರೆ. ಹೈದ್ರಾಬಾದ್ ಸತ್ಯನಾರಾಯಣ ವರ್ಮನಿಂದ ಬಂದ ಹಣ ಕೂಡ ಹರೀಶ್‌ಗೆ ಬಂದಿತ್ತು. ಏಪ್ರಿಲ್ ತಿಂಗಳ‌ 2ನೇ ವಾರದಲ್ಲಿ ಪದ್ಮನಾಭ ಅವರು 25 ಲಕ್ಷ ರೂಪಾಯಿ ಹಣ ನೀಡಿರುವುದಾಗಿ ಹೇಳಿದ್ದರು. ನಾಗೇಂದ್ರ ಅವರ ಪರವಾಗಿ ಹವಾಲಾ ಹಣ & ಚಿನ್ನದ ಬಿಸ್ಕೆಟ್ ಪಡೆದ ಆರೋಪ ಇವರ ಮೇಲಿದೆ.

ಹರೀಶ್ ಅವರ ಮೇಲೆ ಸಚಿವ ನಾಗೇಂದ್ರ ಪರ 50 ರಿಂದ 60 ಕೋಟಿ ವ್ಯವಹಾರ ನಡೆಸಿದ ಶಂಕೆ ಇದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಹರೀಶ್‌ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ನಾಗೇಂದ್ರ ಬಂಧನ ಸಾಧ್ಯತೆ
ಮಾಜಿ ಸಚಿವ ನಾಗೇಂದ್ರ ಅವರ ಪಿ.ಎ ಹರೀಶ್ ಬಂಧನ ಆದ ಬಳಿಕ ಈಗ ಯಾವುದೇ ಕ್ಷಣದಲ್ಲಾದರೂ ನಾಗೇಂದ್ರ ಅವರನ್ನೇ ಬಂಧಿಸುವ ಸಾಧ್ಯತೆ ಇದೆ. ಸೂಕ್ತ ಸಾಕ್ಷಿಗಳ ಸಮೇತ ಇಂದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾದ ಸಾಕ್ಷಿ ಪತ್ತೆ ಹಿನ್ನೆಲೆಯಲ್ಲಿ ಸದ್ಯ ವಶಕ್ಕೆ ಪಡೆಯಲಾಗಿದೆ. ಸತತ 6 ಗಂಟೆಗಳಿಂದ ಮಾಜಿ ಸಚಿವ ನಾಗೇಂದ್ರ ಅವರ ನಿರಂತರ ವಿಚಾರಣೆ ನಡೆದಿದೆ. ಇಂದು ಸಂಜೆಯ ವೇಳೆಗೆ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಾಲ್ಮೀಕಿ ನಿಗಮದ ಹಗರಣಕ್ಕೆ ಮಹತ್ವದ ಸುಳಿವು.. ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ

https://newsfirstlive.com/wp-content/uploads/2024/07/B-Nagendra-Arrest.jpg

Load More