newsfirstkannada.com

ಬೆಂಗಳೂರು ಹೋಟೆಲ್‌ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಕಾಫಿ, ಟೀ, ತಿಂಡಿ, ಊಟದ ರೇಟ್ ಸಿಕ್ಕಾಪಟ್ಟೆ ಏರಿಕೆ ಸಾಧ್ಯತೆ

Share :

15-07-2023

    ಮಸಾಲೆ ದೋಸೆ, ಇಡ್ಲಿ ವಡೆ, ಬಿಸಿ ಬೇಳೆಬಾತ್ ಎಷ್ಟಾಗುತ್ತೆ?

    ಕಾಫಿ, ಟೀ, ಊಟದ ದರ ಶೇಕಡಾ 10ರಷ್ಟು ಏರಿಕೆ ಗ್ಯಾರಂಟಿ

    ಡೈಲಿ ಹೋಟೆಲ್ ಮೇಲೆ ಡಿಪೆಂಡ್ ಆಗಿರೋರಿಗೆ ಬಿಗ್ ಶಾಕ್!

ಬೆಂಗಳೂರು: ಸಿಲಿಕಾನ್ ಸಿಟಿಯ ಸಾಕಷ್ಟು ಮಂದಿ ಪ್ರತಿದಿನ ಹೋಟೆಲ್‌ ತಿಂಡಿ, ಊಟದ ಮೇಲೆ ಅವಲಂಬಿತರಾಗಿದ್ದಾರೆ. ಆಫೀಸ್‌ಗೆ ಹೋಗೋರು, ವ್ಯಾಪಾರಸ್ಥರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೋಟೆಲ್‌ ಊಟ, ತಿಂಡಿ ಬೇಕೇ ಬೇಕು. ಹೀಗೆ ಡೈಲಿ ಹೋಟೆಲ್ ಮೇಲೆ ಡಿಪೆಂಡ್ ಆಗಿರೋರಿಗೆ ಶಾಕಿಂಗ್ ನ್ಯೂಸ್ ಇದಾಗಿದೆ. ಶೀಘ್ರದಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಹೊಟೇಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ. ಬೆಂಗಳೂರು ಜನರಿಗೆ ಬೆಲೆ ಏರಿಕೆಯ ಭೂತ ಕಾಡೋ ಸಾಧ್ಯತೆ ಹೆಚ್ಚಾಗಿದೆ.

ಒಂದು ಕಡೆ ಸರ್ಕಾರದ ಮಟ್ಟದಲ್ಲಿ ನಂದಿನಿ ಹಾಲಿನ ದರ ಏರಿಕೆಯ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನೀರಿನ ದರವೂ ಏರಿಕೆ ಆಗುವ ಸಾಧ್ಯತೆ ಇದೆ. ಇದಕ್ಕಿಂತಲೂ ಮುಖ್ಯವಾಗಿ ಮಾರುಕಟ್ಟೆಯಲ್ಲಿ ತರಾಕಾರಿ ರೇಟ್ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಹೀಗಾಗಿ ನಮಗೆ ಬೆಲೆ ಏರಿಕೆ ಅನಿವಾರ್ಯವಾಗಿದೆ ಅಂತಾ ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಇನ್ಮುಂದೆ ಎಲ್ಲಾ ಕಾಫಿ, ಟೀ, ತಿಂಡಿಗೂ ಶೇಕಡಾ 10ರಷ್ಟು ದರ ಏರಿಕೆಗೆ ಬೆಂಗಳೂರು ಹೋಟೆಲ್ ಸಂಘ ಮುಂದಾಗಿದೆ. ಈಗಾಗಲೇ ಕೆಲವು ಕಡೆ ಹೋಟೆಲ್ ಊಟ, ತಿಂಡಿಯ ದರ ಏರಿಕೆ ಆಗಿದ್ದು ಬೆಲೆ ಏರಿಕೆಯ ಬಿಸಿ ಸಿಲಿಕಾನ್ ಸಿಟಿ ಜನರಿಗೆ ತಟ್ಟಿದೆ.
ಬೆಂಗಳೂರು ಹೋಟೆಲ್‌ನಲ್ಲಿ ಯಾವುದಕ್ಕೆ ಹಿಂದಿನ ದರ ಎಷ್ಟು, ದರ ಏರಿಕೆ ಬಳಿಕ ಊಟ, ತಿಂಡಿಯ ದರ ಎಷ್ಟು ಏರಿಕೆಯಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಯಾವುದಕ್ಕೆ ಎಷ್ಟು ದರ?

ಮೆನು           ಹಿಂದಿನ ದರ      ದರ ಏರಿಕೆ ಬಳಿಕ

ಮಸಾಲೆ ದೋಸೆ       50ರೂ.         55 -60, 70ರೂ.
ಉದ್ದಿನವಡೆ      10-15ರೂ.              20-30ರೂ.
ಪೂರಿ                     40 ರೂ.              45-50 ರೂ.
ಪುಳಿಯೊಗರೆ         35 ರೂ.              40-45 ರೂ.
ಇಡ್ಲಿ ವಡೆ                30 ರೂಪಾಯಿ       50 ರೂಪಾಯಿ
ಬಿಸಿ ಬೇಳೆಬಾತ್       30 ರೂ.               35- 40ರೂ.
ರೈಸ್ ಬಾತ್              30 ರೂ.               35-40 ರೂ.
ಟೀ, ಕಾಫಿ                 10. ರೂ.              12- 15ರೂ.
ಅನ್ನ ಸಾಂಬಾರ್         30 ರೂ.               35-40 ರೂ.
ಊಟ                       50 ರೂ.               60-70 ರೂ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಂಗಳೂರು ಹೋಟೆಲ್‌ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಕಾಫಿ, ಟೀ, ತಿಂಡಿ, ಊಟದ ರೇಟ್ ಸಿಕ್ಕಾಪಟ್ಟೆ ಏರಿಕೆ ಸಾಧ್ಯತೆ

https://newsfirstlive.com/wp-content/uploads/2023/07/Bangalore-Hotel-Food.jpg

Load More