ಸಂಗೊಳ್ಳಿ ರಾಯಣ್ಣ ಫೈ ಓವರ್ ಮೇಲೆ ನಡೆದ ಘಟನೆ
ಸ್ಕೂಟಿ ಚಾಲಕನಿಗೆ ಸರಿಯಾಗಿ ಥಳಿಸಿದ ಪ್ರತಿಭಟನಾಕಾರರು
Holiday Inn ಹೋಟೆಲ್ಗೆ ನುಗ್ಗಿ ಗಲಾಟೆ ಮಾಡಲು ಯತ್ನ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟವಿಂದು ಬೆಂಗಳೂರು ಬಂದ್ಗೆ ಕರೆ ನೀಡಿದೆ. ಅದರಂತೆಗೆ ನಗರದಾದ್ಯಂತ ಪ್ರತಿಭಟನಕಾರರು ಪ್ರತಿಭಟಿಸುತ್ತಿದ್ದು, ಕೆಲವೆಡೆ ಪ್ರತಿಭಟನಕಾರರು ರಸ್ತೆ ಸಂಚಾರಿಗಳ ಮೇಲೆ ದರ್ಪ ತೋರಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಫೈ ಓವರ್ ಮೇಲೆ ಚಲಿಸುತ್ತಿದ್ದ ರ್ಯಾಪಿಡೋ ಸವಾರನಿಗೆ ಪ್ರತಿಭಟನಕಾರರು ಥಳಿಸಿದ್ದಾರೆ. ರ್ಯಾಪಿಡೋ ಹಿಂಭಾಗದಲ್ಲಿ ಕುಳಿತ ಪ್ರಯಾಣಿಕರ ಮೇಲೂ ಪ್ರತಿಭಟನಕಾರರು ಕೈ ಮಿಲಾಯಿಸಿದ್ದಾರೆ.
ವಾಹನದಲ್ಲಿ ಬಾಡಿಗೆ ಹೋಗ್ತಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ…ಗಾಂಧಿನಗರದ ಮೌರ್ಯ ಸರ್ಕಲ್ ಬಳಿ ನಡೆದಿದೆ. ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ಡೆಸಲಾಗಿದೆ.
ಇನ್ನು ಸ್ಕೂಟಿಯೊಂದನ್ನು ರಸ್ತೆ ಬದಿ ಅಡ್ಡಲಾಗಿ ಕಟ್ಟಿದ ಸಿಮೆಂಟ್ ಕಾಪೌಂಡ್ ಬಳಿ ತೆಗೆದುಕೊಂಡು ಹೋಗಿ ಗುದ್ದಿಸಿದ್ದಾರೆ.
ಸದ್ಯ ಆನಂದ್ ರಾವ್ ಸರ್ಕಲ್ ಬಳಿ ಖಾಸಗಿ ಸಾರಿಗೆ ಒಕ್ಕೂಟಗಳ ರ್ಯಾಲಿ ಸಾಗುತ್ತಿದೆ. ಸರ್ಕಾರ ಮುಂದೆ ಹಲವು ಬೇಡಿಕೆಗಳನ್ನು ಹೊರಹಾಕಿದ ಪ್ರತಿಭಟನೆಕಾರರು ರಸ್ತೆಯುದ್ದಕ್ಕೂ ಚಲಿಸುತ್ತಿದ್ದಾರೆ. ಕೆಲವೆಡೆ ರಸ್ತೆ ನಡುವೆ ಚಲಿಸುತ್ತಿದ್ದ ವಾಹನಗಳನ್ನು ತಡೆದು ಸವಾರರ ಮತ್ತು ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಘಟನೆಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.
ಇದಲ್ಲದೆ, ಪ್ರತಿಭಟನಾಕಾರರು ಮಾರ್ಗ ಮಧ್ಯೆ ಸಿಕ್ಕಿದ ಖಾಸಗಿ ಹೋಟೆಲ್ Holiday Inn ಗೆ ನುಗ್ಗಿದ್ದಾರೆ. ಈ ವೇಳೆ ಕ್ಯಾಬ್ ಇದ್ಯಾ ಅಂತ ಒಳ ನುಗ್ಗಿ ಚೆಕ್ ಮಾಡಿ ಗಲಾಟೆ ಮಾಡಲು ಯತ್ನಿಸಿದ್ದಾರೆ. ಪ್ರತಿಭಟನಾಕಾರರ ಮಧ್ಯೆ ಪ್ರವೇಶಿಸಿದ ಪೊಲೀಸರು, ರಸ್ತೆಯಲ್ಲಿ ಮಾತ್ರ ಪ್ರತಿಭಟನೆ ಮಾಡಿ. ಈ ರೀತಿ ಸಾರ್ವಜನಿಕ ಜೀವನಕ್ಕೆ ತೊಂದರೆ ಕೊಡಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ