newsfirstkannada.com

ಟೊಮ್ಯಾಟೋ ಆಯ್ತು ಇದೀಗ ಬೇಳೆ ಕಾಳುಗಳ ಬೆಲೆಯಲ್ಲಿ ಹೆಚ್ಚಳ! ಕೈ ಸುಡುತ್ತಪ್ಪ ರೇಟ್​ ಕೇಳಿದ್ರೆ..!

Share :

27-08-2023

    ಬೇಳೆ ಕಾಳುಗಳ ಬೆಲೆಯಲ್ಲೂ ದಿಢೀರ್​ ಏರಿಕೆ..!

    ಮಳೆ ಕೊರತೆ ದರ ಏರಿಕೆ ಬರೆಗೆ ಮೂಲ ಕಾರಣ

    ಕಬ್ಬು ಬೆಳೆ ಕುಂಠಿತ.. ಸಕ್ಕರೆ ಪ್ರಿಯರ ಬಾಯಿಗೆ ಕಹಿ

ದುಬಾರಿ ದುನಿಯಾದಲ್ಲಿ ದಿನಕ್ಕೊಂದು ಬೆಲೆ ಹೆಚ್ಚಳವಾಗ್ತಿದೆ. ಟೊಮ್ಯಟೋ, ತರಕಾರಿ, ಹೂವು ಹಣ್ಣು ಎಲ್ಲಾ ಮುಗೀತಿದ್ದಂತೆ ಇದೀಗ ಜನರಿಗೆ ಶಾಕ್​ ಕೊಟ್ಟಿರೋದು ಬೇಳೆ ಕಾಳುಗಳ ಬೆಲೆ. ಜನರಿಗೆ ತೀರಾ ಅಗತ್ಯವಿರೋ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಕ್ಕರೆ ಪ್ರಿಯರಿಗೆ ಕಹಿ ಸುದ್ದಿ..!

ರಾಜ್ಯದಲ್ಲಿ ಹೆಚ್ಚಿದ ಮಳೆ ಕೊರತೆಯಿಂದಾಗಿ ಕಬ್ಬು ಬೆಳೆ ಕುಂಠಿತವಾಗಿದೆ. ಇದರ ಎಫೆಕ್ಟ್​​ ಬಳಗ್ಗೆ ಎದ್ದ ತಕ್ಷಣ ಬೆಡ್​ ಕಾಫಿ ಕುಡಿಯೋರಿಗೆ ಸಂಕಷ್ಟ ತಂದಿದ್ದು..ಕೆ ಜಿ ಗೆ 40 ರುಪಾಯಿ ಇದ್ದ ಸಕ್ಕರೆ ಬೆಲೆ ಏಕಾ ಏಕಿ 10 ರೂಪಾಯಿ ಹೆಚ್ಚಳವಾಗಿದೆ.

ಬೇಳೆ ಕಾಳುಗಳ ಬೆಲೆಯಲ್ಲೂ ದಿಢೀರ್​ ಏರಿಕೆ..!

ಇನ್ನು ಬೇಳೆಕಾಳುಗಳು ನಾವೇನು ಕಮ್ಮಿ ಇಲ್ಲ ಅನ್ನೋ ಹಾಗಿ ಬೆಲೆ ಏರಿಕೆ ಮಾಡಿಕೊಂಡಿವೆ. ಇದಿಷ್ಟೇ ಅಲ್ಲ ಮತ್ತಷ್ಟು ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗಿದ್ದು.. ಅವು ಯಾವುದು..? ಅದರ ಬೆಲೆ ಎಷ್ಟು ಅನ್ನೋದನ್ನ ನೋಡೋಣ ಬನ್ನಿ

ದುಬಾರಿ ದುನಿಯಾ..!

ಹೆಸರುಕಾಳು ಈ ಮೊದಲು 100 ರೂಪಾಯಿ ಇತ್ತು. ಆದ್ರೆ ಈಗ 30 ರುಪಾಯಿ ಹೆಚ್ಚಳವಾಗಿದ್ದು ಸದ್ಯದ ಬೆಲೆ 130 ರೂಪಾಯಿ ಆಗಿದೆ. ಇನ್ನು ತೊಗರಿ ಬೇಳೆ ಹಿಂದೆ 90 ರೂಪಾಯಿ ಇದ್ದಿದ್ದು, ಈಗ ಬರೋಬ್ಬರಿ 163 ರೂಪಾಯಿ ಆಗಿದೆ. ಹೆಸರು ಬೇಳೆ 95 ರೂಪಾಯಿ ಇದ್ದಿದ್ದು, ಈಗ 110ರೂಪಾಯಿ ಆಗ್ಬಿಟ್ಟಿದೆ. ಇನ್ನು ಬಟಾಣಿ 60 ರೂಪಾಯಿ ಇದ್ದಿದ್ದು 90 ರೂಪಾಯಿ ಆಗಿದೆ. ಕಾಬುಲ್ ಕಡಲೆ 120 ರೂಪಾಯಿ ಇದ್ದಿದ್ದು, 160 ರೂಪಾಯಿ ಆದ್ರೆ ಉದ್ದಿನ ಬೇಳೆ 100 ರೂಪಾಯಿ ಇದ್ದಿದ್ದು, 110 ರೂಪಾಯಿ ಆಗಿದೆ. ಇನ್ನು ಗೋಧಿ ಕೆಜಿಗೆ 25ರೂಪಾಯಿ ಇದ್ದಿದ್ದು ಈಗ 32 ರೂಪಾಯಿ ಆಗಿದೆ

ಸಡನ್​ ಆಗಿ ದಿನಸಿ ಬೆಲೆ ಏರಿಕೆ ಬಗ್ಗೆ ಮಾತನಾಡಿರೋ ದಿನಸಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ಮಳೆ ಕೊರತೆಯಾಗಿರೋದ್ರಿಂದ ಬೆಲೆ ಏರಿಕೆ ಆಗಿದೆ ಅಂದ್ರೆ, ಮಾರುಕಟ್ಟೆಯಲ್ಲೇ ಹೆಚ್ಚಿನ ಬೆಲೆಗೆ ಸಿಗುತ್ತಿದ್ದು, ನಾವು ತಂದು ಏನು ಮಾರಾಟ ಮಾಡಬೇಕು ಅಂತಿದ್ದಾರೆ ದಿನಸಿ ವ್ಯಾಪಾರಿಗಳು.

ಮಳೆ ಹೆಚ್ಚಾದ ಎಫೆಕ್ಟ್​​ನಿಂದ ತರಕಾರಿ ಬೆಲೆ ಹೆಚ್ಚಾಗಿತ್ತು.. ಈಗ ಬೆಲೆ ಕಡಿಮೆಯಾಯ್ತು ಅಂತಿರುವಾಗ್ಲೇ.. ಮಳೆ ಕೊರತೆಯಿಂದ ದಿನಸಿ ಬೆಲೆ ಹೆಚ್ಚಳವಾಗಿದೆ ಅನ್ನೋ ಕಾರಣ ಹೊರಬಂದಿದೆ. ಅದೇನೇ ಇರ್ಲಿ ಮಧ್ಯಮ ವರ್ಗದ ಜನರ ಸಂಬಳ ಹೆಚ್ಚಾಗುತ್ತೋ ಇಲ್ವೋ..ತಿನ್ನೋ ಧವಸ ಧಾನ್ಯಗಳ ಬೆಲೆ ಆತನಿಗೆ ಗಾಯದ ಮೇಲೆ ಬರೆ ಎಳೆಯುವಂತಾಗಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಆಯ್ತು ಇದೀಗ ಬೇಳೆ ಕಾಳುಗಳ ಬೆಲೆಯಲ್ಲಿ ಹೆಚ್ಚಳ! ಕೈ ಸುಡುತ್ತಪ್ಪ ರೇಟ್​ ಕೇಳಿದ್ರೆ..!

https://newsfirstlive.com/wp-content/uploads/2023/08/Tomatto.jpg

Load More