newsfirstkannada.com

BREAKING: ಬದುಕಿದ 3 ವರ್ಷದ ಬಾಲಕ; ತೆರೆದ ಬೋರ್​ವೆಲ್​ಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯಚರಣೆ ಯಶಸ್ವಿ

Share :

23-07-2023

  ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಬಚಾವ್

  ಬೋರ್‌ವೆಲ್‌ ಒಳಗೆ ಸಿಲುಕಿ ಹೋರಾಡುತ್ತಿದ್ದ ಪುಟ್ಟ ಕಂದಮ್ಮ

  ತಾಯಿ ಹೊಲದ ಕೆಲಸಕ್ಕೆ ಹೋಗಿದ್ದಾಗ ಬಿದ್ದಿದ್ದ 3 ವರ್ಷದ ಮಗು

ಪಾಟ್ನಾ: 40 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಬದುಕಿ ಬಂದಿದ್ದಾನೆ. ಇಂದು ಬೆಳಗ್ಗೆಯಿಂದ ಬೋರ್‌ವೆಲ್‌ಗೆ ಬಿದ್ದ ಬಾಲಕನ ರಕ್ಷಣೆಗೆ NDRF ತಂಡ ಕಾರ್ಯಾಚರಣೆ ನಡೆಸಿತ್ತು. ಕೊನೆಗೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬೋರ್‌ವೆಲ್‌ಗೆ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಾವಿಗೆ ಬಿದ್ದಿದ್ದ ಮಗನನ್ನು ರಕ್ಷಿಸಲು ಕಣ್ಣೀರಿಡುತ್ತಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಬೋರ್‌ವೆಲ್‌ ಒಳಗೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಪುಟ್ಟ ಕಂದಮ್ಮ ಅತಿ ದೊಡ್ಡ ಅಪಾಯದಿಂದ ಪಾರಾಗಿದೆ.

ಇದನ್ನೂ ಓದಿ: Breaking: ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಮೇಲಕ್ಕೆತ್ತಲು ರಕ್ಷಣಾ ಕಾರ್ಯಚರಣೆ ಚುರುಕು

ಮೂರು ವರ್ಷದ ಈ ಬಾಲಕ ತಾಯಿ ಜೊತೆ ಹೊಲದ ಕೆಲಸಕ್ಕೆ ಹೋಗಿದ್ದ. ತಾಯಿ ಜೊತೆ ಹೊಲದಲ್ಲಿ ಆಟವಾಡುತ್ತಿದ್ದಾಗ 40 ಅಡಿ ಆಳದ ತೆರೆದ ಬಾವಿಯಲ್ಲಿ ಬಿದ್ದಿದ್ದ. ಮಗುವಿನ ರಕ್ಷಣೆಗೆ ತಾಯಿ ಗೋಳಾಡುತ್ತಿರುವಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಎನ್​ಡಿಆರ್​ಎಫ್​ ತಂಡ ಮಗುವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರಕ್ಷಣೆಗಿಳಿದ NDRF ಸಿಬ್ಬಂದಿ ಮಗು ಸುರಕ್ಷವಾಗಿರೋದನ್ನ ಖಚಿತಪಡಿಸಿಕೊಂಡಿದೆ. ಬಳಿಕ ನಿರಂತರ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ಬದುಕಿದ 3 ವರ್ಷದ ಬಾಲಕ; ತೆರೆದ ಬೋರ್​ವೆಲ್​ಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯಚರಣೆ ಯಶಸ್ವಿ

https://newsfirstlive.com/wp-content/uploads/2023/07/Bihar-Borewell-Rescue.jpg

Load More