ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಸ್ ರೋರಿಂಗ್
ಬೆಸ್ಟ್ ಬೌಲಿಂಗ್ ಅಟ್ಯಾಕಿಂಗ್ಗೆ ಎದುರಾಳಿ ಥಂಡಾ
ವಿಕೆಟ್ ಹಂಟ್ ಮಾಡೋದ್ರಲ್ಲಿ ನಮ್ಮವರೇ ಬಾಸ್
ಪ್ರಸಕ್ತ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಹೊರತಪಡಿಸಿ ಎಲ್ಲಾ ಟೀಮ್ಸ್ ಸೋಲಿನ ರುಚಿ ಕಂಡಿವೆ. ಬಟ್ ಭಾರತ ಮಾತ್ರ ಒಂದೂ ಸೋಲನ್ನೇ ಕಂಡಿಲ್ಲ. ವಿಕ್ಟರಿ ಅಲೆಯಲ್ಲಿ ತೇಲಾಡ್ತಿದೆ. ರೋಹಿತ್ ಪಡೆಯ ಈ ಅಮೋಘ ಸಾಧನೆಗೆ ಕಾರಣ ಬೌಲರ್ಸ್.
‘ನಾವು ಬೆಸ್ಟ್ ಬೌಲಿಂಗ್ ಅಟ್ಯಾಕ್ ಹೊಂದಿದ್ದೇವೆ’
ನಮ್ಮ ಬೌಲಿಂಗ್ ಅಟ್ಯಾಕ್ ಉತ್ತಮವಾಗಿದೆ. ಸಮತೋಲನದಿಂದ ಕೂಡಿದೆ ಕೂಡ. ಉತ್ತಮ ಸ್ಪಿನ್ನರ್ಗಳಿದ್ದಾರೆ. ಈ ಕಂಡೀಷನ್ನಲ್ಲಿ ಆಡಿದ ಅನುಭವಿ ವೇಗಿಗಳಿದ್ದಾರೆ. ಆಯ್ಕೆಗಳಿಗೇನು ಕೊರತೆಯಿಲ್ಲ. ಸಾಕಷ್ಟು ಅನುಭವ ಹೊಂದಿದ್ದಾರೆ. ಬ್ಯಾಟ್ಸ್ಮನ್ಗಳು ಸ್ಕೋರ್ ಗಳಿಸೋದ್ದಷ್ಟೇ ಬೇಕಿದೆ. ಬೌಲರ್ಸ್ ಅವರವರ ಕರ್ತವ್ಯವನ್ನ ನಿಭಾಯಿಸಬಲ್ಲರು-ರೋಹಿತ್ ಶರ್ಮಾ, ಕ್ಯಾಪ್ಟನ್
ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ ಮೇಲಿನ ಮಾತು ಹಂಡ್ರೆಂಡ್ ಪರ್ಸಂಟ್ ಸತ್ಯ. ಉತ್ಪ್ರೇಕ್ಷದ ಮಾತುಗಳಲ್ಲ. ಹಿಟ್ಮ್ಯಾನ್ ಹೇಳಿದಂತೆ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ಅತ್ಯಾದ್ಭುತವಾಗಿದೆ. ಪೇಸರ್ ಆದ್ರೂ ಸೈ, ಸ್ಪಿನ್ನರ್ ಆದ್ರೂ ಸೈ ಇಂಪ್ರೆಸ್ಸಿವ್ ಸ್ಪೆಲ್ ಮೂಲಕ ಎದುರಾಳಿ ತಂಡವನ್ನ ಕಂಗೆಡಿಸಿದ್ದಾರೆ.
ವಿಶ್ವಕಪ್ನಲ್ಲಿ ಇಂಡಿಯನ್ ಬೌಲರ್ಸ್ ರೋರಿಂಗ್
2023ನೇ ವಿಶ್ವಕಪ್ ಭಾರತಕ್ಕೆ ಡ್ರೀಮ್ ವಿಶ್ವಕಪ್ ಅಂದ್ರೂ ತಪ್ಪಲ್ಲ. ಯಾಕಂದ್ರೆ ಎಲ್ಲಾ ವಿಭಾಗದಲ್ಲಿ ಪರ್ಫೆಕ್ಷನ್ ಆಟವಾಡ್ತಿದೆ. ಯಾವ ಡಿಪಾರ್ಟ್ಮೆಂಟ್ ಮೇಲೂ ಬೊಟ್ಟು ಮಾಡುವ ಹಾಗಿಲ್ಲ. ಆದ್ರಲ್ಲೂ ಬೌಲರ್ಸ್ ಅಂತೂ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಭಾರತ ತಂಡ ಬರೀ ಪಾಯಿಂಟ್ಸ್ ಟೇಬಲ್ನಲ್ಲಷ್ಟೆ ಟಾಪರ್ ಅನ್ನಿಸಿಕೊಂಡಿಲ್ಲ. ಬದಲಿಗೆ ವಿಕೆಟ್ ಬೇಟೆಯಾಡೋದ್ರಲ್ಲಿ ಕೂಡ ಇಂಡಿಯನ್ ಬೌಲರ್ಸ್ ಮುಂಚೂಣಿಯಲ್ಲಿದ್ದಾರೆ.
ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ ಪಡೆದ ತಂಡಗಳು
ಪ್ರಸಕ್ತ ವಿಶ್ವಕಪ್ನಲ್ಲಿ ಭಾರತ ತಂಡದ ಬೌಲರ್ಸ್ ಆಡಿದ 7 ಪಂದ್ಯಗಳಿಂದ 62 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಕಿವೀಸ್ ತಂಡ ಅಷ್ಟೇ ಪಂದ್ಯಗಳಿಂದ 54 ವಿಕೆಟ್ ಕಬಳಿಸಿದೆ. ದಕ್ಷಿಣ ಆಫ್ರಿಕಾ 7 ಪಂದ್ಯವಾಡಿ 51 ವಿಕೆಟ್ ಬೇಟೆಯಾಡಿದೆ. ಆಸ್ಟ್ರೇಲಿಯಾ ಆಡಿದ 6 ಪಂದ್ಯಗಳಿಂದ 43 ವಿಕೆಟ್ ಪಡೆದ್ರೆ ಪಾಕಿಸ್ತಾನ ತಂಡ 7 ಮ್ಯಾಚ್ನಿಂದ 35 ವಿಕೆಟ್ ಕಬಳಿಸಿ 5ನೇ ಸ್ಥಾನದಲ್ಲಿದೆ.
ಪೇಸರ್ಸ್ ಅಬ್ಬರದ ಮುಂದೆ ಮಂಕಾದ ಸ್ಪಿನ್ನರ್ಸ್
ಈ ವಿಶ್ವಕಪ್ನಲ್ಲಿ ಮಾರಕ ದಾಳಿ ನಡೆಸ್ತಿರೋ ಇಂಡಿಯನ್ ಬೌಲರ್ಸ್ ಎದುರಾಳಿ ತಂಡಗಳನ್ನು ಹಿಂದಿಕ್ಕಿದ್ದಾರೆ. ಅಚ್ಚರಿ ಏನಂದ್ರೆ ಹೇಳಿಕೇಳಿ ಭಾರತ ಸ್ಪಿನ್ ತವರೂರು. ಇಲ್ಲಿ ಸದಾ ಸ್ಪಿನ್ನರ್ಸ್ ದರ್ಬಾರ್ ಹೆಚ್ಚಿರುತ್ತೆ. ಈ ವಿಶ್ವಕಪ್ನಲ್ಲಿ ಅದು ಉಲ್ಟಾ ಆಗಿದೆ. ವೇಗಿಗಳ ಘರ್ಜನೆ ಮುಂದೆ ಸ್ಪಿನ್ನರ್ಸ್ ಮಂಕಾಗಿದ್ದಾರೆ.
ಭಾರತ ಪರ ಹೆಚ್ಚು ವಿಕೆಟ್ ಪಡೆದೋಱರು..?
ಟೀಮ್ ಇಂಡಿಯಾ ಪರ ವೇಗಿಗಳಾದ ಶಮಿ, ಬೂಮ್ರಾ, ಸಿರಾಜ್ 43 ವಿಕೆಟ್ ಉರುಳಿಸಿದ್ರೆ, ಸ್ಪಿನ್ನರ್ಗಳಾದ ಜಡೇಜಾ-ಕುಲ್ದೀಪ್ 19 ವಿಕೆಟ್ ಉರುಳಿಸಿದ್ದಾರೆ. ವಿಶ್ವಕಪ್ನಂತ ಬಿಗ್ ಟೂರ್ನಮೆಂಟ್ನಲ್ಲಿ ಬೌಲರ್ಸ್ ತಂಡಕ್ಕೆ ಬಿಗ್ಗೆಸ್ಟ್ ಸ್ಟ್ರೆಂಥ್. ಈ ಸ್ಟ್ರೆಂಥೇ ರೋಹಿತ್ ಪಡೆಗೆ ಬಿಗ್ ಪ್ಲಸ್ ಪಾಯಿಂಟ್ ಆಗಿದೆ. ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಪೈಪೋಟಿಗೆ ಬಿದ್ದವರಂತೆ ವಿಕೆಟ್ ಬೇಟೆಯಾಡ್ತಿದ್ದಾರೆ. ಇಂಡಿಯನ್ ಬೌಲರ್ಗಳ ಕರಾಮತ್ತು ಟೂರ್ನಿಯುದ್ಧಕ್ಕೂ ಮುಂದಿವರಿದಿದ್ರೆ ಆದ್ರೆ 12 ವರ್ಷಗಳ ವಿಶ್ವಕಪ್ ವನವಾಸಕ್ಕೆ ಬ್ರೇಕ್ ಬೀಳೋದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್